Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೆಂಗಳೂರು ಎಫ್ ಸಿ ತಂಡಕ್ಕೆ ಪುಟ್ಟಯ್ಯ ಸ್ಮಾರಕ ಟ್ರೋಫಿ

ಸ್ಪೋರ್ಟ್ಸ್ ಮೇಲ್ ವರದಿ

ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ವಿರುದ್ಧ  2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಬಿಎಫ್ಸಿ ತಂಡ ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದುಕೊಂಡಿದೆ.

86ನೇ ನಿಮಿಷದಲ್ಲಿ ಮೈರಾನ್ ಮೆಂಡೀಸ್ ಗಳಿಸಿದ ಗೋಲಿನಿಂದ ಬಿಎಫ್ಸಿ ಯಶಸ್ಸು ಕಂಡಿತು. ಇದಕ್ಕೂ ಮುನ್ನ ಎಂಇಜಿ ಪರ ರಾಹುಲ್ (56ನೇ ನಿಮಿಷ) ಹಾಗೂ ಬಿಎ್‌ಸಿ ಪರ ಲಾಲೆಂಗ್ಜಮಾ  ವಂಗ್‌ಚಿಯಾ (41ನೇ ನಿಮಿಷ) ಗಳಿಸಿದ ಗೋಲಿನಿಂದ ಪಂದ್ಯ 1-1ರಲ್ಲಿ ಸಮಬಲವಾಗಿ ಸಾಗಿತ್ತು.
ಕೋಚ್ ನೌಶಾದ್ ಮೂಸಾ ಪಂದ್ಯದ ಆರಂಭಿಕ ಲೈನ್‌ಅಪ್‌ನಲ್ಲಿ ಅಜಯ್ ಛೆಟ್ರಿ ಬದಲು ಅಲ್ತಮಶ್ ಸಯ್ಯದ್‌ಗೆ ಸ್ಥಾನ ಕಲ್ಪಿಸುವ ಮೂಲಕ ಬದಲಾವಣೆ ತಂದರು. ಇದರಿಂದ ಬಿಎ್‌ಸಿ ಆರಂಭದಲ್ಲೇ ಮೇಲುಗೈ ಸಾಧಿಸಿತು. ಲಾಲೆಂಗ್ಜಮಾ ವಂಗ್‌ಚಿಯಾ 41ನೇ ನಿಮಿಷದಲ್ಲಿ ಗೋಲು ಗಳಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ಕಲ್ಪಿಸಿದರು.
ಆದರೆ ದ್ವಿತಿಯಾರ್ಧದ  ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಎಂಇಜಿ ತಂಡಕ್ಕೆ ೫೬ನೇ ನಿಮಿಷದಲ್ಲಿ ಯಶಸ್ಸು. ರಾಹುಲ್ ಗಳಿಸಿದ ಗೋಲಿನಿಂದ ಎಂಇಜಿ ಸಮಬಲ ಸಾಧಿಸಿತು. 86ನೇ ನಿಮಿಷದಲ್ಲಿ ಮೈರಾನ್ ಮೆಂಡೀಸ್ ಗಳಿಸಿದ ಗೋಲಿನಿಂದ ಬೆಂಗಳೂರು ತಂಡ ಜಯ ಗಳಿಸುವುದರೊಂದಿಗೆ ಪ್ರತಿಷ್ಠಿತ ಟ್ರೋಫಿ ಗೆದ್ದುಕೊಂಡಿತು.

administrator