Friday, June 14, 2024

ಏಷ್ಯನ್‌ ಗೇಮ್ಸ್‌ನಲ್ಲಿ 81 ಪದಕ: ಇತಿಹಾಸ ಬರೆದ ಭಾರತ

ಹೊಸದಿಲ್ಲಿ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ Indian grabs 81 medals at Asian Games 2023 ಭಾರತ 11ನೇ ದಿನದಂತ್ಯಕ್ಕೆ ಒಟ್ಟು 81 ಪದಕಗಳನ್ನು ಗೆಲ್ಲುವ ಮೂಲಕ ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲೇ ಅತಿ ಹೆಚ್ಚು ಪದಕ ಗೆದ್ದ ಸಾಧನೆ ಮಾಡಿದೆ.

ಬುಧವಾರ ಜಾವೆಲಿನ್‌ ಎಸೆತದಲ್ಲಿ ನೀರಜ್‌ ಚೋಪ್ರಾ 88.88 ಮೀ. ದೂರಕ್ಕೆ ಎಸೆಯುವ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟರು. ಭಾರತ ಒಟ್ಟು 18 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಕಗಳನ್ನು ಗೆದ್ದು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು. 169 ಚಿನ್ನ, 94 ಬೆಳ್ಳಿ ಹಾಗೂ 51 ಕಂಚಿನ ಪದಕಗಳೊಂದಿಗೆ ಒಟ್ಟು 314 ಪದಕಗಳನ್ನು ಗೆದ್ದ ಆತಿಥೇಯ ಚೀನಾ ಅಗ್ರ ಸ್ಥಾನದಲ್ಲಿದೆ.

ಜಕಾರ್ತದಲ್ಲಿ ನಡೆದ 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಗೆದ್ದಿರುವ 70 ಪದಕಗಳು ಇದುವರೆಗಿನ ಗರಿಷ್ಠವಾಗಿತ್ತು. ದಿನದ ಆರಂಭದಲ್ಲಿ ನಡೆದ 35 ಕಿಮೀ ರೇಸ್‌ ವಾಕ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿತ್ತು. ದಿನದ ಕೊನೆಯಲ್ಲಿ ನಡೆದ ಜಾವೆಲಿನ್‌ ಎಸೆತದಲ್ಲಿ ಗೊಂದಲಗಳ ನಡುವೆಯೂ ನೀರಜ್‌ ಚೋಪ್ರಾ 88.88 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರೆ ಭಾರತದ ಇನ್ನೋರ್ವ ಸ್ಪರ್ಧಿ ಕಿಶೋರ್‌ ಜೆನಾ 87.54 ಮೀ. ದೂರಕ್ಕೆ ಎಸೆದು ವೈಯಕ್ತಿಕ ಗರಿಷ್ಠ ದಾಖಲೆಯೊಂದಿಗೆ ಬೆಳ್ಳಿ ತಮ್ಮದಾಗಿಸಿಕೊಂಡರು.

ಪುರುಷರ 4×400 ಮೀ. ರಿಲೇಯಲ್ಲಿ ಮೊಹಮ್ಮದ್‌ ಅನಾಸ್‌, ರಾಜೇಶ್‌ ರಮೇಶ್‌, ಅಮೋಜ್‌ ಜಾಕೊಬ್‌ ಹಾಗೂ ಮೊಹಮ್ಮದ್‌ ಅಜ್ಮಲ್‌ 3 ನಿಮಿಷ 01.58 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ವನಿತೆಯರ 4×400 ಮೀ. ರಿಲೇಯಲ್ಲಿ ಭಾರತ ಬೆಳ್ಳಿ ಗೆದ್ದಿತು. ವಿದ್ಯಾ ರಾಮರಾಜ್‌, ಐಶ್ವರ್ಯ ಮಿಶ್ರಾ, ಪ್ರಾಚಿ ಮತ್ತು ಸುಧಾ ವೆಂಕಟೇಶನ್‌ 3 ನಿಮಿಷ 27.85 ಸೆಕೆಂಡುಗಳಲ್ಲಿ ಗುರಿ ತಲುಪಿದರು.

Related Articles