Saturday, February 24, 2024

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಕ್ವಾರ್ಟರ್ ಫೈನಲ್ ಗೆ ಕರ್ನಾಟಕ

Sportsmail

ಸೌರಾಷ್ಟ್ರ ವಿರುದ್ಧ 2 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಸಯ್ಯದ್ ಮುಷ್ತಾಕ್ ಅಲಿ ಟಿ20 ಚಾಂಪಿಯನ್ಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದೆ.

ಅಭಿನವ್ ಮನೋಹರ್ ಅಜೇಯ 70 ರನ್ ಸಿಡಿಸುವುದರೊಂದಿಗೆ ಕರ್ನಾಟಕ ತಂಡ 146 ರನ್ ಗುರಿಯನ್ನು 19.5 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ತಲುಪಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ರಾಜ್ಯದ ಪರ ಕೌಶಿಕ್, ವೈಶಾಕ್ ವಿಜಯ್ ಹಾಗೂ ಕೆಸಿ ಕಾರಿಯಪ್ಪ ತಲಾ 2 ವಿಕೆಟ್ ಗಳಿಸಿದರು.

ಬ್ಯಾಟಿಂಗ್ ನಲ್ಲಿ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ಶರತ್, ಕರುಣ್ ನಾಯರ್ ಹಾಗೂ ಮನೀಷ್ ಪಾಂಡೆ ಬೇಗನೇ ಪೆವಿಲಿಯನ್ ಸೇರಿದರು.‌

ಆದರೆ ರೋಹನ್ ಕದಮ್ (33) ಹಾಗೂ ಅಭಿನವ್ ಮುಕುಂದ್ (70*) ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾಡ್ಕತ್ 22 ರನ್ ಗೆ 4 ವಿಕೆಟ್ ಗಳಿಸಿದರೂ ಪ್ರಯೋಜನವಾಗಲಿಲ್ಲ.

Related Articles