Sunday, May 26, 2024

ಹಾಂಕಾಂಗ್ ಓಪನ್: ಸಿಂಧು, ಶ್ರೀಕಾಂತ್ ಇನ್, ಸೈನಾ ನೆಹ್ವಾಲ್ ಔಟ್

ದೆಹಲಿ:

ಭಾರತದ ಸ್ಟಾರ್ ಆಟಗಾರರಾದ ಪಿ.ವಿ.ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಹಾಂಕಾಂಗ್ ಓಪನ್‍ನ ಮೊದಲನೇ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

ಇನ್ನೂ, ಮತ್ತೊಬ್ಬ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲಿ ಸೋಲುವ ಮೂಲಕ ತಮ್ಮ ಅಭಿಯಾನ ಮುಗಿಸಿದ್ದಾರೆ.
ವಿಶ್ವದ ಮೂರನೇ ಶ್ರೇಯಾಂಕದ ಪಿ.ವಿ.ಸಿಂಧು ಅವರು ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನಲ್ಲಿ ಅಮೋಘ ಆಟವಾಡುವ ಮೂಲಕ ಥಾಯ್ ಲೆಂಡ್ ನ ಜಿಂದಾಪೂಲ್ ಅವರನ್ನು 21-15, 13-21, 21-17 ಅಂತರದಲ್ಲಿ ಸೋಲಿಸಿದರು. ಆ ಮೂಲಕ ಎರಡನೇ ಸುತ್ತಿಗೆ ಪದಾರ್ಪಣೆ ಮಾಡಿದರು.
ನಾಲ್ಕನೇ ರ್ಯಾಂಕಿಂಗ್ ಕಿಡಂಬಿ ಶ್ರೀಕಾಂತ್ ಅವರು ಸ್ಥಳೀಯ ಆಟಗಾರ ಕಿ ವಿನ್ಸೆಂಟ್ ವಾಂಗ್ ಅವರನ್ನು 21-11, 21-15 ನೇರ ಸೆಟ್ ಗಳ ಮೂಲಕ ಸೋಲಿಸಿದರು. ಆ ಮೂಲಕ ಟೂರ್ನಿಯ ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿಗೆ ಪ್ರವೇಶ ಮಾಡಿದರು.
ಇನ್ನೂ, ಭಾರತದ ಮತ್ತೊಬ್ಬ ಮಹಿಳೆಯರ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಎರಡನೇ ಶ್ರೇಯಾಂಕದ ಅಕನೆ ಯಮಗುಚಿ ಅವರ ವಿರುದ್ಧ 21-10, 10-21, 19-21 ಅಂತರದಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಟೂರ್ನಿಯಿಂದ ಹೊರನಡೆದರು.

Related Articles