Saturday, September 30, 2023

ಡೆಲ್ಲಿ ಡೇರ್‌ ಡೆವಿಲ್ಸ್ ಸೇರ್ಪಡೆಯಾದ ಧವನ್

ದೆಹಲಿ:

ಟೀಮ್  ಇಂಡಿಯಾದ ಆರಂಭಿಕ ಆಟಗಾರ ಶಿಖರ್  ಧವನ್ ಅವರು ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ತಂಡದ ಪರ ಆಡಲಿದ್ದಾರೆ ಎಂದು  ತಿಳಿದು ಬಂದಿದೆ.

ಪ್ರಸಕ್ತ ಆವೃತ್ತಿಯಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. ಸನ್ ರೈಸರ್ಸ್ ಫ್ರಾಂಚೈಸಿ ನೀಡುವ ಸಂಭಾವನೆಯ ಬಗ್ಗೆ ಧವನ್‌ಗೆ ಅಸಮಾಧಾನವಿರುವುದರಿಂದ 10 ವರ್ಷಗಳ ಬಳಿಕ ತವರಿನ ತಂಡಕ್ಕೆ  ಸೇರ್ಪಡೆಯಾಗುತ್ತಿದ್ದಾರೆ. ಹೈದರಾಬಾದ್ ತಂಡಕ್ಕೆ ಆಲ್‌ರೌಂಡರ್ ವಿಜಯ್ ಶಂಕರ್, ಸ್ಪಿನ್ನರ್ ಶಹಬಾಜ್ ನದೀಮ್ ಮತ್ತು ಯುವ ಆಟಗಾರ ಅಭಿಷೇಕ್ ಶರ್ಮಾ ಅವರು ಸೇರ್ಪಡೆಯಾಗಲಿದ್ದಾರೆ.

Related Articles