Saturday, October 12, 2024

WBC ಆಗ್ನೇಯ ಏಷ್ಯಾಕ್ಕೆ ವೈಭವ್‌ ಶೆಟ್ಟಿ ಅಧ್ಯಕ್ಷ

 sportsmail:

ಸದ್ಯ ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕದ ವೈಭವ್‌ ಶೆಟ್ಟಿ ಅವರು ವಿಶ್ವ ಬಾಕ್ಸಿಂಗ್‌ ಕೌನ್ಸಿಲ್‌ (ಮೊಯ್‌ ಥಾಯ್) (World Boxing Council Muay Thay) ‌ ಇದರ ಆಗ್ನೇಯ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭಾರತದಲ್ಲಿ ವಿಶ್ವ ಬಾಕ್ಸಿಂಗ್‌ ಕೌನ್ಸಿಲ್‌ (ಮೊಯ್‌ ಥಾಯ್)‌ ಇದರ ಸ್ಥಾಪಕ ಅಧ್ಯಕ್ಷರಾಗಿರುವ ವೈಭವ್‌ ಶೆಟ್ಟಿ, ವಿಶ್ವ ಬಾಕ್ಸಿಂಗ್‌ ಫೆಡರೇಷನ್‌ನ ಟೈಟಲ್‌ ಫೈಟ್‌ನ ಪರಿವೀಕ್ಷಕರೂ ಆಗಿರುತ್ತಾರೆ. ವಿಶ್ವ ಕಿಕ್‌ ಬಾಕ್ಸಿಂಗ್‌ನ ಪ್ರೋತ್ಸಾಹಕರಾಗಿರುವ ವೈಭವ್‌ ಶೆಟ್ಟಿ, ಅವರು ಜಾಗತಿಕ ಮಟ್ಟದ ಜವಾಬ್ದಾರಿ ಹೊಂದಿರುವುದು ಭಾರತದಲ್ಲಿ ಮಾರ್ಷಲ್‌ ಆರ್ಟ್‌ ಮತ್ತು ಕಂಬ್ಯಾಟ್‌ ಸ್ಪೋರ್ಟ್ಸ್‌ಗಳಿಗೆ ಹೆಚ್ಚು ಉತ್ತೇಜ ಸಿಗಲಿದೆ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆ ಮಾಡಿರುವ ವೈಭವ್‌ ಶೆಟ್ಟಿ, ಸ್ಪೋರ್ಟ್ಸ್‌ ಮೇಲ್‌ ಜತೆ ಮಾತನಾಡಿ, “ಇದೊಂದು ಜಾಗತಿಕ ಮಟ್ಟದಲ್ಲಿ ಸಿಕ್ಕದ ಗೌರವ, ಭಾರತದ ಜತೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ ಮೊದಲಾದ ಆಗ್ನೇಯ ಏಷ್ಯಾ ರಾಷ್ಟ್ರಗಳು ಈ ವ್ಯಾಪ್ತಿಯಲ್ಲಿ ಬರುತ್ತದೆ. ಕ್ರೀಡಾಪಟುಗಳೇ ಕ್ರೀಡಾ ಸಂಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ಆ ಕ್ರೀಡೆ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂಬುದು ನನ್ನ ನಂಬಿಕೆ,” ಎಂದು ಹೇಳಿದರು.

Related Articles