Tuesday, March 19, 2024

ಬ್ಯಾಡ್ಮಿಂಟನ್ ಅಂಗಣದಲ್ಲಿ ವಕೀಲರ ಸಂಭ್ರಮ

ಸ್ಪೋರ್ಟ್ಸ್ ಮೇಲ್ ವರದಿ

ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡವರಿದ್ದಾರೆ. ಅದೇ ರೀತಿ ವೃತ್ತಿಯ ನಡುವೆ ಕ್ರೀಡೆಯಲ್ಲಿ ಮಿಂಚುವವರೂ ಇದ್ದಾರೆ. ಆದರೆ ಪ್ರತಿಯೊಬ್ಬರಿಗೂ ವೇದಿಕೆ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಕರಾವಳಿಯ ಪ್ರಸಿದ್ಧ ಕ್ರೀಡಾ ಸಂಸ್ಥೆ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಂಥ ಕೆಲಸವನ್ನು ಮಾಡುತ್ತಿದೆ. ಭಾನುವಾರ ಕ್ಲಬ್‌ನ ಬ್ಯಾಡ್ಮಿಂಟನ್ ಅಂಗಣದಲ್ಲಿ ನಡೆದ ಲಾಯರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 72ಕ್ಕೂ ಹೆಚ್ಚು ವಕೀಲರು ಪಾಲ್ಗೊಂಡು ಚಾಂಪಿಯನ್‌ಷಿಪ್ ಅನ್ನು ಯಶಸ್ವಿಗೊಳಿಸಿದರು.

ಬೆಂಗಳೂರು, ಮೈಸೂರು, ಪುತ್ತೂರು, ಕಾರ್ಕಳ, ಉಡುಪಿ, ಕೊಪ್ಪ, ಹಾಸನ, ಮಂಗಳೂರು ಹಾಗೂ ಶಿವಮೊಗ್ಗದಿಂದ ವಕೀಲರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.  ಮಂಗಳೂರಿನ ಖ್ಯಾತ ವೈದ್ಯ ಡಾ. ಅರವಿಂದ ಭಟ್ ಅವರು ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿದರು. ಉದ್ಯಮಿ ನಾಗ‘ಭೂಷಣ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ಚಾಂಪಿಯನ್‌ಷಿಪ್‌ನ ಯಶಸ್ಸಿನಲ್ಲಿ ಸ್ಪೋರ್ಟ್ಸ್ ಡೆನ್‌ನ ಮಾಲೀಕ ಗಣೇಶ್ ಕಾಮತ್ ಪ್ರಮುಖ  ಪಾತ್ರವಹಿಸಿದರು. ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ,  ರಾಜೇಶ್ ಕಾಮತ್ ಹಾಗೂ ಕೆ.ಪಿ. ಸತೀಶ್ ಟೂರ್ನಿಯ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.
ಫಲಿತಾಂಶ
ವನಿತೆಯರ ಮುಕ್ತ ವಿ‘ಭಾಗದ ಸಿಂಗಲ್ಸ್‌ನಲ್ಲಿ ಉಡುಪಿ ಕಾವ್ಯಶ್ರೀ ಚಾಂಪಿಯನ್ ಪಟ್ಟ ಗೆದ್ದುಕೊಂಡರೆ, ಬೆಂಗಳೂರಿನ ಅಪೇಕ್ಷಾ ರನ್ನರ್ ಅಪ್ ಸ್ಥಾನ ಗಳಿಸಿದರು. ವನಿತೆಯರ ಮುಕ್ತ ಡಬಲ್ಸ್‌ನಲ್ಲಿ ಬೆಂಗಳೂರಿನ ಅಪೇಕ್ಷ  ಹಾಗೂ ದಿವ್ಯಾ ಜೋಡಿ ಉಡುಪಿಯ ಕಾವ್ಯಶ್ರೀ ಹಾಗೂ ದಿವ್ಯಾ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಪುರುಷರ ಮುಕ್ತ ವಿ‘ಭಾಗದ ಸಿಂಗಲ್ಸ್‌ನಲ್ಲಿ ಕೊಪ್ಪಾದ ಕೃಷ್ಣಾನಂದ್ ಫೈನಲ್ ಪಂದ್ಯದಲ್ಲಿ ಪುತ್ತೂರಿನ ಅನಿರುಧ್  ಶೆಣೈ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಪುರುಷರ ಮುಕ್ತ ವಿಭಾಗದ ಡಬಲ್ಸ್‌ನಲ್ಲಿ ಕೊಪ್ಪದ ಕೃಷ್ಣಾನಂದ ಹಾಗೂ ಶಿವಮೊಗ್ಗದ ಸುನಿಲ್ ಜೋಡಿ  ತೀರ್ಥರ್ಹಳ್ಳಿಯ ರಾಘವೇಂದ್ರ ಕಾಮತ್ ಹಾಗೂ ಶಿವಮೊಗ್ಗದ ಗೋಕುಲ್ ಜೋಡಿಯನ್ನು ಮಣಿಸಿ ಅಗ್ರ ಸ್ಥಾನ ಪಡೆಯಿತು.
40 ವರ್ಷಕ್ಕೆ ಮೇಲ್ಪಟ್ಟರ ವಿ‘ಭಾಗದ ಸಿಂಗಲ್ಸ್‌ನಲ್ಲಿ ಕೊಪ್ಪದ ಕೃಷ್ಣಾನಂದ ಅವರು ಶಿವಮೊಗ್ಗದ ಸುನಿಲ್ ವಿರುದ್ಧ ಜಯ ಗಳಿಸಿ ಎರಡನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ೪೦ ವರ್ಷಕ್ಕೆ ಮೇಲ್ಪಟ್ಟ ಪುರುಷರ ಡಬಲ್ಸ್ ವಿಭಾಗದಲ್ಲಿ ಕೊಪ್ಪದ ಕೃಷ್ಣಾನಂದ ಹಾಗೂ ತೀರ್ಥ‘ರ್ಹಳ್ಳಿಯ ರಾಘವೇಂದ್ರ ಶಿವಮೊಗ್ಗದ ಸುನಿಲ್ ಹಾಗೂ ಗೋಕುಲ್ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಚಾಂಪಿಯನ್ ಆಟಗಾರರಿಗೆ ಟ್ರೋಫಿ ವಿತರರಿಸಿದರು. ಅಲ್ಲದೆ ಮುಂದಿನ ವರ್ಷ ಇನ್ನೂ ಉತ್ತಮ ರೀತಿಯಲ್ಲಿ ಟೂರ್ನಿಯನ್ನು ಸಂಘಟಿಸುವುದು ಮಾತ್ರವಲ್ಲದೆ, ಸಮಾಜದ ಪ್ರತಿಯೊಂದು ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೂ ಟೂರ್ನಿಗಳನ್ನು ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಉದ್ಯಮಿ ನಾಗಭೂಷಣ ರೆಡ್ಡಿ, ಸಜ್ಜಾ ಚಂದ್ರಶೇಖರ್ ಹಾಗೂ ಸುಂದರ್ ಶೆಟ್ಟಿ ಹಾಜರಿದ್ದರು.

Related Articles