Wednesday, November 13, 2024

ಅಖಿಲ ಭಾರತ ವಿವಿ ಬಾಲ್ ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

ಬೆಂಗಳೂರು: ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು ವಿವಿ ತಂಡ, ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿತು.
ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡ ಮಧುರೈ ಕಾಮರಾಜ ವಿವಿ ತಂಡವನ್ನು 35-16, 35-16 ಅಂತರದಲ್ಲಿ ಸದೆ ಬಡಿದು ಪ್ರಶಸ್ತಿ ಗೆದ್ದುಕೊಂಡಿತು.
ಅಲ್ಲದೆ ಸತತ 14ನೇ ಬಾರಿ ಅಖಿಲ ಭಾರತ ಚಾಂಪಿಯನ್‌ಷಿಪ್‌ನ ಲೀಗ್‌ಗೆ ಅರ್ಹತೆ ಸಂಪಾದಿಸಿತು. ಲೀಗ್ ಹಂತದಲ್ಲಿ ಮಂಗಳೂರು ವಿವಿ ತಂಡ, ತಮಿಳುನಾಡಿನ ಎಸ್‌ಆರ್‌ಎಂ ವಿವಿ, ಮದ್ರಾಸ್ ವಿವಿ ಹಾಗೂ ಚೆನ್ನೈನ ಬಿಎಸ್‌ಎಆರ್ ವಿವಿ ವಿರುದ್ಧ ಗೆದ್ದಿತ್ತು.

Related Articles