Friday, December 13, 2024

ಫೆ .16 ಮತ್ತು 17ರಂದು ಜೆಕೆ ಟ್ರೋಫಿ

ಸ್ಪೋರ್ಟ್ಸ್ ಮೇಲ್ ವರದಿ

ಟೆನಿಸ್ ಬಾಲ್ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದು, ವಿವಿಧ  ಟೂರ್ನಿಗಳಲ್ಲಿ ಪಾಲ್ಗೊಂಡು ಕಳೆದ ಎರಡು ವರ್ಷಗಳಿಂದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿರುವ ಕುಂದಾಪುರದ ಅಂಕದಕಟ್ಟೆಯ ಜೆಕೆ  ಸ್ಪೋರ್ಟ್ಸ್ ಕ್ಲಬ್ ಈ ಬಾರಿಯೂ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದೆ. ಫೆಬ್ರವರಿ 16 ಮತ್ತು 17ರಂದು ಅಂಕದಕಟ್ಟೆಯ ಜ್ವಾಲಿ ಕ್ರಿಕೆಟ್ ಮೈದಾದನಲ್ಲಿ ಪಂದ್ಯಗಳು ನಡೆಯಲಿದೆ.

ಪ್ರತಿಯೊಂದು ತಂಡದಲ್ಲಿ 9 ಆಟಗಾರರಿಗೆ ಆಡುವ ಅವಕಾಶ, 5 ಓವರ್‌ಗಳ ಪಂದ್ಯವಾಗಿರುತ್ತದೆ. (2+2+1), 30 ಗಜಗಳ ಕ್ರಿಕೆಟ್ ಟೂರ್ನಿ ಇದಾಗಿದ್ದು, ಮೊದಲ ಸ್ಥಾನ ಗೆಲ್ಲುವ ತಂಡ 40,000 ರೂ. ನಗದು ಬಹುಮಾನ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ. ಎರಡನೇ ಸ್ಥಾನ ಗಳಿಸುವ ತಂಡ 25,000 ರೂ. ನಗದು ಬಹುಮಾನ ಹಾಗೂ ಟ್ರೋಫಿಯನ್ನು ಗೆಲ್ಲಲಿದೆ. ಪ್ರವೇಶ ಶುಲ್ಕ ರೂ. 3,000 ರೂ. ಆಗಿರುತ್ತದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9901517984, 9743779745,9113843412 ಸಂಪರ್ಕಿಸಬಹುದು.

Related Articles