ಸ್ಪೋರ್ಟ್ಸ್ ಮೇಲ್ ವರದಿ
ರಾಜ್ಯ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ನಡೆದ ಮಹಿಳಾ ುಟ್ಬಾಲ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಮಂಗಳೂರು ಎಫ್ಸಿ ತಂಡವನ್ನು ೧-೦ ಗೋಲಿನ ಅಂತರದಲ್ಲಿ ಮಣಿಸಿದ ಬಿಯುಎಫ್ಸಿ ತಂಡ ಪ್ರತಿಷ್ಠಿತ ಇಂಪೆಟಸ್ ಟ್ರೋಫಿ ಗೆದ್ದುಕೊಂಡಿದೆ. ೭ನೇ ನಿಮಿಷದಲ್ಲಿ ಅಮೂಲ್ಯ ಗಳಿಸಿದ ಗೋಲಿನಿಂದ ಬಿಯುಎಫ್ಸಿ ಪ್ರಶಸ್ತಿ ಗೆದ್ದುಕೊಂಡಿತು.
ವೈಯಕ್ತಿಕ ಪ್ರಶಸ್ತಿಗಳು
ಉತ್ತಮ ಗೋಲ್‌ಕೀಪರ್ – ಅಕ್ಷತಾ ಮಂಗಳೂರು ಎಫ್ಸಿ.
ಉತ್ತಮ ಡಿಫೆಂಡರ್- ಸುಶ್ಮಿತಾ ಫೆರ್ನಾಂಡೀಸ್, ಕ್ರೈಸ್ಟ್ ವಿಶ್ವವಿದ್ಯಾಲಯ.
ಉತ್ತಮ ಮಿಡ್‌ಫೀಲ್ಡರ್- ತನ್ವಿ ಹಾನ್, ಪರಿಕ್ರಮಾ.
ಉತ್ತಮ ಫಾರ್ವರ್ಡ- ಪ್ರೊಮಿತಾ ಸಿಟ್, ಬಿಯುಎಫ್ಸಿ
ಉದಯೋನ್ಮುಖ ಆಟಗಾರ್ತಿಯರು
ರಫಿಯಾ ಫಾತಿಮಾ- ಶೈನಿಂಗ್ ಸ್ಟಾರ್
ಸುಹಾನ್ -ಬಿಬಿಎಫ್ಸಿ
ಸುಧಾ -ಮಿಸಾಕಾ ಯುನೈಟೆಡ್
ಲಿಲ್ಲಿ-ಹ್ಯಾಪನರ್ಸ್ ಫೌಂಡೇಷನ್
ತಾನಿಯಾ-ಎಸ್‌ಎಫ್ಎಸ್.
ಶ್ರದ್ಧಾ-ಅಕ್ಷರಾ ಮಾಂಟಿಸೊರಿ ಅಕಾಡೆಮಿ

ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎನ್.ಎ. ಹ್ಯಾರಿಸ್ ವಿಜೇತರಿಗೆ ಬಹುಮಾನ ವಿತರಿಸಿದರು. ಭಕ್ತವತ್ಸಲಂ, ಒಲಿಂಪಿಕ್ಸ್ ಸ್ಪೋರ್ಟ್ಸ್., ಉಪಾಧ್ಯಕ್ಷ ಎಂ. ಮೋಹನ್‌ರಾಜ್, ಪ್ರಧಾನ ಕಾರ್ಯದರ್ಶಿ ಇ.ಕೃಷ್ಣನಾರಾಯಣ, ರೆಫರಿ ಸಮಿತಿಯ ಅಧ್ಯಕ್ಷ ಎಂ.ಎಸ್. ಕೃಷ್ಣಮೂರ್ತಿ, ಬಿಡಿಎಫ್ಎ ಕಾರ್ಯದರ್ಶಿ ಭೂಪಾಲ್, ಕೆಎಸ್‌ಎಫ್ಎ ಉಪಧ್ಯಕ್ಷ ಸುವರ್ಣ ಹಾಜರಿದ್ದರು.