ಹರಿಣಗಳಿಗೆ ಗಾಯದ ಮೇಲೆ ಮತ್ತೆ ಬರೆ, ಏಕದಿನ ಸರಣಿಯಿಂದ ಡಿ’ಕಾಕ್ ಔಟ್

0
336
PC: Twitter/Quinton De Cock
ಹರಿಣಗಳಿಗೆ ಗಾಯದ ಮೇಲೆ ಮತ್ತೆ ಬರೆ, ಏಕದಿನ ಸರಣಿಯಿಂದ ಡಿ’ಕಾಕ್ ಔಟ್
ದಿ ಸ್ಪೋರ್ಟ್ಸ್ ಬ್ಯೂರೋ
ಕೇಪ್‌ಟೌನ್: ಪ್ರವಾಸಿ ಭಾರತ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಸೋತು ಸುಣ್ಣವಾಗಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲಿನ ಬೆನ್ನಲ್ಲೇ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.
PC: Twitter/Quinton De Cock
ತಂಡದ ವಿಕೆಟ್ ಕೀಪರ್ ಕಂ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಚನ್ ಡಿ’ಕಾಕ್ ಗಾಯದ ಕಾರಣ ಸರಣಿಯ ಮುಂದಿನ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಡಿ’ಕಾಕ್ ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತಿಳಿಸಿದೆ.
ಸರಣಿ ಸೋಲಿನ ಭೀತಿಯಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ಈಗಾಗಲೇ ನಾಯಕ ಫಾಫ್ ಡು’ಪ್ಲೆಸಿಸ್ ಅವರ ಸೇವೆಯನ್ನು ಕಳೆದುಕೊಂಡಿದೆ. ಮೊದಲ ಪಂದ್ಯದ ಶತಕವೀರ ಡು’ಪ್ಲೆಸಿಸ್ ಕೈಬೆರಳಿನ ಗಾಯದಿಂದಾಗಿ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಸರಣಿಗೂ ಮುನ್ನವೇ ಬ್ಯಾಟಿಂಗ್ ಸೂಪರ್‌ಮ್ಯಾನ್ ಎಬಿ ಡಿ’ವಿಲಿಯರ್ಸ್ ಮೊದಲ 3 ಪಂದ್ಯಗಳಿಗೆ ಅಲಭ್ಯರಾಗಿದ್ದರು. 4ನೇ ಪಂದ್ಯದಲ್ಲಿ ಎಬಿಡಿ ಆಡುವ ಸಾಧ್ಯತೆಯಿದೆ. ಸರಣಿಯ 3ನೇ ಪಂದ್ಯ ಫೆಬ್ರವರಿ 7ರಂದು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿದೆ.