Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

30 ವರ್ಷಗಳ ಬಳಿಕ ಯೋಧನ ಮೃತದೇಹ ತಾಯ್ನಾಡಿಗೆ ತರಲು ಯತ್ನ

ಹೊಸದಿಲ್ಲಿ: 30 ವರ್ಷಗಳ ಹಿಂದೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ ಏರಲು ಹೋಗಿ ದುರಂತ ಸಾವನ್ನು ಕಂಡು, ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ (ITBP) ಪಡೆಯ ಯೋಧರೊಬ್ಬರ ಮೃತದೇಹವನ್ನು ತಾಯ್ನಾಡಿಗೆ ತರಲು ಭಾರತ ಸರಕಾರ ಮುಂದಾಗಿದೆ. ಆದರೆ ಅದು ಮತ್ತೆ ಸಾವಿನ ಕದ ತಟ್ಟಿದಷ್ಟೇ ಅಪಾಯಕಾರಿ. The Indian government is planning to repatriate the body of Lance Naik Dorje Morup, a soldier of the Indo-Tibetan Border Police (ITBP), who tragically died while climbing Mount Everest 30 years ago.

1996 ಮೇ ತಿಂಗಳಲ್ಲಿ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಪಡೆಯ ಆರು ಮಂದಿ ಯೋಧರು ಮೌಂಟ್‌ ಎವರೆಸ್ಟ್‌ ಏರಲು ತೀರ್ಮನಿಸಿದರು. ಇವರು ಆಯ್ಕೆಮಾಡಿಕೊಂಡ ಈಶಾನ್ಯ ಭಾಗದ ಕಠಿಣ ಮಾರ್ಗ. ಪ್ರತಿಕೂಲ ಹವಮಾನದ ಕಾರಣ ಮೂವರು ಸಾಹಸ ಆರೋಹಣದಿಂದ ಹಿಂದೆ ಸರಿದರು. ಆದರೆ ಲ್ಯಾನ್ಸ್‌ ನಾಯಕ ಡೋರ್ಜೆ ಮೊರುಪ್‌, ತ್ಸೆವಾಂಗ್‌ ಪಾಲ್ಜೋರ್‌ ಹಾಗೂ ಇನ್ನೋರ್ವ ಯೋಧ ಸುಬೇದಾರ್ ತ್ಸೆವಾಂಗ್ ಸಮನ್ಲಾ ಆರೋಹಣವನ್ನು ಮುಂದುವರಿಸುತ್ತಾರೆ. ಎವರೆಸ್ಟ್‌ ಶಿಖರದ 27,900 ಅಡಿ ಎತ್ತರದಲ್ಲಿ ಹಿಮಪಾತವಾಗಿ ಮೂವರು ಸಾವನ್ನಪ್ಪುತ್ತಾರೆ. ಇಬ್ಬರ ಮೃತದೇಹ ಮಂಜಿನಲ್ಲಿ ಮರೆಯಾಗುತ್ತದೆ. ಒಬ್ಬ ಯೋಧನ ಮೃತದೇಹ “ಗ್ರೀನ್‌ ಬೂಟ್‌” ಎಂಬ ಅಪಾಯಕಾರಿ ವಲಯವಾಗಿ ಕುಖ್ಯಾತಿ ಪಡೆಯುತ್ತದೆ. ಲ್ಯಾನ್ಸ್‌ ನಾಯಕ ಡೋರ್ಜೆ ಮೊರುಪ್‌ ತಿಳಿ ಹಸಿರು ಬಣ್ಣದ ಟ್ಟಕ್ಕಿಂಗ್‌ ಶೂ ಧರಿಸಿದ್ದು, ಇದರಿಂದಾಗಿ ಅವರ ಮೃತ ದೇಹವನ್ನು ಗ್ರೀನ್‌ ಬೂಟ್‌ ಎಂದು ಕರೆಯುತ್ತಿದ್ದರು. (Green Boots) ಇತ್ತೀಚಿಗೆ ಮೃತ ದೇಹದ ಡಿಎನ್‌ಎ ಪರೀಕ್ಷೆ ಮೂಲಕ ಅದು ITBP ಯ ಲ್ಯಾನ್ಸ್‌ ನಾಯಕ ಡೋರ್ಜೆ ಮೊರುಪ್‌ ಅವರದ್ದೆಂದು ಖಚಿತವಾಗಿದೆ.

ಲ್ಯಾನ್ಸ್ ನಾಯಕ್ ಡೋರ್ಜೆ ಮೊರುಪ್:

ಇತ್ತೀಚಿನ ವರದಿಗಳ ಪ್ರಕಾರ, ಹಲವು ವರ್ಷಗಳಿಂದ “ಗ್ರೀನ್ ಬೂಟ್ಸ್” (Green Boots) ಎಂದು ಕರೆಯಲಾಗುತ್ತಿದ್ದ ಎವರೆಸ್ಟ್‌ನಲ್ಲಿರುವ ಮೃತದೇಹವು ಈ ಹಿಂದೆ ಭಾವಿಸಿದ್ದಂತೆ ತ್ಸೆವಾಂಗ್ ಪಾಲ್ಜೋರ್ ಅವರದ್ದಲ್ಲ. ಡಿಎನ್‌ಎ ಪರೀಕ್ಷೆಯ ಬಳಿಕ ಅದು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP) ಯೋಧ ಲ್ಯಾನ್ಸ್ ನಾಯಕ್ ಡೋರ್ಜೆ ಮೊರುಪ್ ಅವರದ್ದೇ ಎಂಬುದು ದೃಢಪಟ್ಟಿದೆ.

ಲ್ಯಾನ್ಸ್ ನಾಯಕ್ ಡೋರ್ಜೆ ಮೊರುಪ್ ಅವರು 1948ರ ಅಕ್ಟೋಬರ್ 1ರಂದು ಲಡಾಖ್‌ನ ಲೇಹ್ ಜಿಲ್ಲೆಯ ಸ್ಕುರ್ಬುಚಾನ್ (Skurbuchan) ಗ್ರಾಮದಲ್ಲಿ ಜನಿಸಿದರು. ಹಿಮಾಲಯದ ದುರ್ಗಮ ಪ್ರದೇಶದಲ್ಲಿ ಬೆಳೆದ ಅವರು ಬಾಲ್ಯದಿಂದಲೇ ಪರ್ವತ ಪ್ರದೇಶದ ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಂಡಿದ್ದರು. ನಂತರ ಅವರು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP) ಪಡೆಯನ್ನು ಸೇರಿದರು. ಅಲ್ಲಿ ಅವರು ಶಿಸ್ತು, ಧೈರ್ಯ ಮತ್ತು ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ ಪರ್ವತಾರೋಹಕರಾಗಿ ಹೆಸರುವಾಸಿಯಾದರು.

ಐತಿಹಾಸಿಕ ಎವರೆಸ್ಟ್ ಅಭಿಯಾನ: 1996ರ ಮೇ ತಿಂಗಳಲ್ಲಿ ಐಟಿಬಿಪಿ, ಟಿಬೆಟ್ (ಉತ್ತರ) ಮಾರ್ಗದ ಮೂಲಕ ಎವರೆಸ್ಟ್ ಶಿಖರವನ್ನು ಏರುವ ಮಹತ್ವಾಕಾಂಕ್ಷೆಯ ಅಭಿಯಾನವನ್ನು ಆಯೋಜಿಸಿತು. ಈ ಮಾರ್ಗವು ದಕ್ಷಿಣ ಮಾರ್ಗಕ್ಕಿಂತ ಹೆಚ್ಚು ಕಠಿಣ ಹಾಗೂ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಹವಾಮಾನ ಹದಗೆಡುತ್ತಿದ್ದ ಕಾರಣ ಮೂವರು ಸದಸ್ಯರು ಹಿಂದಿರುಗಿದರು. ಆದರೆ ಡೋರ್ಜೆ ಮೊರುಪ್, ತ್ಸೆವಾಂಗ್ ಸಮನ್ಲಾ ಮತ್ತು ತ್ಸೆವಾಂಗ್ ಪಾಲ್ಜೋರ್ ಶಿಖರದತ್ತ ತಮ್ಮ ಪ್ರಯಾಣವನ್ನು ಮುಂದುವರಿಸಿದರು

1996ರ ಎವರೆಸ್ಟ್ ದುರಂತ: 1996ರ ಮೇ 10ರಂದು, ಶಿಖರ ತಲುಪಿದ ಬಳಿಕ ಅಥವಾ ಶಿಖರದ ಸಮೀಪದಲ್ಲಿದ್ದ ವೇಳೆ, ಈ ಮೂವರು ಪರ್ವತಾರೋಹಿಗಳು ಎವರೆಸ್ಟ್ ಹಿಮಪಾತಕ್ಕೆ ಸಿಲುಕಿದರು. ಗಂಟೆಗೆ ನೂರಾರು ಕಿಲೋ ಮೀಟರ್‌ ವೇಗದಲ್ಲಿ ಬರುವ ಬಿರುಗಾಳಿ, ಹಿಮಪಾತ, ತೀವ್ರವಾದ ಚಳಿ, ಉಸಿರಾಟದ ಸಮಸ್ಯೆ ಎಲ್ಲಕ್ಕಿಂತ ಮುಖ್ಯವಾಗಿ ಈ ಮೂವರೂ ಸಿಲುಕಿದ್ದು ಡೆತ್‌ ಝೋನ್‌ನಲ್ಲಿ. ಅವರ ಸಾವು 1996ರ ಎವರೆಸ್ಟ್ ದುರಂತದ ಭಾಗವಾಯಿತು. ಆ ದಿನ ಭಾರತೀಯರ ಜೊತೆಯಲ್ಲಿ ಒಟ್ಟು ಎಂಟು ಮಂದಿ ಪರ್ವತಾರೋಹಿಗಳು ಪ್ರಾಣ ಕಳೆದುಕೊಂಡಿದ್ದರು.

ಮೃತ ದೇಹದ ಹೆಸರು “ಗ್ರೀನ್ ಬೂಟ್ಸ್” : ಡೋರ್ಜೆ ಮೊರುಪ್ ಅವರ ಮೃತದೇಹವು ಎವರೆಸ್ಟ್‌ನ ಈಶಾನ್ಯ ಪರ್ವತ ಮಾರ್ಗದಲ್ಲಿರುವ ಸುಮಾರು 8,500 ಮೀಟರ್ (27,900 ಅಡಿ) ಎತ್ತರದ ಒಂದು ಸಣ್ಣ ಬಂಡೆಯಲ್ಲಿ ಸಿಲುಕಿಕೊಂಡಿತ್ತು. ಅವರು ಧರಿಸಿದ್ದ ಹಸಿರು ಬಣ್ಣದ ಪರ್ವತಾರೋಹಣ ಬೂಟುಗಳು ದೂರದಿಂದಲೇ ಕಾಣುತ್ತಿದ್ದುದರಿಂದ, ನಂತರ ಎವರೆಸ್ಟ್ ಏರುವ ಪರ್ವತಾರೋಹಿಗಳು ಆ ಮೃತದೇಹವನ್ನು “ಗ್ರೀನ್ ಬೂಟ್ಸ್” ಎಂದು ಕರೆಯಲು ಆರಂಭಿಸಿದರು.ಸುಮಾರು ಮೂರು ದಶಕಗಳ ಕಾಲ ಈ ದೇಹವು ತ್ಸೆವಾಂಗ್ ಪಾಲ್ಜೋರ್ ಅವರದ್ದೆಂದು ವ್ಯಾಪಕವಾಗಿ ನಂಬಲಾಗುತ್ತಿತ್ತು. ಆದರೆ ಈ ವರ್ಷ ಐಟಿಬಿಪಿ ನಡೆಸಿದ ಡಿಎನ್‌ಎ ಪರೀಕ್ಷೆಯ ನಂತರ, ಅದು ಲ್ಯಾನ್ಸ್ ನಾಯಕ್ ಡೋರ್ಜೆ ಮೊರುಪ್ ಅವರ ಮೃತದೇಹವೇ ಎಂಬುದು ಅಧಿಕೃತವಾಗಿ ದೃಢಪಟ್ಟಿತು.

ಮೃತದೇಹವನ್ನು ತರುವುದು ಅತಿ ಕಷ್ಟದ ಹಾಗೂ ದುಬಾರಿ ಕಾರ್ಯ: ದುರಂತ ನಡೆದ ಸುಮಾರು 30 ವರ್ಷಗಳ ನಂತರ, ಐಟಿಬಿಪಿ ಹಾಗೂ ಭಾರತೀಯ ಅಧಿಕಾರಿಗಳು ಡೋರ್ಜೆ ಮೊರುಪ್ ಅವರ ಮೃತದೇಹವನ್ನು ಎವರೆಸ್ಟ್‌ನಿಂದ ಕೆಳಕ್ಕೆ ತಂದು ಕುಟುಂಬಕ್ಕೆ ಹಸ್ತಾಂತರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಆದರೆ ಈ ಕಾರ್ಯಾಚರಣೆ ಅತ್ಯಂತ ಕಠಿಣವಾಗಿದೆ.

ಏಕೆಂದರೆ ಮೃತದೇಹವು ಡೆತ್ ಝೋನ್ ಪ್ರದೇಶದಲ್ಲಿದ್ದು, ಅಲ್ಲಿ ಪ್ರತಿಯೊಂದು ರಕ್ಷಣಾ ಕಾರ್ಯವೂ ಜೀವಕ್ಕೆ ಅಪಾಯಕಾರಿಯಾಗಿದೆ. ಹವಾಮಾನ, ಭೂಪ್ರದೇಶ ಮತ್ತು ಟಿಬೆಟ್ ಮಾರ್ಗದ ಆಡಳಿತಾತ್ಮಕ ಅನುಮತಿಗಳು ಈ ಕಾರ್ಯಾಚರಣೆಯ ಯಶಸ್ಸಿಗೆ ನಿರ್ಣಾಯಕವಾಗಿವೆ. ಮೃತ ದೇಹವನ್ನು ತರುವುದು ಸಾಹಸದ ಕಾರ್ಯ ಒಂದೆಡೆಯಾದರೆ ದುಬಾರಿ ಇನ್ನೊಂದೆಡೆ. ಕನಿಷ್ಠ ಕೋಟಿಗಟ್ಟಲೆ ಹಣ ವ್ಯಯವಾಗುತ್ತದೆ. ಜೊತೆಯಲ್ಲಿ ಇನ್ನೊಂದು ಜೀವ ಬಲಿಯಾಗಬಾರದು ಎಂಬುದನ್ನೂ ಗಮನಿಸಬೇಕು.

ಮೌಂಟ್‌ ಎವರೆಸ್ಟ್‌ ಹಾದಿಯಲ್ಲಿ ಸುಮಾರು 346 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ಅನೇಕ ಮೃತ ದೇಹಗಳು ಅಲ್ಲಿಯೇ ಉಳಿದುಕೊಂಡಿವೆ. ಒಂದೊಂದು ದೇಹವೂ ಒಂದೊಂದು ಸಾಹಸ ಕತೆಯನ್ನು ಹೇಳುತ್ತಿವೆ.


administrator