Thursday, September 12, 2024

ವೃತ್ತಿಪರ ಕ್ರೀಡಾ ತರಬೇತಿಗೆ ಟಾರ್ಪೆಡೋಸ್ ಬೇಸಿಗೆ ಶಿಬಿರ

ಸ್ಪೋರ್ಟ್ಸ್ ಮೇಲ್ ವರದಿ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಒಂದಾಗಿದ್ದು, ಸದಾ ಕ್ರೀಡಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ನಲ್ಲಿ ಈ ವರ್ಷದ ಬೇಸಿಗೆ ಶಿಬಿರ ಏಪ್ರಿಲ್ 1 ರಿಂದ ಆರಂಭಗೊಳ್ಳಲಿದೆ.  ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ತರಬೇತಿಯನ್ನು ನೀಡಲಾಗುವುದು ಎಂದು ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಏಪ್ರಿಲ್ 1 ರಿಂದ ಏಪ್ರಿಲ್ 20, ಏಪ್ರಿಲ್ 21 ರಿಂದ ಮೇ 10 ಹಾಗೂ ಮೇ 11 ರಿಂದ ಮೇ 30 ವರೆಗೆ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ತರಬೇತಿ ಶಿಬಿರಗಳು ನಡೆಯಲಿವೆ.  ಏಪ್ರಿಲ್  10ರಿಂದ ಮೇ 25ರವರೆಗೆ ಕ್ರಿಕೆಟ್ ತರಬೇತಿ ಶಿಬಿರ ನಡೆಯಲಿದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಉತ್ತಮ ರೀತಿಯಲ್ಲಿ ತರಬೇತಿ ಪಡೆದ ತರಬೇತುದಾರರು ಇಲ್ಲಿ ಯುವ ಕ್ರೀಡಾಪಟುಗಳಲ್ಲಿರುವ ಪ್ರತಿಭೆಗೆ ಮತ್ತಷ್ಟು ಉತ್ತೇಜನ ಹಾಗೂ ಹೊಸ ರೂಪು ನೀಡಲಿದ್ದಾರೆ.
ಹೆಚ್ಚಿನವ ವಿವರಗಳಿಗೆ
ಅಶ್ವಿನ್ 9481675900 (ಟೇಬಲ್ ಟೆನಿಸ್ )
ರಹೀಮ್  9036420858 (ಕ್ರಿಕೆಟ್ )
ನಿತಿನ್ 7892797488 (ಕ್ರಿಕೆಟ್ )
ಸಂತೋಷ್ 9483077325 (ಬ್ಯಾಡ್ಮಿಂಟನ್ )
ಅವರನ್ನು ಸಮರ್ಕಿಸಬಹುದು.
ಸ್ಥಳ -ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಲೈಟ್ ಹೌಸ್ ಹಳೆಯಂಗಡಿ, ವಿದ್ಯಾಮಂದಿರ ಹತ್ತಿರ, ಬೀಚ್ ರೋಡ್, ಪಡುಬಿದ್ರಿ

Related Articles