Thursday, December 12, 2024

26ರಂದು ಬೆಳ್ಳಿಪ್ಪಾಡಿ ಆಳ್ವಾ ಕ್ರಿಕೆಟ್ ಅಕಾಡೆಮಿಯಲ್ಲಿ ರಿಪಬ್ಲಿಕ್ ಟೂರ್ನಿ

ಸ್ಪೋರ್ಟ್ಸ್‌ಮೇಲ್ ವರದಿ

ಹಲವಾರು ದಶಕಗಳಿಂದ ಕರಾವಳಿಯಲ್ಲಿ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಬ್ರಹ್ಮಾವರದ ಬೆಳ್ಳಿಪ್ಪಾಡಿ ಆಳ್ವಾ ಕ್ರಿಕೆಟ್ ಅಕಾಡೆಮಿಯು ಇದೇ ತಿಂಗಳ 26ರಂದು ಅಂತರ್ ಕ್ಲಬ್ ಗಣರಾಜ್ಯೋತ್ಸವ ಕ್ರಿಕೆಟ್ ಟೂರ್ನಿ ಆಯೋಜಿಸಿದೆ.

ಪಂದ್ಯಗಳು ಹಂಗಾರಕಟ್ಟೆಯ ಮಾಬೂಕಳದ ಚೇತನಾ ಪ್ರೌಢ ಶಾಲೆಯ ಅಂಗಣದಲ್ಲಿ ನಡೆಯಲಿದೆ. ಇದು 13 ವರ್ಷ ವಯೋಮಿತಿಯ ಆಟಗಾರರಿಗೆ ಮಾತ್ರವಾಗಿರುತ್ತದೆ. ಕೆ ಆರ್ ಎಸ್ ಅಕಾಡೆಮಿ ಕಟಪಾಡಿ ಹಾಗೂ ಬಿ ಎ ಸಿ ಎ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಪ್ರತಿ ವರ್ಷವೂ ಎರಡು ಕ್ಲಬ್‌ಗಳ ನಡುವೆ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯೂ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಬಿಎಸಿಎ ಮುಖ್ಯಸ್ಥ, ಅನುಭವಿ ಕ್ರಿಕೆಟ್ ಕೋಚ್ ವಿಜಯ ಆಳ್ವಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ವಿಜಯ ಆಳ್ವಾ ಅವರನ್ನು 8217289484 ಅವರನ್ನು ಸಂಪರ್ಕಿಸಬಹುದು.

Related Articles