Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸ್ಕಾಟ್ಲೆಂಡ್‌ಗೆ 36 ವರ್ಷಗಳ ಬಳಿಕ ಮೊದಲ ಜಯದ ಸಂಭ್ರಮ

ಬೋಸ್ಟನ್‌: ಹೈಟಿ ತಂಡವನ್ನು ಏಕೈಕ ಗೋಲಿನಿಂದ ಮಣಿಸಿದ ಸ್ಕಾಟ್ಲೆಂಡ್‌ ತಂಡ ಫಿಫಾ ವಿಶ್ವಕಪ್‌ನಲ್ಲಿ 36 ವರ್ಷಗಳ ಬಳಿಕ ಜಯದ ಯಶಸ್ಸು ಕಂಡಿದೆ. John McGinn scuffed in the opener in the 29th minute, for Scotland’s first World Cup since Craig Burley in ’98

ಸಿ ಗುಂಪಿನ ಪಂದ್ಯದಲ್ಲಿ ಜಾನ್‌ ಮೆಕ್‌ಗಿನ್‌ ಗಳಿಸಿದ ಗೋಲು ಸ್ಕಾಟ್ಲೆಂಡ್‌ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿತು. 1990ರ ನಂತರ ಸ್ಕಾಟ್ಲೆಂಡ್‌ ತಂಡ ವಿಶ್ವಕಪ್‌ನಲ್ಲಿ ಜಯ ಗಳಿಸಿರುವುದು ಇದೇ ಮೊದಲು. ಐತಿಹಾಸಿಕ ಗೋಲು ಗಳಿಸಿದ ಮೆಕ್‌ಗಿನ್‌ “ಅದೊಂದು ಅದ್ಭುತ ಗೋಲಲ್ಲ, ಆದರೆ ಸ್ಕಾಟ್ಲೆಂಡ್‌ನ ಫುಟ್ಬಾಲ್‌ ಅಭಿಮಾನಿಗಳಿಗೆ ಸಂಭ್ರಮಿಸಲು ಈ ಗೋಲು ನೆರವಾಗಲಿದೆ,” ಎಂದಿದ್ದಾರೆ.

ಸಿ ಗುಂಪಿನಲ್ಲಿ ಈಗ ಅಗ್ರ ಸ್ಥಾನ ತಲುಪಿರು ಸ್ಕಾಟ್ಲೆಂಡ್‌ಗೆ ಮುಂದಿನ ಹಾದಿ ಕಠಿಣವಾಗಿದೆ, ಏಕೆಂದರೆ ಸ್ಕಾಟ್ಲೆಂಡ್‌ ಮುಂದಿನ ಪಂದ್ಯಗಳಲ್ಲಿ ಬಲಿಷ್ಠ ಮೊರಾಕ್ಕೆ ಹಾಗೂ ಬ್ರೆಜಿಲ್‌ ತಂಡಗಳನ್ನು ಎದುರಿಸಲಿದೆ.


administrator