ಜುಲೈ 25ರಿಂದ 135ನೇ ಡ್ಯುರಾಂಡ್ ಫುಟ್ಬಾಲ್ ಕಪ್ ಸಂಭ್ರಮ
ಹೊಸದಿಲ್ಲಿ: ಜುಲೈ 25ರಿಂದ ಆಗಸ್ಟ್ 23ರವರೆಗೆ ನಡೆಯಲಿದೆ. ಎರಡು ವಿದೇಶಿ ಕ್ಲಬ್‌ಗಳನ್ನು ಒಳಗೊಂಡಂತೆ ಒಟ್ಟು 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ ಎಂದು ಆಯೋಜನಾ ಸಮಿತಿಯು ವೇಳಾಪಟ್ಟಿಯನ್ನು ಪ್ರಕಟಿಸಿದೆ. 135th edition of the Durand Cup will be held from July 25 to August 23, with 24 teams, including two foreign clubs, set to compete in one of India’s oldest and most prestigious football tournaments
ಈ ಬಾರಿಯ ಟೂರ್ನಿಯು ಕೋಲ್ಕತ್ತಾ, ರಾಂಚಿ, ಗುವಾಹಟಿ, ಇಂಫಾಲ್ ಮತ್ತು ಶಿಲ್ಲಾಂಗ್ ಸೇರಿದಂತೆ ಐದು ನಗರಗಳಲ್ಲಿ ನಡೆಯಲಿದೆ. ವಿಶೇಷವೆಂದರೆ, ರಾಂಚಿ ಮೊದಲ ಬಾರಿಗೆ ಡ್ಯುರಾಂಡ್ ಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದ್ದು, ಇದು ಟೂರ್ನಿಯ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದೆ.
ತಿಂಗಳ ಕಾಲ ನಡೆಯಲಿರುವ ಈ ಟೂರ್ನಿಯ ಪಂದ್ಯಗಳು ಒಟ್ಟು ಆರು ಕ್ರೀಡಾಂಗಣಗಳಲ್ಲಿ ಆಯೋಜನೆಯಾಗಲಿವೆ. ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಕ್ರೀರಾಂಗಣ ಹಾಗೂ ಕಿಶೋರ್ ಭಾರತಿ ಕ್ರೀರಾಂಗಣ, ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣ, ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂ, ಇಂಫಾಲ್‌ನ ಖುಮಾನ್ ಲಂಪಕ್ ಸ್ಟೇಡಿಯಂ ಮತ್ತು ಶಿಲ್ಲಾಂಗ್‌ನ ಜವಾಹರಲಾಲ್ ನೆಹರೂ ಕ್ರೀಡಾಂಗಣ ಪಂದ್ಯಗಳಿಗೆ ವೇದಿಕೆಯಾಗಲಿವೆ.
ಈ ಬಾರಿಯೂ ದೇಶದ ಪ್ರಮುಖ ಫುಟ್‌ಬಾಲ್ ಕ್ಲಬ್‌ಗಳು, ಸರ್ವಿಸಸ್ ತಂಡಗಳು ಹಾಗೂ ಎರಡು ಅಂತಾರಾಷ್ಟ್ರೀಯ ಕ್ಲಬ್‌ಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಸ್ಪರ್ಧಿಸುವ ತಂಡಗಳು, ಗುಂಪು ಹಂಚಿಕೆ, ಪಂದ್ಯಗಳ ವೇಳಾಪಟ್ಟಿ ಹಾಗೂ ನಾಕೌಟ್ ಹಂತದ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ದೇಶೀಯ ಫುಟ್‌ಬಾಲ್ ಋತುವಿನ ಆರಂಭಕ್ಕೆ ವೇದಿಕೆಯಾಗಿರುವ ಡ್ಯುರಾಂಡ್ ಕಪ್, ದೇಶದ ವಿವಿಧ ಭಾಗಗಳ ಅಭಿಮಾನಿಗಳಿಗೆ ಗುಣಮಟ್ಟದ ಫುಟ್‌ಬಾಲ್‌ನ್ನು ಒದಗಿಸುವ ಮಹತ್ವದ ಟೂರ್ನಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
2025ರ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ, ಹಾಲಿ ಚಾಂಪಿಯನ್ ಆಗಿ ಈ ಬಾರಿಯ ಟೂರ್ನಿಗೆ ಪ್ರವೇಶಿಸಲಿದೆ. ಫೈನಲ್‌ನಲ್ಲಿ ಡೈಮಂಡ್ ಹಾರ್ಬರ್ ತಂಡವನ್ನು 6–1 ಗೋಲುಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿದ್ದ ನಾರ್ತ್‌ಈಸ್ಟ್ ಯುನೈಟೆಡ್, ಇತ್ತೀಚಿನ ವರ್ಷಗಳ ಡ್ಯುರಾಂಡ್ ಕಪ್ ಇತಿಹಾಸದಲ್ಲೇ ಅತ್ಯಂತ ಭರ್ಜರಿ ಗೆಲುವುಗಳಲ್ಲಿ ಒಂದನ್ನು ದಾಖಲಿಸಿತ್ತು.
ಐದು ನಗರಗಳಲ್ಲಿ ನಡೆಯಲಿರುವ ಪಂದ್ಯಗಳು, ದೇಶೀಯ ಹಾಗೂ ಅಂತಾರಾಷ್ಟ್ರೀಯ ತಂಡಗಳ ಪೈಪೋಟಿಯೊಂದಿಗೆ, 2026ರ ಡ್ಯುರಾಂಡ್ ಕಪ್ ಮತ್ತೊಮ್ಮೆ ಒಂದು ತಿಂಗಳ ಕಾಲ ರೋಚಕ ಫುಟ್‌ಬಾಲ್ ಹಬ್ಬವನ್ನು ಅಭಿಮಾನಿಗಳಿಗೆ ಉಣಬಡಿಸುವ ನಿರೀಕ್ಷೆಯಿದೆ. ತಂಡಗಳು ಭಾರತೀಯ ಫುಟ್‌ಬಾಲ್‌ನ ಅತ್ಯಂತ ಐತಿಹಾಸಿಕ ಟ್ರೋಫಿಗಳಲ್ಲಿ ಒಂದಾದ ಡ್ಯುರಾಂಡ್ ಕಪ್ ಗೆಲ್ಲಲು ಕಠಿಣ ಪೈಪೋಟಿ ನಡೆಸಲಿವೆ.

