ರಾಷ್ಟ್ರೀಯ ದಾಖಲೆ ನಿರ್ಮಿಸಿದ ನಿತೇಶ್ ಪೂನಿಯಾ

0
225
ರಾಂಚಿ:

ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ನ ಮೂರನೇ ದಿನ ಹ್ಯಾಮರ್ ಥ್ರೋ ಪಟು ನಿತೇಶ್ ಪೂನಿಯಾ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಪೂನಿಯಾ ಅವರು ಹ್ಯಾಮರ್ ಅನ್ನು 81.47 ಮೀ ಎಸೆಯುವ ಮೂಲಕ ಆಶೀಶ್ ಜಾಕರ್ ಅವರ 75.45 ಮೀ ದಾಖಲೆಯನ್ನು ಮುರಿದರು. ಇದರೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಅಲ್ಲದೆ, ನಿತೇಶ್ ಪೂನಿಯಾ ಅವರು ಪ್ರಸಕ್ತ ವರ್ಷದಲ್ಲಿ 18 ವಯೋಮಿತಿಯ ವಿಶ್ವದ ನಾಲ್ಕನೇ ಅತ್ಯುತ್ತಮ ಎಸೆತದ ಕೀರ್ತಿಗೆ ಭಾಜನರಾದರು. ಇನ್ನೂ, ರಾಜಸ್ಥಾನದ ಉಪದೇಶ್ ಸಿಂಗ್ ಅವರು 66.93 ಮೀ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತರಾದರು. ಆ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡರು. ರಾಜಸ್ಥಾನದ ಮತ್ತೊಬ್ಬ ಹ್ಯಾಮರ್ ಪಡು 65.06 ಎಸೆಯುವ ಮೂಲಕ ಕಂಚಿನ ಪದಕ ಪಡೆದರು.