Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೆಂಗಳೂರು ಎಫ್‌ಸಿಗೆ ಪಂಜಾಬ್‌ ವಿರುದ್ಧ ಜಯ

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ನ ತನ್ನ ಐದನೇ ಪಂದ್ಯದಲ್ಲಿ ಪಂಜಾಬ್‌ ಎಫ್‌ಸಿ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. Bengaluru FC edge Punjab FC to retain pole position with fifth consecutive clean sheet.

ಈ ಕ್ಲೀನ್‌ ಶೀಟ್‌ ಸಾಧನೆಯೊಂದಿಗೆ ಬೆಂಗಳೂರು ಎಫ್‌ಸಿ ಪ್ರಸಕ್ತ ಋತುವಿನಲ್ಲಿ 450 ನಿಮಿಷಗಳ ಕಾಲ ಎದುರಾಳಿಗೆ ಗೋಲು ಗಳಿಸಲು ಅವಕಾಶ ನೀಡದೆ ಸಾಧನೆ ಮಾಡಿದೆ. 2017-18ರ ಋತುವಿನಲ್ಲಿ ಜೆಮ್ಷೆಡ್ಪುರ ಎಫ್‌ಸಿ 389 ನಿಮಿಷಗಳ ಕಾಲ ಎದುರಾಳಿಗೆ ಗೋಲು ನೀಡದೆ ಸಾಧನೆ ಮಾಡಿತ್ತು.
ನವೊರೆಮ್‌ ರೋಶನ್‌ ಸಿಂಗ್‌ ಗಳಿಸಿದ ಏಕೈಕ ಗೋಲಿನಿಂದ ಬೆಂಗಳೂರು ಎಫ್‌ಸಿ ಋತುವಿನ ನಾಲ್ಕನೇ ಜಯ ಗಳಿಸಿತು. ಪಂಜಾಬ್‌ ಎಫ್‌ಸಿ ಉತ್ತಮ ಪೈಪೋಟಿ ನೀಡಿದರೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾಯಿತು.


administrator