ಅಹಮದಾಬಾದ್: ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ICC Cricket World Cup ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿದೆ. ಆದರೆ ಈ ಜಯದಲ್ಲಿ ಭಾರತೀಯ ಮೂಲದ ಆಟಗಾರನ ಶತಕ ಪ್ರಮುಖ ಪಾತ್ರವಹಿಸಿತು ಎಂಬುದು ಭಾರತೀಯರು ಹೆಮ್ಮೆ ಪಡುವ ವಿಷಯ.
2021ರಲ್ಲಿ ಭಾರತದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬೆಂಗಳೂರು ಮೂಲದ ರವಿಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗ ರಾಚಿನ್ ರವೀಂದ್ರ Rachin Ravindra ತನ್ನ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ 123 ರನ್ ಸಿಡಿಸಿ ಜಯದ ರೂವಾರಿ ಎನಿಸಿದರು. ಇನ್ನೋರ್ವ ಆಟಗಾರ ಡೆವೋನ್ ಕಾನ್ವೆ Devon Conway ಅಜೇಯ 152 ರನ್ ಗಳಿಸಿ ಇನ್ನೂ 82 ಎಸೆತ ಬಾಕಿ ಇರುವಾಗಲೇ 1 ವಿಕೆಟ್ ಕಳೆದುಕೊಂಡು 283 ರನ್ ಗಳಿಸಿತು. ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತ್ತು.
ರಾಚಿನ್ ರವೀಂದ್ರ ಅವರ ತಂದೆ ರವಿಕೃಷ್ಣಮೂರ್ತಿ ಅವರು ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅಭಿಮಾನಿ. ವೆಲ್ಲಿಂಗ್ಟನ್‌ನಲ್ಲಿ ಹುಟ್ಟಿದ ತಮ್ಮ ಮಗುವಿಗೆ ಹೆಸರಿಡುವಾಗ ರಾಹುಲ್ ದ್ರಾವಿಡ್ ಅವರ ಹೆಸರಿನ ಮೊದಲ ಅಕ್ಷರ ರಾ RA ಹಾಗೂ ಸಚಿನ್ ತೆಂಡೂಲ್ಕರ್ ಅವರ ಕೊನೆಯ ಅಕ್ಷರ ಚಿನ್ CHIN ಜೋಡಿಸಿ ರಾಚಿನ್ ಎಂದು ಕರೆದರು.
23 ವರ್ಷದ ರಾಚಿನ್ ರವೀಂದ್ರ ಹಾಗೂ ಡೆವೋನ್ ಕಾನ್ವೆ ಅವರ ಎರಡನೇ ವಿಕೆಟ್ 273 ರನ್ ಜೊತೆಯಾಟ ಕಿವೀಸ್ ಪರ ದಾಖಲೆಯನ್ನೇ ನಿರ್ಮಿಸಿತು ಮಾತ್ರವಲ್ಲ 2019ರ ವಿಶ್ವಕಪ್ ಫೈನಲ್‌ನ ಸೇಡು ತೀರಿಸಿಕೊಳ್ಳುವಂತೆ ಮಾಡಿತು.