Tuesday, September 10, 2024

ಬೆಂಗಳೂರು ಬುಲ್ಸ್‌ ಮೊದಲ ಪಂದ್ಯದಲ್ಲೇ ಡಲ್‌

sportsmail

ಪ್ರೊ ಕಬಡ್ಡಿ ಲೀಗ್‌ನ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್‌ ತಂಡ ಯು ಮುಂಬಾ ವಿರುದ್ಧ 46-30 ಅಂತರದಲ್ಲಿ ಸೋಲಿನ ಆಘಾತ ಅನುಭವಿಸಿದೆ.

ಅಭಿಷೇಕ್‌ ಸಿಂಗ್‌ ಅವರ ಅಮೂಲ್ಯ 19 ಅಂಕಗಳ ನೆರವಿನಿಂದ ಮುಂಬೈ ತಂಡ ಮೊದಲ ಜಯ ಗಳಿಸಿತು. ಬುಲ್‌ ನಾಯಕ ಪವನ್‌ ಶೆರಾವತ್‌ ಮತ್ತು ಚಂದ್ರನ್‌ ರಂಜಿತ್‌ ಸೂಪರ್‌ 10 ಸಾಧನೆ ಮಾಡಿದರೂ ಯು ಮುಂಬಾದ ಡಿಫೆನ್ಸ್‌ ವಿಭಾಗ ಬೆಂಗಳೂರಿನ ಮುನ್ನಡೆಗೆ ಅವಕಾಶ ನೀಡಡಲಿಲ್ಲ.

ವಿರಾಮಕ್ಕೂ ಮುನ್ನ ಬೆಂಗಳೂರು ಆಲೌಟ್‌ ಆಗುವ ಮೂಲಕ ಯು ಮುಂಬಾ ತಂಡ ತಂಡ 24-17ರಲ್ಲಿ ಮೇಲುಗೈ ಸಾಧಿಸಿತು.

ದ್ವಿತಿಯಾರ್ಧದ ಆರಂಭದಲ್ಲೇ ಬೆಂಗಳೂತು ತಂಡವನ್ನು ಆಲೌಟ್‌ ಮಾಡಿದ ಯು ಮುಂಬಾ ಮತ್ತೆ ಹಿಂದಿರುಗಿ ನೋಡಿಲ್ಲ. ಮುನ್ನಡೆಯಲ್ಲಿದ್ದರೂ ಮುಂಬೈ ಪಡೆ ಎಚ್ಚರಿಕೆಯ ಆಟವಾಡಿ ಬೆಂಗಳೂರನ್ನು ಮೂರನೇ ಬಾರಿಗೆ ಆಲೌಟ್‌ ಮಾಡಿತು. ಬೆಂಗಳೂರಿಗೆ ಮತ್ತೆ ಚೇತರಿಸಿಕೊಳ್ಳಲಾಗದೆ ಸೋಲಿನ ಆಘಾತ ಕಂಡಿತು.

ಬೆಂಗಳೂರು ಪರ ಚಂದ್ರನ್‌ ರಂಜಿತ್‌ 13 ರೈಡ್‌ ಅಂಕ ಗಳಿಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

Related Articles