Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Cricket

ಕೆಎಸ್‌ಸಿಎ ಕ್ರಿಕೆಟ್‌ ಸಲಹಾ ಸಮಿತಿಗೆ ಕುಂಬ್ಳೆ, ಶ್ರೀನಾಥ್‌, ಜೋಶಿ

ಬೆಂಗಳೂರು: ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್‌‌ ಸಂಸ್ಥೆಯ ನೂತನ ಆಡಳಿತ ಸಮಿತಿಯು ರಾಜ್ಯದಲ್ಲಿ ಕ್ರಿಕೆಟ್‌ ಅಭಿವೃದ್ಧಿಗಾಗಿ ಹಾಗೂ ಕೆಎಸ್‌ಸಿಎ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ನೂತನ ಸಲಹಾ ಸಮಿತಿಯನ್ನು

Other sports

ರಾಷ್ಟ್ರೀಯ ಜೂನಿಯರ್‌ ಆಟ್ಯ-ಪಟ್ಯ ಕರ್ನಾಟಕ ಚಾಂಪಿಯನ್‌

ಚಂಡೀಗಢ: ಇಲ್ಲಿನ ಪಂಜಾಬ್‌ ವಿಶ್ವವಿದ್ಯಾನಿಲಯದಲ್ಲಿ ನಡೆದ 36ನೇ ರಾಷ್ಟ್ರೀಯ ಬಾಲಕ ಹಾಗೂ ಬಾಲಕಿಯರ ರಾಷ್ಟ್ರೀಯ ಆಟ್ಯಾ-ಪಟ್ಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಚಂದಗರಿ ಕ್ರೀಡಾ ಶಾಲೆಯ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Chandaragi

Football

ಮ್ಯಾಂಚೆಸ್ಟರ್ ಸಿಟಿ, ಜೈನ್ ಸ್ಪೋರ್ಟ್ಸ್‌ನಿಂದ ಹೊಸ ಫುಟ್ಬಾಲ್‌ ಶಾಲೆ

ಬೆಂಗಳೂರು,: ಮ್ಯಾಂಚೆಸ್ಟರ್ ಸಿಟಿ ಮತ್ತು ಜೈನ್ ಸ್ಪೋರ್ಟ್ಸ್ ಇಂದು ಜೈನ್ ಸ್ಪೋರ್ಟ್ಸ್‌ನಲ್ಲಿ ಹೊಸ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಶಾಲೆಯನ್ನು ಗ್ಲೋಬಲ್‌ ಕ್ಯಾಂಪಸ್‌ನಲ್ಲಿ ಆರಂಭಿಸಿವೆ., ಇದು ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ದಿ ಜೆಜಿಐ

Football

ಮೆಸ್ಸಿಯ ಎಡಗಾಲಿನ ವಿಮೆ ಮೊತ್ತ 8162 ಕೋಟಿ ರೂ!

ಬೆಂಗಳೂರು: ಭಾರತಕ್ಕೆ ಆಗಮಿಸಿದ ಅರ್ಜೆಂಟೀನಾದ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಎಲ್ಲಿಯೂ ಪ್ರದರ್ಶನ ಪಂದ್ಯವನ್ನಾಡಿರಲಿಲ್ಲ. ಕಾರಣ ಅವರ ಕಾಲಿಗೆ ಇರುವ ವಿಮೆ. ಅವರ ಎಡಗಾಲಿನ ವಿಮಾ ಮೊತ್ತ ಅವರ ಗಳಿಕೆಯ ಮೊತ್ತಕ್ಕಿಂತಲೂ ಜಾಸ್ತಿ ಇದೆ.

Cricket

ಚಿನ್ನಸ್ವಾಮಿ ಆಡಲು ಚೆನ್ನಾಗಿದೆ…. Let’s Play On

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ನಡೆಯುವುದಿಲ್ಲವೆಂದರೆ ಅದು ರಾಜ್ಯಕ್ಕೆ ಮಾತ್ರ ನಷ್ಟವಲ್ಲ, ಇಡೀ ದೇಶಕ್ಕೆ ನಷ್ಟವೆಂಬುದು ಕ್ರಿಕೆಟ್‌ ಜಗತ್ತಿಗೇ ಗೊತ್ತಿದೆ. ಇದನ್ನರಿತ ಕಾಂಗ್ರೆಸ್‌ ಸರಕಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಚಿವ ಸಂಪುಟ ಸಭೆಯಲ್ಲಿ

Hockey

ವಿಶ್ವಕಪ್‌ ಹಾಕಿ: ಸೋಲಂಚಿನಲಿ ಗೋಲ್ಮಿಂಚು ಭಾರತಕ್ಕೆ ಕಂಚು

ಚೆನ್ನೈ: ಅರ್ಜೆಂಟೀನಾ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಹಾಕಿ ತಂಡ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದೆ. ಈ ಹಿಂದೆ ಎರಡು ಬಾರಿ ನಾಲ್ಕನೇ ಸ್ಥಾನಕ್ಕೆ

Cycling

ಚಂದರಗಿ ಕ್ರೀಡಾ ಶಾಲೆಗೆ ಕೀರ್ತಿ ತಂದ ಹೊನ್ನಪ್ಪ ಧರ್ಮಟ್ಟಿ

ಚಂದರಗಿ: ಇತ್ತೀಚೆಗೆ ಒಡಿಶಾದಲ್ಲಿ ನಡೆದ 30ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಯ ವಿದ್ಯಾರ್ಥಿ ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Cricket

ಕೆಎಸ್‌ಸಿಎ ಚುನಾವಣೆ: ವೆಂಕಿ ಪಡೆಗೆ ಜಯಭೇರಿ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ ಅವರ ತಂಡ ಜಯ ಗಳಿಸಿದ್ದು, ತಾವು “ಗೇಮ್‌ ಚೇಂಜರ್‌” ಎಂಬುದನ್ನು ಸಾಬೀತುಪಡಿಸಿದ್ದಾರೆ. Venkatesh

School games

ಕ್ರೀಡಾ ಸಾಧನೆಗಾಗಿ SPOCO ಹೊಸ ಯೋಜನೆ: ಮೃಣಾಲಿನಿ ಪಟ್ಟಣ್‌

ಬೆಳಗಾವಿ: ಕಳೆದ ನಾಲ್ಕು ದಶಕಗಳಿಂದ ಶಿಕ್ಷಣದ ಜೊತೆಗೆ ಕ್ರೀಡೆಯನ್ನೂ ಪೋಷಿಸುತ್ತ ಬಂದಿರುವ, ದೇಶದ ಮೊದಲ ಕ್ರೀಡಾ ಶಾಲೆ ಚಂದರಗಿ ಕ್ರೀಡಾ ಶಾಲೆಯು ಕ್ರೀಡಾಭಿವೃದ್ಧಿಗಾಗಿ ಅನೇಕ ವಿನೂತನ ಯೋಜನೆಗಳನ್ನು ರೂಪಿಸಿದೆ ಎಂದು ಎಸ್‌.ಎಂ. ಕಲೂತಿ ಸಂಯಕ್ತ

Corporate sports

 ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬಿಜೋಯ್‌ಗೆ ಪ್ರಶಸ್ತಿ ಗರಿ

ಬೆಂಗಳೂರು: ಸಿಲಿಕಾನ್ ಸಿಟಿಯ ಚುಮು ಚುಮು ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸುವ ಮೂಲಕ 18ನೇ ಆವೃತ್ತಿಯ ‘ಫೋನ್ ಪೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್’ (ಬಿಎಂಎಂ) ಅನ್ನು ಯಶಸ್ವಿಗೊಳಿಸಿದ್ದಾರೆ. ಶನಿವಾರ (ಡಿ.6) ರಾತ್ರಿ ವೈಟ್‌ಫೀಲ್ಡ್‌ನ ಕೆಟಿಪಿಒ ಆವರಣದಲ್ಲಿ ನಡೆದ ಈ ಮ್ಯಾರಥಾನ್‌ ಹಬ್ಬಕ್ಕೆ ಸುಮಾರು 10,000ಕ್ಕೂ ಹೆಚ್ಚು ಓಟಗಾರರು ಸಾಕ್ಷಿಯಾದರು. Bengaluru Midnight Marathon: Naresh Thapa, Bijoya Burman ARE are champions ಈ ಬಾರಿಯ ಮ್ಯಾರಥಾನ್ ಅನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ, ಸಶಸ್ತ್ರ ಪಡೆಗಳಿಂದ 900ಕ್ಕೂ ಹೆಚ್ಚು ಯೋಧರು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ದಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಫಲಿತಾಂಶದ ಮುಖ್ಯಾಂಶಗಳು:  ಭಾರತೀಯ ನೌಕಾಪಡೆಯ ನರೇಶ್ ಥಾಪಾ ಅವರು ಪುರುಷರ ವಿಭಾಗದ ‘ಫುಲ್ ಮ್ಯಾರಥಾನ್’ (Full Marathon) ನಲ್ಲಿ 3 ಗಂಟೆ 41 ನಿಮಿಷ 08 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇತ್ತ ಮಹಿಳೆಯರ ವಿಭಾಗದಲ್ಲಿ ಬಿಜೋಯ ಬರ್ಮನ್ ಅವರು 3 ಗಂಟೆ 35 ನಿಮಿಷ 34 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ರಶಸ್ತಿ ಬಾಚಿಕೊಂಡರು. ಹಾಫ್ ಮ್ಯಾರಥಾನ್ ವಿಭಾಗದಲ್ಲಿ ಭಾರತೀಯ ಸೇನೆಯ ಶಿವಂ ಸಿಂಗ್ ತೋಮರ್ (1:06:33) ಮತ್ತು ಅಮಿತ್ ಸಿಂಗ್ (1:06:34) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು. ಮಹಿಳೆಯರ ಹಾಫ್ ಮ್ಯಾರಥಾನ್‌ನಲ್ಲಿ ನೀತು ಕುಮಾರಿ (1:23:03) ಪ್ರಥಮ ಸ್ಥಾನ ಪಡೆದರು. ಸಂಭ್ರಮದ ರಾತ್ರಿ: ರೋಟರಿ ಬೆಂಗಳೂರು ಐಟಿ ಕಾರಿಡಾರ್ (RBITC) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೇವಲ ಓಟವಷ್ಟೇ ಅಲ್ಲದೆ, ಡೊಳ್ಳು ಕುಣಿತ, ಲೈವ್ ಮ್ಯೂಸಿಕ್ ಬ್ಯಾಂಡ್‌ಗಳು ಮತ್ತು ರೋಬೋಟ್ ಪ್ರದರ್ಶನಗಳು ಕ್ರೀಡಾಪಟುಗಳನ್ನು ರಂಜಿಸಿದವು. ಅಂಗವಿಕಲರಿಗೆ ಮೀಸಲಾದ ‘ಮೋಟಿವೇಶನ್ ಇಂಡಿಯಾ’ ಸಂಸ್ಥೆಯ 50ಕ್ಕೂ ಹೆಚ್ಚು ವಿಶೇಷ ಚೇತನರು ವ್ಹೀಲ್‌ಚೇರ್‌ಗಳ ಮೂಲಕ 5ಕೆ ಫನ್ ರನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ಅವರು ಕ್ರೀಡಾಪಟುಗಳ ಉತ್ಸಾಹವನ್ನು ಶ್ಲಾಘಿಸಿದರು. ಪ್ರಮುಖ ವಿಜೇತರ ಪಟ್ಟಿ: *   ಫುಲ್ ಮ್ಯಾರಥಾನ್ (ಪುರುಷರು): ನರೇಶ್ ಥಾಪಾ (ಚಿನ್ನ), ನವೀನ್ ಕುಮಾರ್ (ಬೆಳ್ಳಿ). *   ಫುಲ್ ಮ್ಯಾರಥಾನ್ (ಮಹಿಳೆಯರು): ಬಿಜೋಯ ಬರ್ಮನ್ (ಚಿನ್ನ), ಕೃಷ್ಣ ಕೊಹ್ಲಿ (ಬೆಳ್ಳಿ). *