Sunday, May 26, 2024

ಪಾಕ್‌ ಆಟಗಾರರಿಗೆ FEAR ಅಲ್ಲ FEVER !!

ಬೆಂಗಳೂರು: ಭಾರತ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ಪಾಕಿಸ್ತಾನದ ಆಟಗಾರರು ಜ್ವರಕ್ಕೆ ತುತ್ತಾಗಿರುವುದು Pakistan Cricket players affected by fever ತಂಡದ ಆಡಳಿತ ಮಂಡಳಿಗೆ ತಲೆನೋವಾಗಿದೆ.

ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಆದರೆ ಮಂಗಳವಾರ ಹೆಚ್ಚಿನ ಆಟಗಾರರು ಜ್ವರದ ಕಾರಣ ಅಂಗಣಕ್ಕಿಳಿದಿರಲಿಲ್ಲ.

ತಂಡದ ಆಟಗಾರ ಅಬ್ದುಲ್ಲಾ ಶಫಿಖ್‌ ಅವರಿಗೆ ಜ್ವರ ತೀವ್ರವಾಗಿದ್ದು, ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ವೇಗದ ಬೌಲರ್‌ ಶಾಹೀನ್‌ ಆಫ್ರಿದಿ ಸೌದ್‌ ಶಕೀಲ್‌ ಮತ್ತು ಜಮಾನ್‌ ಖಾನ್‌ ಕೂಡ ಜ್ವರದಿಂದ ಬಳಲುತ್ತಿದ್ದಾರೆ.

ಅಹಮದಾಬಾದ್‌ನಲ್ಲಿ ಶನಿವಾರ ಭಾರತ ವಿರುದ್ಧದ ಪಂದ್ಯದಲ್ಲಿ ಉಸ್ಮಾನ್‌ ಮಿರ್‌ ಅವರು ಆಡಿರಲಿಲ್ಲ. ನೆದರ್ಲೆಂಡ್ಸ್‌ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆದ್ದ ಬಳಿಕ ಭಾರತದ ವಿರುದ್ಧ ಸೋತ ಪಾಕ್‌ ತಂಡ ಭಾನುವಾರ ಬೆಂಗಳೂರಿಗೆ ಆಗಮಿಸಿತ್ತು.

ತಂಡದಲ್ಲಿ ಕೆಲವು ಆಟಗಾರರು ಜ್ವರದಿಂದ ಬಳಲುತ್ತಿದ್ದು, ಶುಕ್ರವಾರದ ಪಂದ್ಯದ ವೇಳೆ ಸಂಪೂರ್ಣ ಗುಣಮುಖರಾಗಲಿದ್ದಾರೆ. ಜ್ವರಕ್ಕೆ ತುತ್ತಾಗಿರುವ ಆಟಗಾರರು ವೈದ್ಯರ ನಿಗಾದಲ್ಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

Related Articles