ವೇಟ್ಲಿಫ್ಟಿಂಗ್: ಅರುಣಾಚಲ ಪ್ರದೇಶ ಪುರುಷರ ತಂಡ ಚಾಂಪಿಯನ್
ರಾಯ್ಪುರ: ಇಲ್ಲಿನ ಪಂಡಿತ್ ರವಿಶಂಕರ್ ವಿಶ್ವವಿದ್ಯಾನಿಲಯದ ಅಂಗಣಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ನ ವೇಟ್ಲಿಫ್ಟಿಂಗ್ನಲ್ಲಿ ಪುರುಷರ ವಿಭಾಗಲ್ಲಿ ಅರುಣಾಚಲ ಪ್ರದೇಶ ಹಾಗೂ ವನಿತೆಯರ ವಿಭಾಗದಲ್ಲಿ ಅಸ್ಸಾಂ ರಾಜ್ಯಗಳು ಅಗ್ರಸ್ಥಾನ ಗಳಿಸಿದವು. Kheli India Tribal Games Arunachala Pradesh top in men’s Weightlifting.
ಅಂತಿಮ ದಿನದಲ್ಲಿ ನಡೆದ ಪುರುಷರ 110+ ಕೆಜಿ ವಿಭಾಗಲ್ಲಿ ಮಿಜೋರಾಂನ ಡೇವಿಡ್ ಜೊಮಿಂಗ್ಮಾವಾಲಾ ಕ್ಲೀನ್ ಹಾಗೂ ಜೆರ್ಕ್ ವಿಭಾಗಲ್ಲಿ ಒಟ್ಟು 290 ಕೆಜಿ ಭಾರವೆತ್ತಿ ಚಿನ್ನದ ಪದಕ ಗೆದ್ದರು. ಈ ವಿಭಾಗದಲ್ಲಿ ಆಂಧ್ರಪ್ರದೇಶದ ಜಿ. ರಾಜಶೇಖರ್ 255 ಕೆಜಿ ಭಾರವೆತ್ತಿ ಬೆಳ್ಳಿ ಗೆದ್ದರು. ಅಸ್ಸಾಂನ ಮನಾಶ್ ಪ್ರೀತಂ 223 ಕೆಜಿ ಭಾರವೆತ್ತಿ ಕಂಚಿನ ಪದಕ ಗೆದ್ದರು.
110ಕೆಜಿ ವಿಭಾಗದಲ್ಲಿ ಅರುಣಾಚಲಪ್ರದೇಶದ ಸಾಂಬೆ ಲೋಪಂಗ್ 299 ಕೆಜಿ ಭಾರವೆತ್ತಿ ಚಿನ್ನ ಗೆದ್ದರು. ಮಿಜೋರಾಂನ ಡೇವಿಡ್ ಜ್ವಾಭಿಕಾ 270 ಕೆಜಿ ಭಾರವೆತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಉತ್ತಮ ಪೈಟೋಟಿ ನೀಡಿದ ಛತ್ತೀಸ್ಗಢದ ಲಕ್ಕಿ ಬಾಬು 261 ಕೆಜಿ ಭಾರವೆತ್ತಿ ಕಂಚಿನ ಪದಕ ಗೆದ್ದರು.
ಭಾನುವಾರ ವೇಟ್ಲಿಫ್ಟಿಂಗ್ ಸ್ಪರ್ಧೆ ಮುಕ್ತಾಯಗೊಂಡಿತು. ವನಿತೆಯರ 88+ ಕೆಜಿ ವಿಭಾಗದಲ್ಲಿ ಮಿಜೋರಾಂನ ಜೊಸಾಂಗ್ಸುವಾಲಿ 140ಕೆಜಿ ಭಾರವೆತ್ತಿ ಚಿನ್ನ ಗೆದ್ದರು. ಅಸ್ಸಾಂ ಪಿಂಕಿ ಬೋರೋ 125 ಕೆಜಿ ಭಾರವೆತ್ತಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಗೆದ್ದರು. 66ಕೆಜಿ ಭಾರವೆತ್ತಿದ ಮಧ್ಯಪ್ರದೇಶದ ಗುಂಜನ್ ಯೂಕಿ ಕಂಚಿನ ಪದಕ ಗೆದ್ದರು.
ವನಿತೆಯರ 86 ಕೆಜಿ ವಿಭಾಗದಲ್ಲಿ ಮಹಾರಾಷ್ಟ್ರದ ಸಾಕ್ಷಿ ಬಂಡು ಬರ್ಕುಲೆ 150 ಕೆಜಿ ಭಾರವೆತ್ತಿ ಚಿನ್ನ ಗೆದ್ದರು. ಛತ್ತೀಸ್ಗಢದ ರಿಶಿಕಾ ಕಷ್ಯಪ್ 121 ಕೆಜಿ ಭಾರವೆತ್ತಿ ಬೆಳ್ಳಿ ಗೆದ್ದರು.
5 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿರುವ ಮಿಜೋರಂ ಪುರುಷ ವಿಭಾಗದಲ್ಲಿ 767 ಅಂಕಗಳನ್ನು ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. 594 ಅಂಕಗಳನ್ನು ಗಳಿಸಿದ ಮಿಜೋರಾಂ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರವಾಯಿತು. 529 ಅಂಕಗಳನ್ನು ಗಳಿಸಿದ ಅಸ್ಸಾಂ ಮೂರನೇ ಸ್ಥಾನ ಗಳಿಸಿತು.
ವನಿತೆಯರ ವಿಭಾಗದಲ್ಲಿ 973 ಅಂಕ ಗಳಿಸಿದ ಅಸ್ಸಾಂ ಅಗ್ರ ಸ್ಥಾನ ಗಳಿಸಿತು. 692 ಅಂಕಗಳನ್ನು ಗಳಿಸಿದ ಒರಿಸ್ಸಾ ದ್ವಿತೀಯ ಹಾಗೂ 433 ಅಂಕಗಳನ್ನು ಗಳಿಸಿದ ಛತ್ತೀಸ್ಗಢ ಮೂರನೇ ಸ್ಥಾನ ಗಳಿಸಿತು.

