Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಯೋನೆಕ್ಸ್–ಸನ್‌ರೈಸ್‌ ಕೆಬಿಎ ಡೈಮಂಡ್‌ ಜ್ಯುಬಿಲಿ ಚಾಲೆಂಜ್‌ಗೆ ಚಾಲನೆ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ (ಕೆಬಿಎ)ಯಲ್ಲಿ ನಡೆಯುತ್ತಿರುವ ಯೋನೆಕ್ಸ್–ಸನ್‌ರೈಸ್‌ ಕೆಬಿಎ ಡೈಮಂಡ್‌ ಜ್ಯುಬಿಲಿ ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬೆಂಗಳೂರು 2026 ಟೂರ್ನಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು ಇಂದು ಚಾಲನೆ ನೀಡಿದರು. The Yonex–Sunrise KBA Diamond Jubilee India International Challenge Bengaluru 2026 was inaugurated D. K. Shivakumar, Chief Minister of Karnataka.

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಎಂ. ಆರ್. ಪೂವಮ್ಮ ಹಾಗೂ ಕೆಬಿಎ ಅಧ್ಯಕ್ಷ  ಕುಮಾರ್‌ ಬಂಗಾರಪ್ಪ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಯೋಜಿಸಿರುವ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೂರ್ನಿಯು 2026ರ ಅಕ್ಟೋಬರ್‌ 27ರಿಂದ ನವೆಂಬರ್‌ 1ರವರೆಗೆ ನಡೆಯಲಿದೆ. ಕೆಬಿಎಯ 75ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಟೂರ್ನಿಯನ್ನು ಆಯೋಜಿಸಲಾಗಿದ್ದು, ಕರ್ನಾಟಕದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯ ಉತ್ತೇಜನ ಮತ್ತು ಅಭಿವೃದ್ಧಿಗೆ ಕೆಬಿಎ ಸಲ್ಲಿಸಿರುವ 75 ವರ್ಷಗಳ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಟೂರ್ನಿಗೆ ವಿಶ್ವದ ವಿವಿಧ ಭಾಗಗಳಿಂದ 339 ಪ್ರವೇಶಗಳು ಬಂದಿದ್ದು, ಸುಮಾರು 15 ದೇಶಗಳ 60 ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇವರೊಂದಿಗೆ ಭಾರತದ ಪ್ರಮುಖ ಬ್ಯಾಡ್ಮಿಂಟನ್‌ ಆಟಗಾರರೂ ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಮಹತ್ವದ ವೇದಿಕೆಯಾಗಿದ್ದು, ಭಾರತೀಯ ಆಟಗಾರರಿಗೆ ಜಾಗತಿಕ ಮಟ್ಟದ ಪ್ರತಿಭೆಗಳೊಂದಿಗೆ ಸ್ಪರ್ಧಿಸುವ ಮತ್ತು ಅನುಭವ ಪಡೆಯುವ ಅಮೂಲ್ಯ ಅವಕಾಶವನ್ನು ಒದಗಿಸಲಿದೆ.

ಕರ್ನಾಟಕದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯನ್ನು ಮತ್ತಷ್ಟು ಬಲಪಡಿಸುವುದು, ಉದಯೋನ್ಮುಖ ಪ್ರತಿಭೆಗಳಿಗೆ ಉತ್ತೇಜನ ನೀಡುವುದು ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಕೂಟಗಳನ್ನು ಬೆಂಗಳೂರಿಗೆ ತರುವುದು ಸೇರಿದಂತೆ ಕೆಬಿಎಯ ನಿರಂತರ ಬದ್ಧತೆಯನ್ನು ಈ ಟೂರ್ನಿ ಪ್ರತಿಬಿಂಬಿಸುತ್ತದೆ.

ಸ್ಪರ್ಧೆಗಳು ನವೆಂಬರ್‌ 1, 2026ರವರೆಗೆ ಮುಂದುವರಿಯಲಿದ್ದು, ಅಂದು ನಡೆಯಲಿರುವ ಫೈನಲ್‌ ಪಂದ್ಯಗಳೊಂದಿಗೆ ಟೂರ್ನಿ ಮುಕ್ತಾಯಗೊಳ್ಳಲಿದೆ.


administrator