Saturday, July 27, 2024

ಆನಂದ್ ಕುಮಾರ್ ಫೈನಲ್‌ಗೆ

ಸ್ಪೋರ್ಟ್ಸ್ ಮೇಲ್ ವರದಿ:

ಬ್ರೆಜಿಲ್‌ನ ಸಾವೋಪೌಲೋದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ಮಾಜಿ ನಂ. 1 ಆಟಗಾರ ಕರ್ನಾಟಕದ ಆನಂದ್ ಕುಮಾರ್  ಫೈನಲ್ ತಲುಪಿದ್ದಾರೆ.

ಜರ್ಮನಿಯ ಜಾನ್ ನಿಕಲಾಸ್ ಪೋಟ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಆನಂದ್ 12-21, 21-11, 21-15 ಅಂತರದಲ್ಲಿ ಜಯ ಗಳಿಸಿ  ಫೈನಲ್ ತಲುಪಿದರು. ಅನುಭವಿ ಆಟಗಾರ ಪೋಟ್ ವಿರುದ್ಧ ಆನಂದ್ ಮೊದಲ ಸೆಟ್‌ನಲ್ಲಿ ಸೋಲನುಭವಿಸಿದರೂ ನಂತರದ ಎರಡೂ ಸೆಟ್‌ಗಳಲ್ಲಿ ಯಶಸ್ಸು ಕಂಡು ಅಂತಿಮ ಹಂತಕ್ಕೆ ಕಾಲಿಟ್ಟರು.
 ಭಾರತದ ಇನ್ನೋರ್ವ ಸ್ಪರ್ಧಿ ಸುಖಾಂತ್ ಜರ್ಮನಿಯ ಟಿಮ್ ಹಾಲರ್ ವಿರುದ್ಧ 21-6,21-16 ಅಂತರದಲ್ಲಿ ಗೆದ್ದು  ಫೈನಲ್ ತಲುಪಿದರು.

Related Articles