ಭಾರತಕ್ಕೆ ಶಾಕ್, ಬೆಳ್ಳಿಗೆ ತೃಪ್ತಿ

0
253
ಏಜೆನ್ಸಿಸ್ ಜೊಹೊರ್ ಬಹ್ರು 

ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಫೈನಲ್ 2-3 ಗೋಲು ಗಳ ಅಂತರದಲ್ಲಿ ಸೋಲನುಭವಿಸಿದ ಭಾರತ ಕಿರಿಯರ ಹಾಕಿ ತಂಡ 8ನೇ ಜೊಹೊರ್ ಕಪ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಕಳೆದ ವರ್ಷ ಭಾರತ ಕಂಚಿನ ಪದಕ ಗೆದ್ದಿತ್ತು.

ಪಂದ್ಯ ಆರಂಭಗೊಂಡ ೪ನೇ ನಿಮಿಷದಲ್ಲಿ ವಿಷ್ಣುಕಾಂತ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭಾರತಕ್ಕೆ ಮುನ್ನಡೆ ಕಲ್ಪಿಸಿದರು. ಆದರೆ ಡೇನಿಯಲ್ ವೆಸ್ಟ್ ಅವರು ೭ನೇ ನಿಮಿಷದಲ್ಲಿ ಗಳಿಸಿದ ಫೀಲ್ಡ್ ಗೋಲಿನಿಂದ ಪಂದ್ಯ ಸಮಬಲಗೊಂಡಿತು.
ಮೂರನೇ ಕ್ವಾರ್ಟರ್ ನಲ್ಲಿ ಗ್ರೇಟ್ ಬ್ರಿಟನ್ ಮೂರು ಗೋಲು ಗಳಿಸಿ ಪ್ರಭುತ್ವ ಸಾಧಿಸಿತು. ಜೇಮ್ಸ್ ಓಟ್ಸ್ ೩೯ ಮತ್ತು ೪೨ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಅಂತಿಮ ಕ್ವಾರ್ಟರ್ ನಲ್ಲಿ ಅಭಿಷೇಕ್  ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.