Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

pvbಪ್ರೊವಾಲಿಬಾಲ್ ಲೀಗ್: ಮೊದಲ ಪಂದ್ಯದಲ್ಲೇ ಕೊಚ್ಚಿ ಹೋದ ಯು ಮುಂಬಾ ವಾಲಿ

ಸ್ಪೋರ್ಟ್ಸ್ ಮೇಲ್ ವರದಿ

ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪ್ರೊ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಕೇರಳದ ಕೊಚ್ಚಿ ಬ್ಲೂ  ಸ್ಪೈಕರ್ಸ್ ತಂಡ 4-1 ಸೆಟ್‌ಗಳ ಅಂತರದಲ್ಲಿ ಯು ಮುಂಬಾ ವಾಲಿ ತಂಡಕ್ಕೆ ಸೋಲಿನ ಆಘಾತ ನೀಡಿದೆ.

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮನು ಜೋಸೆಫ್  ಅವರ 15 ಅಂಕ (14 ಸ್ಪೈಕ್ಸ್ ಹಾಗೂ ಒಂದು ಬ್ಲಾಕ್) ಗಳ ನೆರವಿನಿಂದ ಕೊಚ್ಚಿ ತಂಡ 15-11, 15-13, 15-8, 15-10, 5-15 ಅಂತರದಲ್ಲಿ ಜಯ ಗಳಿಸಿತು. ಯು ಮುಂಬಾ ಪರ ನಿಖೋಲಾಸ್ ಡೆಲ್ ಬಿಯಾಂಕೊ 10 ಅಂಕಗಳನ್ನು ಗಳಿಸಿ ತಂಡದ ಪರ ಉತ್ತಮ ಪ್ರದರ್ಶನ ತೋರಿದರು.
ಕೊಚ್ಚಿ ತಂಡ ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದ ಮೇಲೆ ತನ್ನ ಆತ್ಮವಿಶಶ್ವಾಸವನ್ನು ಹೆಚ್ಚಿಸಿಕೊಂಡು ಅಂಗಣಕ್ಕಿಳಿಯಿತು. ಡೇವಿಡ್ ಲೀ ಸ್ಪೆ‘ಕ್ಸ್, ಬ್ಲಾಕ್ಸ್ ಹಾಗೂ ಸರ್ವ್‌ಗಳ ಮೂಲಕ ಅಂಕ ಗಳಿಸಿ ಮನೆಯಂಗಣದ ಪ್ರೇಕ್ಷಕರಿಗೆ ಹೊಸ ಲೀಗ್‌ನ ಸಂಭ್ರಮ ಉಣಬಡಿಸಿದರು. ಮೊದಲ ಹಾಗೂ ಎರಡನೇ ಸೆಟ್‌ನಲ್ಲಿ ಯು ಮುಂಬಾ ಉತ್ತಮ ರೀತಿಯಲ್ಲಿ ಹೋರಾಟ ನೀಡಿದರೂ ಮೂರನೇ ಸೆಟ್‌ನಲ್ಲಿ ಕೊಚ್ಚಿ ಸುಲಭ  ಜಯ ಗಳಿಸಿ, ಪಂದ್ಯ ಗೆಲ್ಲುವುದನ್ನು ಖಚಿತಪಡಿಸಿಕೊಂಡಿತು. ಐದನೇ ಸೆಟ್‌ನಲ್ಲಿ ತನ್ನ ರಣತಂತ್ರವನ್ನೇ ಬದಲಾಯಿಸಿದ ಮುಂಬಾ ತಂಡಕ್ಕೆ ಯಶಸ್ಸು, ಆದರೆ ಆಗಲೇ ಕಾಲ ಮಿಂಚಿತ್ತು.
ಮೋಹನ್ ಉಕ್ರಪಾಂಡ್ಯನ್  ಪಂದ್ಯಶ್ರೇಷ್ಠರೆನಿಸಿದರು, ಭಾನುವಾರ  ಸಂಜೆ  ಕ್ಯಾಲಿಕಟ್ ಹೀರೋಸ್ ಹಾಗೂ ಚೆನ್ನೈ ಸ್ಪಾರ್ಟನ್ ನಡುವೆ ಪಂದ್ಯ ನಡೆಯಲಿದೆ.  ಸೋನಿ ಸಿಕ್ಸ್  ಹಾಗೂ ಸೋನಿ ಟೆನ್3 ಯಲ್ಲಿ ನೇರ ಪ್ರಸಾರ ನೋಡಬಹುದು.

administrator