Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಗೌತಮ್ ದಾಳಿಗೆ ಕುಸಿದ ರೈಲ್ವೆ, ಕರ್ನಾಟಕಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ 

ಜಯಕ್ಕಾಗಿ 362 ರನ್ ಗುರಿ ಹೊತ್ತ ರೈಲ್ವೆ ತಂಡ ಕೆ. ಗೌತಮ್ ಅವರ ದಾಳಿಗೆ ಸಿಲುಕಿ ಕೇವಲ 185 ರನ್‌ಗೆ ಆಲೌಟ್ ಆಗುವ ಮೂಲಕ ಕರ್ನಾಟಕ ರಣಜಿ ತಂಡ ಅಮೂಲ್ಯ 6 ಅಂಕಗಳನ್ನು ಗಳಿಸಿದೆ.

ಶಿವಮೊಗ್ಗದಲ್ಲಿ ನಡೆದ ಪಂದ್ಯದಲ್ಲಿ ರೈಲ್ವೆ ತಂಡಕ್ಕೆ ಅಂತಿಮ ದಿನದಲ್ಲಿ 318 ರನ್ ಗಳಿಸಬೇಕಾಗಿತ್ತು. ಟೀ ವಿರಾಮದ ವೇಳೆ ರೈಲ್ವೆ ತಂಡ 159 ರನ್ ಗಳಿಸಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಪಂದ್ಯ ಡ್ರಾದ ಕಡೆಗೆ ಮುಖ ಮಾಡಿತ್ತು. ಆದರೆ ಟೀ ವಿಮಾದ ನಂತರ ಕೇವಲ 61 ಎಸೆತಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ ರೈಲ್ವೆ ತಂಡ  ಕೇವಲ 185 ರನ್ ಗಳಿಸಿತು. ಕರ್ನಾಟ 176 ರನ್ ಜಯ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಆರು ಪಂದ್ಯಗಳನ್ನು ಮುಗಿಸಿರುವ ಕರ್ನಾಟಕ ತಂಡ 2 ಜಯ, 1 ಸೋಲು ಹಾಗೂ 3 ಡ್ರಾ ಮೂಲಕ 21 ಅಂಕ ಗಳಿಸಿತು.
ಕೆ. ಗೌತಮ್ 24 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ ಅಮೂಲ್ಯ ಆರು ವಿಕೆಟ್ ಗಳಿಕೆಯ ಸಾಧನೆ ಮಾಡಿದರು. ಶ್ರೇಯಸ್ ಗೋಪಾಲ್ 2 ವಿಕೆಟ್ ಗಳಿಸಿದರು.

administrator