Friday, June 14, 2024

49:1   ಇದು ಮೆಸ್ಸಿ ಕಾಲ್ಚೆಂಡಿನ ಕೋಲ್ಮಿಂಚು

ಪ್ರದೀಪ್‌ ಪಡುಕರೆ / Pradeep Padukare

ಮೂರುವರೆ ವರ್ಷಗಳ ಅಂತರದಲ್ಲಿ ಮೂರು ಪ್ರತಿಷ್ಠಿತ ಫೈನಲ್ಸ್ ಸೋತಿದ್ದ ಅರ್ಜೆಂಟೀನಾ ಒಂದೇ ವರ್ಷದಲ್ಲಿ ಮೂರು ಮೇಜರ್ ಟ್ರೋಪಿ ಎತ್ತಿ ಹಿಡಿದಿತ್ತು. ಕೊನೆಯ ನಾಲ್ಕು ವರ್ಷದಲ್ಲಿ ಆಡಿದ ಭರ್ತಿ ಐವತ್ತು ಪಂದ್ಯಗಳಲ್ಲಿ Argentina just one loss in last 50 games ಈ ತಂಡ ಸೋತಿದ್ದು ಕೇವಲ ಒಂದೇ ಒಂದು ಪಂದ್ಯ.

ಇಡಿ ಜಗತ್ತನ್ನೆ ಆವರಿಸಿದ ಆಟವೆಂದರೆ ಅದು ಪುಟ್ಬಾಲ್. ಫುಟ್ಬಾಲ್ ಅಂದಾಕ್ಷಣ ಮೊದಲು ನೆನಪಿಗೆ ಬರುವುದು ಪಿಲೆ ಮತ್ತು ಮರಡೋನಾ. ಫುಟ್ಬಾಲನ್ನೆ ಪೂಜಿಸುವ ಸಾಂಬ ನಾಡು ಬ್ರೇಜಿಲ್‌ಗೆ ಮೂರು ವಿಶ್ವಕಪ್ ಗೆದ್ದು ಕೊಟ್ಟ ಪಿಲೆ ಒಂದು ಕಡೆ ದೀ ಗ್ರೇಟ್ ಅನ್ನಿಸಿದರೆ‌, ಪುಟ್ಬಾಲನ್ನೆ ಉಸಿರಾಡುವ ದೇಶ ಅರ್ಜೇಂಟಿನಾ ಪಾಲಿಗೆ ಏಕಾಂಗಿಯಾಗಿ ಕನಸಿನ ವಿಶ್ವಕಪ್ ತಂದುಕೊಟ್ಟ ಮರಡೋನಾ ಆ ದೇಶದ ಪಾಲಿಗೆ ದಿ  ಪುಟ್ಬಾಲ್ ಗಾಡ್ ಆಗುತ್ತಾರೆ.

ಮರಡೋನಾ‌ ನಿವೃತ್ತಿಯ ನಂತರ ಕಾಲ್ಚೆಂಡಿನ ವಿಶ್ವಕಪ್‌‌ನಲ್ಲಿ ಅರ್ಜೆಂಟೀನಾ ಅಂತದ್ದೇನು ಸಾಧನೆ ಮಾಡಿರಲಿಲ್ಲ. ಎರಡು ದಶಕಗಳ ನಂತರ ಲಿಯೋನೆಲ್ ಮೆಸ್ಸಿ ಎಂಬ ಪುಟ್ವಾಲ್‌ನ ಜೀನಿಯಸ್ ಹುಡುಗ ಆ ದೇಶಕ್ಕೆ ಮತ್ತೊಂದು ವಿಶ್ವಕಪ್‌‌ ಗೆಲ್ಲುವ ಸಣ್ಣ ಕನಸೊಂದು ಮೂಡಿಸಿದ. 2006ರಲ್ಲಿ ಮೆಸ್ಸಿ ಹೊಸಬ, 2010 ರಲ್ಲಿ 23 ಪ್ರಾಯದ ಮೆಸ್ಸಿ ಲಯದಲ್ಲಿದ್ದರು ಅರ್ಜೆಂಟೀನಾ ಕ್ವಾರ್ಟರ್ ಪೈನಲ್‌ನಲ್ಲಿ ಜರ್ಮನಿ ಎದುರು ಹೀನಾಯ ಸೋಲುಂಡು ನಿರ್ಗಮಿಸಿತು.

ಬ್ರೆಜಿಲ್‌ನಲ್ಲಿ ನಡೆದ 2014 ವಿಶ್ವಕಪ್ ಸಮಯ ಮೆಸ್ಸಿ ಆಗ ಉಚ್ಛ್ರಾಯ ಫಾರ್ಮಿನಲ್ಲಿದ್ದ. ವಿಶ್ವದಲ್ಲಿನ ಅನೇಕ ಸಾಕರ್ ದಾಖಲೆಗಳನ್ನ ಉಡಿಸ್ ಮಾಡಿ ಬಿಟ್ಟಿದ್ದ. ಒಬ್ಬ ಆಟಗಾರನಿಗೆ ಒಂದು ಬ್ಯಾಲನ್‌ ಡಿ’ಓರ್ ಗೆಲ್ಲೋದು ಜೀವಮಾನದ ದೊಡ್ಡ ಸಾಧನೆ, ಪ್ರತಿಯೊಬ್ಬ ಆಟಗಾರನ ಕನಸು‌ಕೂಡ. ಹಾಗಿರುವಾಗ ಆ ಸಮಯದಲ್ಲಿ ಸತತ ನಾಲ್ಕು ಬ್ಯಾಲನ್ ಡಿ ಓರ್ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಮೆಸ್ಸಿ.

ಇಪ್ಪತ್ತನಾಲ್ಕು ವರ್ಷಗಳ ನಂತರ ಅರ್ಜೆಂಟೀನಾಕ್ಕೆ ವಿಶ್ವಕಪ್ ಆಸೆ ಟಿಸಿಲೊಡೆದಿತ್ತು..ಕಾರಣ ಮೆಸ್ಸಿ. ಮೆಸ್ಸಿಯ ಫಾರ್ಮ್, ಪಂಡಿತರ ಲೆಕ್ಕಚಾರದಂತೆ ಅರ್ಜೆಂಟೀನಾ ಕೂಡ ಫೈನಲ್‌ಗೆ ನೆಗೆಯಿತು. ಅದೃಷ್ಟದ ಕೊರತೆಯಿಂದ ಜರ್ಮನಿ ವಿರುಧ್ಧ ಫೈನಲ್ ಸೋತಿತು ಅರ್ಜೆಂಟೀನಾ.

ಅದಾದ ನಂತರ ಪ್ರತಿಷ್ಠಿತ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಎರಡು ಬಾರಿ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಎಡವಿತು. ಸತತ ಎರಡು ಬಾರಿಯು  ಸೋತಿದ್ದು ತನಗಿಂತ ಕೆಳ ಕ್ರಮಾಂಕದ ಚಿಲಿ ಎದುರು! ಖುದ್ದು ಪೆನಾಲ್ಟಿ ಮಿಸ್ ಮಾಡಿದ ನಾಯಕ ಮೆಸ್ಸಿ ಮೂರು ಫೈನಲ್ ಸೋಲಿನ ಶಾಕ್ ತಡೆಯಲಾರದೆ ಮೈದಾನದಲ್ಲೆ ಅತ್ತರು, ನೋವಿನಲ್ಲೆ ಅರ್ಜೆಂಟೀನಾ ಪರ ನಿವೃತ್ತಿ ಘೋಷಿಸಿದರು..! ಆದರೆ ಅಭಿಮಾನಿಗಳ ಮತ್ತು ದೇಶದ ಅಧ್ಯಕ್ಷರ ಮನವಿಗೆ ಸ್ಪಂದಿಸಿ ವಾಪಸ್ ಅರ್ಜೆಂಟೀನಾ ಜೆರ್ಸಿ ತೊಟ್ಟರು ಮೆಸ್ಸಿ.  ಅದರೆ ಸೋಲು ಬೆನ್ನು ಬಿಡಲೆ ಇಲ್ಲ. 2019ರ  ‘ಕೋಪಾ ಅಮೆರಿಕಾ’ ಸೆಮಿಯಲ್ಲಿ ಮತ್ತೊಮ್ಮೆ ಸೋತೆ ಹೋಯಿತು ಮೆಸ್ಸಿಯ ಅರ್ಜೆಂಟೀನಾ.

ಮುಂದಿನದ್ದು ಲಿಯೋನೆಲ್ ದ್ವಯರ ಜೊತೆಯಾಟ, ಸ್ರಷ್ಟಿಸಿದ್ದು ಇತಿಹಾಸ.!

ಪ್ರತಿ ಬಾರಿ ಅಂತಿಮ ಘಟ್ಟದಲ್ಲಿ ಎದುರಾಗುವ ಸತತ ಸೋಲಿನ ಸುಳಿಗೆ ಸಿಲುಕಿಹೋಗಿದ್ದ ಅರ್ಜೆಂಟೀನಾ ಫುಟ್ಬಾಲ್ ತಂಡಕ್ಕೆ ಯುವ ಕೋಚ್ ಜೊತೆಯಾದ, ಅವನ ಹೆಸರು ಲೆಯೋನಲ್ ಸ್ಕೋಲನಿ. ಈ ಸ್ಕೋಲನಿ ಮೆಸ್ಸಿಯ ಹಳೆ ಟೀಮ್ ಮೇಟ್. ಸ್ಕೋಲನಿ ಬಂದ ನಂತರ ಅರ್ಜೆಂಟೀನಾಕ್ಕೆ ಹೊಸ ಹುರುಪು ಬಂತು.. ಲುಕ್ ಬದಲಾಯಿತು, ಲಕ್ ಕೂಡ ಕೈ ಹಿಡಿದು ಹೊದಲ್ಲೆಲ್ಲ ಜಯಬೇರಿ ಮೊಳಗಿಸಿ, ಮತ್ತೊಂದು ಕೋಪ ಅಮೇರಿಕಾ ಫೈನಲ್ ಹಂತ ಕೂಡ ತಲುಪಿತು.

ಈ ಬಾರಿ ಅರ್ಜೆಂಟೀನಾ ಹಣೆಬರಹ ಬದಲಾಯಿತು. ಅಲ್ಲಿ ಹಾಲಿ ಚಾಂಪಿಯನ್ ಬ್ರೆಜಿಲನ್ನ ಅದರದೆ ನೆಲದಲ್ಲಿ ಮಣಿಸಿ 28 ವರ್ಷಗಳ ನಂತರ ಪ್ರತಿಷ್ಠಿತ ಟ್ರೋಪಿಯೊಂದನ್ನ ಗೆದ್ದಿತು ಅರ್ಜೆಂಟೀನಾ. ನಾಲ್ಕು ಫೈನಲ್ ಸೋತಿದ್ದ ಮೆಸ್ಸಿಗೆ ದೇಶದ ಪರ ಮೊದಲ ಟ್ರೋಪಿ ಎತ್ತಿದ ನವೋಲ್ಲಾಸ.

ನಂತರ ಯುರೋ ಚಾಂಪಿಯನ್ ಇಟಲಿಯನ್ನ ಸೋಲಿಸಿ ‘Finalissima’ ಟ್ರೋಫಿ ಕೂಡ ಗೆದ್ದು ಯುರೋಪ್ ಅಧಿಪತ್ಯಕ್ಕು ಸಡ್ಡು ಹೊಡೆದು ಸತತ ಮೂವತ್ತೈದು ಗೆಲುವಿನೊಂದಿಗೆ ಕತಾರ್ ವಿಶ್ವ‌ಕಪ್‌ಗೆ ಸನ್ನದ್ಧವಾಯ್ತು ಮೆಸ್ಸಿ ಪಡೆ. ಆದರೆ ಅರ್ಜೆಂಟೀನಾದ ಅಜೇಯ ಓಟಕ್ಕೆ ವಿಶ್ವಕಪ್  ಮೊದಲ ಪಂದ್ಯದಲ್ಲೆ ಶಾಕಿಂಗ್ ಆಘಾತ, ಸಣ್ಣ ತಂಡ ಸೌದಿ ಅರೆಬೀಯಾ ಮೆಸ್ಸಿ ಪಡೆಯನ್ನು ಸೋಲಿಸಿ ಪುಟ್ಬಾಲ್ ಜಗತ್ತಿಗೆ ಶಾಕ್ ನೀಡಿತು‌.

ಆದರೆ ಈ ಬಾರಿ ಮೆಸ್ಸಿ ಮತ್ತು ಸ್ಕಾಲೋನಿ ಹೋಪ್ ಬಿಡಲಿಲ್ಲ, ಖುದ್ದು ಮೆಸ್ಸಿ ಜವಬ್ದಾರಿ ಹೊತ್ತು ತಂಡವನ್ನ ಫೈನಲ್‌ಗೆ ತಂದು ನಿಲ್ಲಿಸಿದರು.

ಹಾಲಿ ವಿಶ್ವ ಚಾಂಪಿಯನ್ ಫ್ರಾನ್ಸ್ ವಿರುಧ್ಧ ನಡೆದ ಇತಿಹಾಸದ ಸರ್ವಶ್ರೇಷ್ಠ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ವಿಶ್ವವನ್ನೆ ಗೆದ್ದು ಬೀಗಿತು Team Lionel. ಮೆಸ್ಸಿ ಮತ್ತು ಸ್ಕಾಲೋನಿ ಜುಗಲ್‌ಬಂದಿಯ ಗೆಲುವಿನ ನಾಗಲೋಟ ಅಲ್ಲಿಗೂ ನಿಲ್ಲಲಿಲ್ಲ..ಮುಂದುವರೆಯಿತು

2026ರ ವಿಶ್ವಕಪ್ ಕ್ವಾಲಿಫೈರ್‌ನಲ್ಲಿ ಮೊನ್ನೆ ಉರುಗ್ವೆಯನ್ನ ಮಣಿಸುವ ಮೂಲಕ ನಾಲ್ಕು ವರ್ಷಗಳಲ್ಲಿ ಅರ್ಜೆಂಟೀನಾ ಆಡಿದ್ದು ಐವತ್ತು ಪಂದ್ಯಗಳು. ಸೋತದ್ದು ಕೇವಲ ಒಂದೇ ಒಂದು ಪಂದ್ಯ..!

Related Articles