Wednesday, July 24, 2024

ಕರ್ನಾಟಕದ ಶ್ರೀಹರಿ ನಟರಾಜ್‌ ಉತ್ತಮ ಕ್ರೀಡಾಪಟು

ಗೋವಾ: ಇಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟಲ್ಲಿ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್‌ ಉತ್ತಮ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. Karnataka’s Shrihari Nataraj best athlete at National Games Goa.

ಶ್ರೀಹರಿ ನಟರಾಜ್‌ ಈಜಿನಲ್ಲಿ ಒಟ್ಟು 8 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ. ಮಹಾರಾಷ್ಟ್ರದ ಸಂಯಕ್ತ ಕಾಳೆ ಹಾಗೂ ಒಡಿಶಾದ ಪ್ರಣತಿ ನಾಯ್ಕ್‌ ಉತ್ತಮ ಮಹಿಳಾ ಕ್ರೀಡಾಪಟುಗಳು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 32 ಚಿನ್ನ, 32  ಬೆಳ್ಳಿ ಹಾಗೂ 37 ಕಂಚಿನ ಪದಕಗಳೊಂದಿಗೆ ಒಟ್ಟು 101 ಪದಕಗಳನ್ನು ಗೆದ್ದ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿತು. ಈ ಹಿಂದಿನ ಕ್ರೀಡಾಕೂಟಲ್ಲಿ ಕರ್ನಾಟಕ 88 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ತಲುಪಿತ್ತು. ಈ ಬಾರಿ ಪದಕ ಗಳಿಕೆಯಲ್ಲಿ ಮೇಲುಗೈ ಸಾಧಿಸಿದ್ದರೂ ಪದಕಗಳ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿದೆ.

80 ಚಿನ್ನ ಸೇರಿದಂತೆ ಒಟ್ಟು 228 ಪದಕಗಳನ್ನು ಗೆದ್ದ ಮಹಾರಾಷ್ಟ್ರ ಚಾಂಪಿಯನ್‌ ಸ್ಥಾನ ಅಲಂಕರಿಸಿತು. ಕಳೆದ ಬಾರಿ ಅಗ್ರ ಸ್ಥಾನದಲ್ಲಿದ್ದ ಸರ್ವಿಸಸ್‌ ಈ ಬಾರಿ 66 ಚಿನ್ನ ಸೇರಿದಂತೆ 126 ಪದಕಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು.  62 ಚಿನ್ನ ಸೇರಿದಂತೆ 192 ಪದಕಗಳನ್ನು ಗೆದ್ದ ಹರಿಯಾಣ ತೃತೀಯ ಸ್ಥಾನ ಪಡೆಯಿತು.

Related Articles