Friday, December 13, 2024

ಅಖಿಲ ಭಾರತ ವಾಯುಪಡೆ ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಸ್ಪೋರ್ಟ್ಸ್ ಮೇಲ್ ವರದಿ

ಏರ್  ಫೋರ್ಸ್  ಸ್ಕೂಲ್ಸ್ ಅಥ್ಲೆಟಿಕ್ಸ್ ಮತ್ತು ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಏರ್  ಫೋರ್ಸ್ ನೆಲೆಯಲ್ಲಿ  ಚಾಲನೆ ನೀಡಲಾಯಿತು.

ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಏರ್‌ೆರ್ಸ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಲಿ ಎಂಬ ಉದ್ದೇಶದಿಂದ ಪ್ರತಿ ವರ್ಷ ಬೇರೆ ಬೇರೆ ನೆಲೆಗಳಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಜಾಲಹಳ್ಳಿಯಲ್ಲಿ ಆಗಸ್ಟ್ ೨೭ರಿಂದ ಆರಂಭಗೊಂಡಿದ್ದು  ೩೦ರವರೆಗೆ ನಡೆಯಲಿದೆ. ಆರು ವಿಭಾಗದ ಕ್ರೀಡೆಗಳಲ್ಲಿ ಒಟ್ಟು ೧೪  ಸ್ಪರ್ಧೆಗಳು ನಡೆಯಲಿವೆ.
ಏರ್ ಹೆಡ್‌ಕ್ವಾರ್ಟ್‌ರ್ಸ್, ವೆಸ್ಟರ್ನ್ ಏರ್ ಕಮಾಂಡ್, ಸೆಂಟ್ರಲ್ ಏರ್ ಕಮಾಂಡ್, ಈಸ್ಟರ್ನ್ ಏರ್ ಕಮಾಂಡ್, ಸೌತ್ ವೆಸ್ಟರ್ನ್ ಏರ್ ಕಮಾಂಡ್, ಟ್ರೈನಿಂಗ್ ಕಮಾಂಡ್, ಮೇಂಟೆನೆನ್ಸ್ ಕಮಾಂಡ್ ಮತ್ತು ಸದರ್ನ್ ಏರ್ ಕಮಾಂಡ್. ಏರ್ ಮಾರ್ಷಲ್ ಪ್ರದೀಪ್ ಪದ್ಮಾಕರ್ ಬಪಟ್ (ವರ್ಕ್ಸ್ ಆಂಡ್ ಸೆರಮೋನಿಯಲ್)  ಜಾಲಹಳ್ಳಿಯ ಪ್ರಭಾನ ಕಚೇರಿಯಲ್ಲಿರುವ ವಾಯುಭವನ್‌ನಲ್ಲಿ ಚಾಲನೆ ನೀಡಿದರು.
ಉದ್ಘಾಟನಾ ಭಾಷಣದಲ್ಲಿ ಪ್ರದೀಪ್ ಅವರು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉತ್ತಮ ರೀತಿಯಲ್ಲಿ ಶ್ರಮವಹಿಸಿದರೆ ಪದಕ ಗೆಲ್ಲುವುದು ಸುಲಭ  ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಪ್ರದೀಪ್ ಆಗ್ರಹಿಸಿದರು.

Related Articles