Thursday, March 28, 2024

ಬಿಸಿಸಿಐ ಪ್ರಧಾನ ಕಚೇರಿ ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್

ದಿ ಸ್ಪೋರ್ಟ್ಸ್ ಬ್ಯೂರೋ
ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಪ್ರಧಾನ ಕಚೇರಿ ಇನ್ನು ಕೆಲವೇ ತಿಂಗಳುಗಳಲ್ಲಿ ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದೆ.
PC: BCCI
ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ಸಮೀಪ ಸುಸಜ್ಜಿತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ಮಾಣಕ್ಕಾಗಿ ಬಿಸಿಸಿಐಗೆ ಕರ್ನಾಟಕ ಸರ್ಕಾರ 40 ಎಕರೆ ಜಮೀನು ನೀಡಿದೆ. ಅಲ್ಲಿ ಅತ್ಯಾಧುನಿಕ ಗುಣಮಟ್ಟದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ಮಾಣದ ಜೊತೆಗೆ ಬಿಸಿಸಿಐ ಕೇಂದ್ರ ಕಚೇರಿಯನ್ನೂ ನಿರ್ಮಿಸಲು ನಿರ್ಧರಿಸಲಾಗಿದೆ.
ಬಿಸಿಸಿಐನ ಹೊಸ ಕೇಂದ್ರ ಕಚೇರಿ ಪಂಚತಾರಾ ಹೋಟೆಲ್ ಸೌಲಭ್ಯವನ್ನೂ ಹೊಂದಿರಲಿದೆ.
ಬಹುಕೋಟಿ ವೆಚ್ಚದ ಬಿಸಿಸಿಐ ಕಟ್ಟ ನಿರ್ಮಾಣ ಕಾರ್ಯ ಕೆಲ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಬಿಸಿಸಿಐನ ಕೇಂದ್ರ ಕಚೇರಿ ಮುಂಬೈನಿಂದ ಉದ್ಯಾನನಗರಿಗೆ ಸ್ಥಳಾಂತರಗೊಳ್ಳಲಿದೆ. ಸದ್ಯ ಬಿಸಿಸಿಐ ಹೆಡ್ ಆಫೀಸ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿದೆ. ಬಿಸಿಸಿಐ ಜೊತೆಗೆ ಅಲ್ಲೇ ಮುಂಬೈ ಕ್ರಿಕೆಟ್ ಸಂಸ್ಥೆಯ ಕಚೇರಿಯೂ ಇರುವುದರಿಂದ ಬಿಸಿಸಿಐಗೆ ಸ್ಥಳಾವಕಾಶದ ಕೊರತೆ ಎದುರಾಗುತ್ತಿದೆ. ಹೀಗಾಗಿ ಮಂಡಳಿಯ ಎಲ್ಲಾ ಸಭೆಗಳು ದೇಶವ ನಾನಾ ಭಾಗಗಳಲ್ಲಿರುವ ಪಂಚತಾರಾ ಹೋಟೆಲ್‌ಗಳಲ್ಲಿ ನಡೆಯುತ್ತವೆ. ಇದರಿಂದ ಬಿಸಿಸಿಐಗೆ ಕೋಟಿ ಕೋಟಿ ರೂ. ಖರ್ಚಾಗುತ್ತಿದೆ.
ಬಿಸಿಸಿಐನ ಹೊಸ ಕಚೇರಿ ಬೆಂಗಳೂರಿನಲ್ಲಿ ತಲೆ ಎತ್ತಿದ ನಂತರ ಮಂಡಳಿಯ ಎಲ್ಲಾ ಸಭೆಗಳು ಎಲ್ಲೇ ನಡೆಯಲಿವೆ. ಈ ಮೂಲಕ ಸಭೆಗಳನ್ನು ಪಂಚತಾರಾ ಹೋಟೆಲ್‌ಗಳಲ್ಲಿ ನಡೆಸುವುದರಿಂದ ತಗುಲುವ ಕೋಟ್ಯಾಂತರ ರೂ.ಗಳ ವೆಚ್ಚವನ್ನು ಉಳಿಸುವುದು ಬಿಸಿಸಿಐನ ಉದ್ದೇಶ.

Related Articles