Friday, December 13, 2024

ವಿಶ್ವಕಪ್ ಶೂಟಿಂಗ್: ಚಿನ್ನಕ್ಕೆ ಗುರಿಯಿಟ್ಟ ಭಾರತದ ಅಖಿಲ್ ಶೆರಾನ್

ಮೆಕ್ಸಿಕೊ: ಭಾರತದ ಉದಯೋನ್ಮುಖ ಶೂಟರ್ ಅಖಿಲ್ ಶೆರಾನ್, ಮೆಕ್ಸಿಕೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ.

PC: Twitter/ISSF

ಪುರುಷರ 50 ಮೀ. ರೈಲ್‌ನ 3-ಪೊಸಿಷನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಖಿಲ್ ಶೆರಾನ್, 455.6 ಅಂಕಗಳನ್ನು ಕಲೆ ಹಾಕುವ ಮೂಲಕ ಸ್ವರ್ಣ ಪದಕ ಗೆದ್ದರು. ಆಸ್ಟ್ರಿಯಾದ ಬೆರ್ನಾರ್ಡ್ 452 ಅಂಕಗಳನ್ನು ಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.
ಅಖಿಲ್ ಅವರ ಸ್ವರ್ಣ ಸಾಧನೆಯೊಂದಿಗೆ ಭಾರತ 4 ಚಿನ್ನದ ಪದಕಗಳ ಸಹಿತ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 9 ಪದಕಗಳನ್ನು ಗೆದ್ದಂತಾಗಿದೆ.

Related Articles