Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

8 ತಿಂಗಳ ಗರ್ಭಿಣಿ ಕರುನಾಡ ಮೇಘನಾಗೆ ಏಷ್ಯನ್‌ ಶೂಟಿಂಗ್‌ನಲ್ಲಿ ಚಿನ್ನ!

ಬೆಂಗಳೂರು: ಎಂಟು ತಿಂಗಳ ಗರ್ಭಿಣಿಯಾದರೂ ಏಷ್ಯನ್‌ ಶೂಟಿಂಗ್‌ನಲ್ಲಿ ಪಾಲ್ಗೊಂಡು ವೈಯಕ್ತಿಕ ವಿಭಾಗದಲ್ಲಿ ಕಂಚು ಹಾಗೂ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿರುವ ಕರ್ನಾಟಕದ ಮೇಘನಾ ಸಜ್ಜನರ್‌ ಜಾಗತಿಕ ಕ್ರೀಡೆಯಲ್ಲಿ ಗಮನ ಸೆಳೆದಿದ್ದಾರೆ. Meghana Sajjanar, competing in her eighth month of pregnancy, wins a special Gold and Bronz at Asian Championships

ಬೆಂಗಳೂರು ನಿವಾಸಿ, 32 ವರ್ಷದ ಮೇಘನಾ ಸಜ್ಜನರ್‌, ಹೊಸದಿಲ್ಲಿಯಲ್ಲಿ ನಡೆದ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ 10 ಮೀ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಮೊದಲು ಕಂಚಿನ ಪದಕ ಗೆದ್ದರು, ನಂತರ ತಂಡ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದರು,

ಭಾರತ ಬ್ಯಾಡ್ಮಿಂಟನ್‌ ತಾರೆ ಪಿ,ವಿ ಸಿಂಧೂ ಅವರು, ಮೇಘನಾ ಸಜ್ಜನರ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಮೇಘನಾ ಅವರಿಗೆ ಇದು ಮೂರನೇ ಅಂತಾರಾಷ್ಟ್ರೀಯ ಪದಕವಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಮೇಘನಾ ಕಂಚಿನ ಪದಕ ಗೆದ್ದಿದ್ದರು.


administrator