Tuesday, September 10, 2024

ದುಬೈಯಲ್ಲಿ ಕನ್ನಡಿಗರ ಕರ್ನಾಟಕ ಕ್ರಿಕೆಟ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ

ದುಬೈಯಲ್ಲಿ ನೆಲೆಸಿರುವ ಕರ್ನಾಟಕದ ಉದ್ಯೋಗಿಗಳು ಒಂದಾಗಿ ಕರ್ನಾಟಕ ಕ್ರಿಕೆಟ್ ಲೀಗ್ (ಕೆಸಿಎಲ್) ಆಯೋಜಿಸಿದ್ದಾರೆ. ದುಬೈನ ಗ್ಲಾಡಿಯೇಟರ್ಸ್ ಕ್ಲಬ್ ಈ ಲೀಗ್ ಆಯೋಜಿಸಿದೆ. ಒಟ್ಟು 12 ತಂಡಗಳು ಆರು ವಾರಗಳ ಕಾಲ ಟೂರ್ನಿಯನ್ನಾಡಲಿವೆ. ಪ್ರತಿ ಶುಕ್ರವಾರ ಪಂದ್ಯಗಳು ನಡೆಯುತ್ತಿವೆ. ಮಾರ್ಚ್ 22ರಿಂದ ಪಂದ್ಯಗಳು ಆರಂಭಗೊಂಡಿವೆ.

ಭಾಗವಹಿಸುತ್ತಿರುವ ತಂಡಗಳು
ಪ್ರಿನ್ಸ್ ಇಲೆವೆನ್ (ಪ್ರಿನ್ಸ್ ಗ್ರೂಪ್ ಆ್ ಕಂಪೆನಿ), ಎ3 ಕ್ರಿಕೆಟರ್ಸ್, ತುಂಬೆ ಚಾಲೆಂಜರ್ಸ್, ಬ್ಲೆಂಡರ್ಸ್ ಕ್ರಿಕೆಟ್ ಕ್ಲಬ್, ಟೀಮ್ ಸೋಲಾಸ್, ರೆಡ್ ವುಡ್, ಯುನೈಟೆಡ್ ಭಟ್ಕಳ್ ಕ್ರಿಕೆಟರ್ಸ್ (ಯುಬಿಸಿ), ಆಟೋ ಡೀಲ್ ಮೂಡಬಿದ್ರಿ (ಎಡಿ), ವೆಲ್ಸ್ ಗ್ಲಾಡಿಯೇಟರ್ಸ್, ಉಡುಪಿ ಕ್ರಿಕೆಟ್ ಕ್ಲಬ್ (ಗೊಬ್ಬು ನಮ್ಮನೆ), ನ್ಯೂ ಸ್ಟಾರ್ ಕಾರ್ಕಳ, ಅನಿಬ್.  ಕ್ಯಾಪ್ಟನ್ಸ್ ಹಾಗೂ ಮಾಲೀಕರ ಸಮಾವೇಶದಲ್ಲಿ ಕ್ಯಾಪ್ರೆಸ್ ವಾಚಸ್‌ನ ಅಧ್ಯಕ್ಷ ಹಾಗೂ ಸಿಇಒ ಎಂ.ಎಸ್. ಖಾನ್, ಕರ್ನಾಟಕ ಕನ್ನಡಿಗರ ಬಳಗ ಯುಎಇ ಸ್ಥಾಪಕ ಪೀಟರ್ ಜಾಯ್ಸನ್ ಹಾಗೂ ಫಾರ್ಚೂನ್ ಗ್ರೂಪ್ ಆಫ್  ಹೊಟೇಲ್ಸ್‌ನ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪಾಲ್ಗೊಂಡಿದ್ದರು.
ಪಂದ್ಯಗಳ ಫಲಿತಾಂಶ
ಹಮ್ರಿಯಾದಲ್ಲಿ ನಡೆದ ಆಟೋ ಡೀಲ್ ಮೂಡಬಿದ್ರಿ (ಎಂಸಿಸಿ) ಹಾಗೂ ನ್ಯೂ ಸ್ಟಾರ್ ಕಾರ್ಕಳ ನಡುವಿನ ಪಂದ್ಯದಲ್ಲಿ ಎಡಿ ಎಂಸಿಸಿ ತಂಡ 4 ವಿಕೆಟ್ ಅಂತರದಲ್ಲಿ ಜಯ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಎಡಿಎಂ ಎಂಸಿಸಿ ತಂಡ ಕಾರ್ಕಳ ತಂಡವನ್ನು 20 ಓವರ್‌ಗಳಲ್ಲಿ 164 ರನ್‌ಗೆ ಕಟ್ಟಿಹಾಕಿತು. ಕಾರ್ಕಳ ತಂಡದ ಪರ ಹಮ್ದಾನ್ (23) ಹಾಗೂ ರಮೀಜ್ (24) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಎಡಿಎಂ ಎಂಸಿಸಿ ಪರ ಪ್ರದೀಪ್ ಹಾಗೂ ಫಾಜಿಲ್ ತಲಾ 2 ವಿಕೆಟ್ ಗಳಿಸಿದರು. 165 ರನ್ ಬೆಂಬತ್ತಿದ ಎಡಿಎಂ ಎಸಿಸಿ ತಂಡ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ 4 ವಿಕೆಟ್ ಅಂತರದಲ್ಲಿ ಜಯ ಗಳಿಸಿತು. ಪ್ರದೀಪ್ ಅಜೇಯ 47 ಹಾಗೂ ಉಸ್ಮಾನ್ ಜಕಾರಿಯಾ ಅಜೇಯ 30 ರನ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಪ್ರದೀಪ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಅನಿಬ್ ಇಲೆವೆನ್ (236) ಹಾಗೂ ಎಬಿ ಕ್ರಿಕೆಟರ್ಸ್ (149) ನಡುವಿನ ಎರಡನೇ ಪಂದ್ಯದಲ್ಲಿ ಅನಿಬ್ ಇಲೆವೆನ್ 87 ರನ್‌ಗಳ ಅಂತರದಲ್ಲಿ ಜಯ ಗಳಿಸಿತು.  53 ರನ್ ಗಳಿಸಿದ ಅನಿಬ್ ತಂಡದ ರಾಜೇಶ್ ಕೂಟಕಲಾತಿಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ರೆಡ್‌ವುಡ್(206) ಹಾಗೂ ಫೊಸ್ಟರ್ ಪ್ರಿನ್ಸ್ ಇಲೆವೆನ್ (191) ತಂಡಗಳ ನಡುವಿನ ಪಂದ್ಯದಲ್ಲಿ ರೆಡ್ ವುಡ್ 15 ರನ್‌ಗಳ ಅಂತರದಲ್ಲಿ ಜಯ ಗಳಿಸಿತು. ಅಜೇಯ 71ರನ್ ಗಳಿಸಿದ ರೆಡ್ ವುಡ್ ನಿಶಾಂತ್ ವರ್ಮಾ ಪಂದ್ಯಶ್ರೇಷ್ಠರೆನಿಸಿದರು.
ತುಂಬೆ ಚಾಲೆಂಜರ್ಸ್ (127) ಹಾಗೂ ವೆಲ್ಸ್ ಗ್ಲಾಡಿಯೇಟರ್ಸ್ (131) ನಡುವಿನ ಪಂದ್ಯದಲ್ಲಿ ವೆಲ್ಸ್ ಗ್ಲಾಡಿಯೇಟರ್ಸ್ 5 ವಿಕೆಟ್‌ಗಳ ಜಯ ಗಳಿಸಿತು. ಗ್ಲಾಡಿಯೇಟರ್ಸ್‌ನ ಸಂದೀಪ್ ನಜ್ರತ್ 4 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಎರಡನೇ ವಾರದಲ್ಲಿ ನಡೆದ ಪಂದ್ಯದಲ್ಲಿ ನ್ಯೂ ಸ್ಟಾರ್ ಕಾರ್ಕಳ ತಂಡ ರೆಡ್‌ವುಡ್ ವಿರುದ್ಧ 3 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕಾರ್ಕಳ ತಂಡ ರೆಡ್‌ವುಡ್ ತಂಡವನ್ನು  121 ರನ್‌ಗೆ ಕಟ್ಟಿ ಹಾಕಿತು. ಇದಕ್ಕೆ ಉತ್ತರವಾಗಿ ಕಾರ್ಕಳ ತಂಡ 7 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. 21 ರನ್ ಹಾಗೂ 4 ವಿಕೆಟ್ ಗಳಿಸಿದ ಮೊಯ್ದೀನ್ ಪಂದ್ಯಶ್ರೇಷ್ಠರೆನಿಸಿದರು.
ಎರಡನೇ ವಾರದ ಎರಡನೇ ಪಂದ್ಯದಲ್ಲಿ ಟೀಮ್ ಸೋಲಾಸ್ (178) ವಿರುದ್ಧ ವೆಲ್ಸ್ ಗ್ಲಾಡಿಯೇಟರ್ಸ್ (218) ೪೦ ರನ್‌ಗಳ ಜಯ ಗಳಿಸಿತು. ಅಜಿತ್ ನಲ್ಲೂರಾಯ 34 ರನ್ ಹಾಗೂ 3 ವಿಕೆಟ್ ಗಳಿಸಿ ಜಯದ ರೂವಾರಿ ಎನಿಸಿದರು.
ಫೊಸ್ಟರ್ ಪ್ರಿನ್ಸ್ ಇಲೆವೆನ್ (191) ಹಾಗೂ ಎಬಿ ಕ್ರಿಕೆಟರ್ಸ್ (152) ನಡುವಿನ ಪಂದ್ಯದಲ್ಲಿ ಪ್ರಿನ್ಸ್ ಇಲೆವೆನ್ ತಂಡ 39 ರನ್‌ಗಳ ಅಂತರದಲ್ಲಿ ಜಯ ಗಳಿಸಿತು. 63 ರನ್ ಸಿಡಿಸಿದ ಜಯೇಶ್ ಸುವರ್ಣ ಪಂದ್ಯಶ್ರೇಷ್ಠರೆನಿಸಿದರು.
ಬ್ಲೆಂಡರ್ಸ್ ಹಾಗೂ ಯುಸಿಸಿ ನಡುವಿನ ಪಂದ್ಯದಲ್ಲಿ ಬ್ಲೆಂಡರ್ಸ್ 13 ರನ್‌ಗಳ ರೋಚಕ ಜಯ ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬ್ಲೆಂಡರ್ಸ್ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಯುಸಿಸಿ ಕೇವಲ 132 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮೊಹಮ್ಮದ್ ಇಕ್ಬಾಲ್ 22 ರನ್‌ಗೆ 4 ವಿಕೆಟ್ ಗಳಿಸಿ ಜಯದ ರೂವಾರಿ ಎನಿಸಿದರು.
ಅನಿಬ್ ಇಲೆವೆನ್  (165) ತಂಡ ಎಡಿಎಂ ಎಸಿಸಿ (142) ವಿರುದ್ಧ  23 ರನ್‌ಗಳ ಅಂತರದಲ್ಲಿ ಜಯ ಗಳಿಸಿತು. 42 ರನ್ ಗಳಿಸಿದ ಅಭಿಷೇಕ್ ಸಿ. ಕಾಂಚನ್ ಪಂದ್ಯಶ್ರೇಷ್ಠರೆನಿಸಿದರು.
ತುಂಬೆ ಚಾಲೆಂಜರ್ಸ್ (127) ಹಾಗೂ ವೆಲ್ಸ್ ಗ್ಲಾಡಿಯೇಟರ್ಸ್ (131) ನಡುವಿನ ಪಂದ್ಯದಲ್ಲಿ ವೆಲ್ಸ್ ಗ್ಲಾಡಿಯೇಟರ್ಸ್ 5 ವಿಕೆಟ್ ಅಂರದಲ್ಲಿ ಜಯ ಗಳಿಸಿತು. ಸಿಯಾನ್ ಸಂದೀಪ್ ನಜರತ್  4 ವಿಕೆಟ್ ಹಾಗೂ ಅಜೇಯ 9 ರನ್ ಗಳಿಸಿ ಪಂದ್ಯಶ್ರೇಷ್ಠರೆನಿಸಿದರು.
ಎರಡನೇ ವಾರದ ಕೊನೆಯ ಪಂದ್ಯದಲ್ಲಿ ಟೀಮ್ ಸೊಲಾಸ್ (127) ವಿರುದ್ಧ ಯುಸಿಸಿ (128) 3 ವಿಕೆಟ್‌ಗಳ ಜಯ ಗಳಿಸಿ ಮುನ್ನಡೆಯಿತು. ಪ್ರದೀಪ್ ಅಂಚನ್ 41 ರನ್, 1 ರನೌಟ್ ಹಾಗೂ 1 ವಿಕೆಟ್ ಗಳಿಸಿ ಆಲ್ರೌಂಡ್ ಪ್ರದರ್ಶನದ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles