ಏಳನೇ ಸ್ಥಾನಕ್ಕೇರಿದ ಅಶ್ವಿನ್

0
141
ದುಬೈ:

 ಟೀಂ ಇಂಡಿಯಾ ಆಪ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ನೂತನವಾಗಿ ಬಿಡುಗಡೆ ಮಾಡಿರುವ ಟೆಸ್ಟ್  ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಏಳನೇ ಸ್ಥಾನಕ್ಕೇರಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ.

ಇಂಗ್ಲೆೆಂಡ್ ಜಾನಿ ಬೈರ್‌ಸ್ಟೋ, ಬಾಂಗ್ಲಾದೇಶದ ಮೊಮಿನ್ಯೂಲ್ ಹಕ್ಯೂ ಹಾಗೂ ಪಾಕಿಸ್ತಾನದ ಯಾಸಿರ್ ಶಾ ಅವರು ಕಳೆದ ಒಂದು ವಾರದಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ಇದರ ಫಲವಾಗಿ ರ್ಯಾಂಕಿಂಗ್ ನಲ್ಲಿ ಪ್ರಬಲ  ಲಾಭ ಪಡೆದಿದ್ದಾರೆ. ಬೈರ್‌ಸ್ಟೋ 16, ಮೊಮಿನ್ಯೂಲ್ ಹಕ್ಯೂ 24 ಹಾಗೂ ಯಾಸಿರ್ ಶಾ 9ನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ಅಝಾರ್ ಅಲಿ ಮೂರು ಸ್ಥಾನಗಳು ಜಿಗಿಯುವ ಮೂಲಕ 12ನೇ ರ್ಯಾಂಕಿಂಗ್ ಪಡೆದಿದ್ದಾರೆ.