ಆಸೀಸ್ ಸರಣಿ ಕುರಿತು ಭಾರತಕ್ಕೆ ದಾದಾ ನೀಡದ ಸಲಹೆಯೇನು?

0
216
ಕೊಲ್ಕತಾ:

ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರ ಅನುಪಸ್ಥಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಸಿಲು ಉತ್ತಮ ಅವಕಾಶ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದರು.

ನಿಷೇಧಕ್ಕೊಳಗಾಗಿರುವ ಸ್ಮಿತ್ , ವಾರ್ನರ್ ಹಾಗೂ ಕ್ಯಾಮರೊನ್ ಅವರನ್ನು ರಾಷ್ಟ್ರಿಯ ತಂಡಕ್ಕೆ ಕರೆಯಬೇಕು ಎಂದು ಹಲವು ಕ್ರಿಕೆಟ್ ದಿಗ್ಗಜರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸದ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದೆ. ಈ ಹಿನ್ನಲೆಯಲ್ಲಿ ಭಾರತಕ್ಕೆ ಈ ಬಾರಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಸೋಲಿಸುವುದು ಭಾರತಕ್ಕೆ ಇದೊಂದು ಉತ್ತಮ ಅವಕಾಶ ಎಂದರು.
ಆಸ್ಟ್ರೇಲಿಯಾಗೆ ಸ್ಮಿತ್ ಹಾಗೂ ವಾರ್ನರ್ ಅವರ ಎಷ್ಟು ಮುಖ್ಯವೋ ಹಾಗೆಯೇ ಭಾರತಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಷ್ಟೆ ಮುಖ್ಯ. ಕಳೆದ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ 1-4 ಅಂತರದಲ್ಲಿ ಸೋತರೂ ಬೌಲರ್‍ಗಳು ಯಶಸ್ವಿಯಾದರು. ಪ್ರತಿಯೊಂದು ಪಂದ್ಯದಲ್ಲು ಭಾರತದ ವೇಗಿಗಳು 20 ವಿಕೆಟ್ ಕಬಳಿಸಿದ್ದಾರೆ. ಅದರಂತೆ, ಮುಂಬರುವ ಆಸ್ಟ್ರೇಲಿಯಾ ಸರಣಿಯಲ್ಲೂ ಅಲ್ಲಿನ ಪಿಚ್ ಗಳು ವೇಗಿಗಳಿಗೆ ಸಹಕರಿಸುತ್ತವೆ. ಹಾಗಾಗಿ, ಭಾರತದ ಬೌಲರ್ ಗಳು ಉತ್ತಮ ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ ಎಂದರು.