Sportsmail
ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದ ಕ್ವೀನ್ ಬ್ಯಾಟನ್‌ಗೆ ಕರ್ನಾಟಕ ರಾಜ್ಯ ಸರಕಾರದಿಂದ ಭವ್ಯ ಸ್ವಾಗತ ನೀಡಲಾಯಿತು.
ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗವರ್ನರ್ ತಾವರ್ ಚಂದ್ ಘೆಲೋಟ್, ಸ್ಪೀಕರ್ ಬಸವರಾಜ್ ಹೊರಟ್ಟಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿವೈಇಎಸ್, ಶಾಲಿನಿ ರಜನೀಶ್, ರಾಜನ್, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಬೆಂಗಳೂರು, ಡಿವೈಇಎಸ್ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಅವರು ಬ್ಯಾಟನ್ ರಿಲೇಗೆ ಚಾಲನೆ ನೀಡಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿ ಅವರು ಕ್ವೀನ್ ಬ್ಯಾಟನ್ ರಿಲೇಗೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಕ್ರೀಡಾ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಅವರು ಶುಭ ಹಾರೈಸಿದರು.
ನೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯಕಾರಿ ಮಂಡಳಿಯ ಸದಸ್ಯ, ರಾಷ್ಟ್ರೀಯ ನೆಟ್‌ಬಾಲ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರಿಓಂ ಕೌಶಿಕ್, ಮಾಜಿ ಮತ್ತು ಹಾಲಿ ಒಲಿಂಪಿಯನ್ನರು, ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರು, ಹಾಲಿ ಮತ್ತು ಮಾಜಿ ಅಂತಾರಾಷ್ಟ್ರೀಯ ಕ್ರೀಡಾ ಪಟುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಧಾನ ಸೌಧದಿಂದ ಆರಂಭಗೊಂಡು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ರಿಲೇಯಲ್ಲಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಮತ್ತು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿರುವ ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ಅಂಜುಬಾಬಿ ಜಾರ್ಜ್, ಧ್ಯಾನ್‌ಚಂದ್ ಪ್ರಶಸ್ತಿ ವಿಜೇತ ಉದಯ್ ಪ್ರಭು, ಹಾಕಿ ಒಲಿಂಪಿಯನ್ ಎ ಬಿ ಸುಬ್ಬಯ್ಯ, ಒಲಿಂಪಿಯನ್ ಹಾಕಿ ಮಾಜಿ ಆಟಗಾರ ವಿ.ಆರ್. ರಘುನಾಥ್ ಮತ್ತು ಅಂತಾರಾಷ್ರೀಯ ಈಜುಗಾರ್ತಿ ರಿಧಿಮಾ ವೀರೇಂದ್ರ ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಸಿ. ಗೌಡ, ಅಂತಾರಾಷ್ಟ್ರೀಯ ನೆಟ್‌ಬಾಲ್ ಆಟಗಾರರಾದ ರಂಜಿತಾ ಬಿ.ಜೆ, ನಂದಿನಿ ಎಲ್,ಜಿ, ದೀಪಾ ಎಸ್.ರಾವ್, ನಿತಿನ್ ಮತ್ತು ಚೇತನ್ ರಿಲೇಯಲ್ಲಿ ಪಾಲ್ಗೊಂಡರು.