Sportsmail:
ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆಗಸ್ಟ್ 8 ರ ವರೆಗೆ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಬ್ಯಾಟನ್ 14ರಂದು ಬೆಂಗಳೂರಿಗೆ ಆಗಮಿಸಲಿದೆ.
ಅಕ್ಟೋಬರ್ 7, 2021ರಂದು ಆರಂಭಗೊಂಡ ಬ್ಯಾಟನ್ 269 ದಿನಗಳ ಕಾಲ, 90,000 ಮೈಲುಗಳ ಅಂತರ ಚಲಿಸಿ, 72 ಕಾಮನ್ಲೆಲ್ತ್ ರಾಷ್ಟ್ರಗಳಲ್ಲಿ ಸಂಚರಿಸಲಿದೆ.
ಜನವರಿ 10 ರಂದು ರಾಜಧಾನಿ ದಿಲ್ಲಿಗೆ ಆಗಮಿಸಿದ ಬ್ಯಾಟನ್ ಅನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್‌ನ ಕ್ವೀನ್ ಬ್ಯಾಟಾನ್ ರಿಲೇ ಸಮಿತಿಯ ಆಧ್ಯಕ್ಷ ರಾಕೇಶ್ ಗುಪ್ತಾ ಬರಮಾಡಿಕೊಂಡರು. ಸಮಿತಿಯ ಸದಸ್ಯರಾದ ಮುಖೇಶ್ ಕುಮಾರ್, ಹರಿಓಂ ಕೌಶಿಕ್, ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ನಿನ ಅಧ್ಯಕ್ಷ ಡಾ. ಪ್ರೇಮ್ ವರ್ಮಾ ಮತ್ತು ಡೆಲ್ಲಿ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಕುಲದೀಪ್ ವತ್ಸ ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಂಗ್ಲಾದೇಶದಿಂದ ಆಗಮಿಸಿ ಬ್ಯಾಟನ್, 12 ರಂದು ದೆಹಲಿಯಲ್ಲಿ ಸಂಚರಿಸಿ, ನಂತರ 13 ರಂದು ಅಹಮದಾಬಾದ್ ತಲುಪಿದೆ. ಅಹಮದಾಬಾದ್‌ನಿಂದ 14ರಂದು ಬೆಂಗಳೂರಿಗೆ ಆಗಮಿಸಿ, 15ಕ್ಕೆ ಭುವನೇಶ್ವರ ತಲುಪಲಿದೆ. ಅಹಮದಾಬಾದ್‌ನಲ್ಲಿ ಕೋವಿಡ್ ಕಾರಣ ಅಲ್ಲಿ ರಿಲೇಯನ್ನು ರದ್ದುಗೊಳಿಸಲಾಗಿದ್ದು, ಬಾಕಿ ಎಲ್ಲ ನಗರಗಳಲ್ಲಿ ರಿಲೇ ನಡೆಯಲಿದೆ. 16ರಂದು ಬ್ಯಾಟನ್ ಸಿಂಗಾಪುರಕ್ಕೆ ತರಳಲಿದೆ.
ಬೆಂಗಳೂರಿನಲ್ಲಿ ಕ್ರೀಡಾ ಸಚಿವ ಡಾ, ನಾರಾಯಣ ಗೌಡ, ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಬ್ಯಾಟನ್ ರಿಲೇಗೆ ಗೌರವ ಸೂಚಿಸುವರು.