Sunday, December 10, 2023

ಬರ್ಲಿನ್‌ ಮ್ಯಾರಥಾನ್‌ನಲ್ಲಿ ಕನ್ನಡಿಗ ಡಾ. ಕುಮಾರನ್‌ ಸಂಪತ್‌

ಬೆಂಗಳೂರು: ಪ್ರತಿಯೊಂದು ಕ್ರೀಡೆಗೂ ಓಟವೇ ತಾಯಿ. ಈಗ ಜಗತ್ತಿನಾದ್ಯಂತ ಮ್ಯಾರಥಾನ್‌ ಜನಪ್ರಿಯಗೊಳ್ಳುತ್ತಿದೆ. ಜಗತ್ತಿನ ಶ್ರೇಷ್ಠ ಮ್ಯಾರಥಾನ್‌ಗಳಲ್ಲಿ ಬರ್ಲಿನ್‌ ಮ್ಯಾರಥಾನ್‌ Berlin Marathon 2023 ಕೂಡ ಒಂದು. ಜರ್ಮನಿಯ ಬರ್ಲಿನ್‌ನಲ್ಲಿ ಪ್ರತಿ ವರ್ಷ ಸೆಪ್ಟಂಬರ್‌ ಕೊನೆಯ ವಾರದಲ್ಲಿ ನಡೆಯುವ ಈ ಮ್ಯಾರಥಾನ್‌ನಲ್ಲಿ ಜಗತ್ತಿನಾದ್ಯಂತ ವೃತ್ತಿಪರ ಹಾಗೂ ಹವ್ಯಾಸಿ ಓಟಗಾರರು ಪಾಲ್ಗೊಳ್ಳುತ್ತಾರೆ. ಈ ಬಾರಿಯ ಮ್ಯಾರಥಾನ್‌ಲ್ಲಿ ಕರ್ನಾಟಕದ ಕಂಪೆನಿಯ ಮಾಲೀಕರೊಬ್ಬರು ಪಾಲ್ಗೊಂಡಿರುವುದು ವಿಶೇಷ.

ಬೆಂಗಳೂರಿನ ಎಗ್ಮಾ ಕ್ಯಾಪಿಟಲ್‌ Aegma Capital ನ ಆಡಳಿತ ನಿರ್ದೇಶಕ ಹಾಗೂ ಸಿಇಒ ಡಾ. ಕುಮಾರನ್‌ ಸಂಪತ್‌ Dr Kumaran Sampath ಮ್ಯಾರಥಾನ್‌ ಪೂರ್ಣಗೊಳಿಸಿದ ಹೆಮ್ಮೆಯ ಕನ್ನಡಿಗ. ಜಗತ್ತಿನ ಪ್ರಮುಖ ಮ್ಯಾರಥಾನ್‌ಗಳಲ್ಲಿ ಒಂದಾಗಿರುವ ಬರ್ಲಿನ್‌ ಮ್ಯಾರಥಾನ್‌ ಸೆಪ್ಟೆಂಬರ್‌ 24 ರಂದು ಬರ್ಲಿನ್‌ನಲ್ಲಿ ನಡೆದಿತ್ತು. ಒಟ್ಟು 156 ರಾಷ್ಟ್ರಗಳಿಂದ 47,912 ಸ್ಪರ್ಧಿಗಳು ಈ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ನಿತ್ಯವೂ ದೂರದ ಓಟದಲ್ಲಿ ಪಾಲ್ಗೊಂಡು ಅಭ್ಯಾಸ ಮಾಡುವ ಡಾ. ಕುಮಾರನ್‌ ಸಂಪತ್‌, ಈ ಹಿಂದೆಯೂ ಈ ರೀತಿಯ ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಬರ್ಲಿನ್‌ ಅನುಭವವೇ ಬೇರೆ ಎನ್ನುತ್ತಾರೆ ಬೆಂಗಳೂರಿನ ಈ ಹವ್ಯಾಸಿ ಓಟಗಾರ.

“ಈ ಬಾರಿ ಉತ್ತಮ ಸಮಯದೊಂದಿಗೆ ಮ್ಯಾರಥಾನ್‌ ಪೂರ್ಣಗೊಳಿಸಿರುವೆ. ನಮ್ಮ ದೇಶ ಮತ್ತು ರಾಜ್ಯವನ್ನು ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ಪ್ರತಿನಿಧಿಸುವುದೇ ಹೆಮ್ಮೆಯ ಸಂಗತಿ ಎನ್ನುತ್ತಾರೆ ಕುಮಾರನ್‌ ಸಂಪತ್‌. ಬೆಂಗಳೂರಿನ ಕಾರ್ಪೊರೇಟ್‌ ವಲಯದಲ್ಲಿ ಕ್ರೀಡೆ ಮತ್ತು ಫಿಟ್ನೆಸ್‌ ಕ್ಷೇತ್ರದಲ್ಲಿ ಜನಪ್ರಿಯಗೊಂಡಿರುವ ಕುಮಾರನ್‌ ಸಂಪತ್‌, ಯಾವಾಗಲೂ ಕ್ರೀಡೆಗೆ ಉತ್ತಮ ರೀತಿಯ ಪ್ರೋತ್ಸಾಹ ನೀಡುತ್ತಿದ್ದಾರೆ. ಓಟದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಕುಮಾರನ್‌ ಸಂಪತ್‌ ದಿನವೂ ಓಟದಲ್ಲಿ ಪಾಲ್ಗೊಳ್ಳುವುದಲ್ಲದೆ ಅನೇಕ ಓಟಗಾರರಿಗೆ ನೆರವು ನೀಡುತ್ತಿದ್ದಾರೆ, ತಮ್ಮ ಬಿಡುವಿಲ್ಲದ ಕೆಲಸದ ಒತ್ತಡಗಳ ನಡುವೆಯೂ ಜಗತ್ತಿನಲ್ಲಿ ನಡೆಯುವ ಹೆಚ್ಚಿನ ಮ್ಯಾರಥಾನ್‌ಗಳಲ್ಲಿ ಪಾಲ್ಗೊಳ್ಳುವ ಡಾ. ಕುಮಾರನ್‌ ಸಂಪತ್‌ ಅನೇಕ ಮ್ಯಾರಥಾನ್‌ ಓಟಗಾರರಿಗೆ ಮಾದರಿಯಾಗಿದ್ದಾರೆ.

Related Articles