ಕರ್ನಾಟಕದ ಕೀರ್ತಿಗೆ ದೇಶದ ಶ್ರೇಷ್ಠ ಮಹಿಳಾ ಸೈಕ್ಲಿಸ್ಟ್ ಗೌರವ
ರಾಂಚಿ: ಇಲ್ಲಿ ನಡೆದ 58ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ವನಿತೆಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಕೀರ್ತಿ ಚಿಕ್ಕ ರಂಗಸ್ವಾಮಿ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ದೇಶದ ಉತ್ತಮ ಮಹಿಳಾ ಸೈಕ್ಲಿಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Karnataka’s Keerthi Chikka Rangaswamy has been honored as the country’s Best Female Cyclist of 2026 after an outstanding performance that saw her win four gold medals and set two national records.
ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿರುವ ಕೀರ್ತಿ ಚಿಕ್ಕರಂಗಸ್ವಾಮಿ ಅವರು 1 ಕಿ ಮೀ ಟೈಮ್ ಟ್ರಯಲ್, 200 ಮೀ ಸ್ಪ್ರಿಂಟ್, ಟೀಮ್ ಸ್ಪ್ರಿಂಟ್ ಮತ್ತು ಕೆರಿನ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.



1 ಕಿ ಮೀ ಟೈಮ್ ಟ್ರಯಲ್ ವಿಭಾಗಲ್ಲಿ 1 ನಿಮಿಷ, 13.807 ಸೆಕೆಂಡುಗಳಲ್ಲಿ ಗುರಿ ತಲುಪಿದ ಕೀರ್ತಿ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಅಲ್ಲದೆ, ಟೀಮ್ ಸ್ಟ್ರಿಂಟ್ ವಿಭಾಗದಲ್ಲೂ, 1 ನಿಮಿಷ, 09.966 ಸೆಕೆಂಡುಗಳಲಿ ಗುರಿ ತಲುಪಿ ಮತ್ತೊಂದು ರಾಷ್ಟ್ರಿಯ ದಾಖಲೆಯನ್ನು ತಮ್ಮ ಹೆಸರಿನಲ್ಲಿ ನಿರ್ಮಿಸಿದ್ದಾರೆ.
ಎರಡು ರಾಷ್ಟ್ರೀಯ ದಾಖಲೆಗಳೊಂದಿಗೆ ನಾಲ್ಕು ಚಿನ್ನದ ಸಾಧನೆ ಮಾಡಿರುವ ಕೀರ್ತಿ ಅವರು 2026ನೇ ಸಾಲಿನ ದೇಶದ ಶ್ರೇಷ್ಠ ಮಹಿಳಾ ಸೈಕ್ಲಿಸ್ಟ್ ಎಂಬ ಗೌರವಕ್ಕೆ ಪಾತ್ರರಾದರು.
ಕೀರ್ತಿ ಅವರ ಈ ಶ್ರೇಷ್ಠ ಸಾಧನೆಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಭಿನಂದನೆ ಸಲ್ಲಿಸಿದೆ.

