ಐಸಿಎಫ್ , ಆದಾಯ ತೆರಿಗೆ ನೇವಿ, ವಿಜಯ ಬ್ಯಾಂಕ್ ಸೆಮೀಸ್ಗೆ

0
202
ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬೀಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೫ನೇ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿ ಭಾರತ ಬಾಸ್ಕೆಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಐಸಿಎಫ್, ಆದಾಯ ತೆರಿಗೆ, ಇಂಡಿಯನ್ ನೇವಿ ಹಾಗೂ ವಿಜಯ ಬ್ಯಾಂಕ್ ತಂಡಗಳು ಸೆಮಿಫೈನಲ್  ಪ್ರವೇಶಿಸಿವೆ.

ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ಆದಾಯ ತೆರಿಗೆ ಹಾಗೂ ವಿಜಯ ಬ್ಯಾಂಕ್ ತಂಡಗಳು ನಾಲ್ಕರ ಹಂತ ತಲುಪಿದವು. ಎ ಗುಂಪಿನಲ್ಲಿ  ಚೆನ್ನೈನ  ಐಸಿಎಫ್  ತಂಡ ಕರ್ನಾಟಕ ರಾಜ್ಯ ತಂಡವನ್ನು ಮಣಿಸಿ ಸೆಮಿಫೈನಲ್  ಹಂತ ಪ್ರವೇಶಿಸಿತು. ಸೆಮಿಫೈನಲ್ ನಲ್ಲಿ  ಐಸಿಎ್ ತಂಡ ಇಂಡಿಯನ್ ನೇವಿ ತಂಡವನ್ನು ಎದುರಿಸಲಿದೆ.
ಅತ್ಯಂತ ರೋಚಕವಾಗಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಐಸಿಎಫ್  ತಂಡ ಕರ್ನಾಟಕ ರಾಜ್ಯ ತಂಡವನ್ನು ೭೪-೬೫ ಅಂತರದಲ್ಲಿ ಮಣಿಸಿ ಮುಂದಿನ ಹಂತ ತಲುಪಿತು. ಐಸಿಎಫ್  ಪರ ಪಿ ವಿಜಯ್ ೧೯ ಅಂಕ ಗಳಿಸಿದರೆ, ಆಂಟೋ ಬೆತ್ಲೆ  ೧೮ ಅಂಕ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕ ತಂಡದ ಪರ ಅಭಿಷೇಕ್ ೧೮ ಹಾಗೂ ಬಲ್ವಾನ್ ೧೫ ಅಂಕ ಗಳಿಸಿದರು.
ಆದಾಯ ತೆರಿಗೆ ತಂಡ ಆತಿಥೇಯ ವಿಜಯ ಬ್ಯಾಂಕ್ ತಂಡವನ್ನು ೭೭-೭೩ ಅಂತರದಲ್ಲಿ ಮಣಿಸಿ ಸೆಮಿಫೈನಲ್  ಸ್ಥಾನವನ್ನು ಭದ್ರಪಡಿಸಿಕೊಂಡಿತು. ವಿಜಯ ಬ್ಯಾಂಕ್ ಸೋತರೂ ಹಿಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಇದು ಟೂರ್ನಿಯಲ್ಲಿಯೇ ಇದುವರೆಗಿನ ಅತ್ಯಂತ ರೋಚಕ ಪಂದ್ಯವಾಗಿ ಮೂಡಿ ಬಂತು. ಅಂತಿಮವಾಗಿ ಆದಾಯ ತೆರಿಗೆ ತಂಡದ ಪರ ಜೀವನ್‌ನಾಥಮ್ ಪಂಡಿ ೨೬ ಅಂಕ, ಶಿವ ಬಾಲನ್ ೨೩ ಅಂಕ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ವಿಜಯ ಬ್ಯಾಂಕ್ ಪರ ಹರೀಶ್ ೨೨ ಹಾಗೂ ಅರವಿಂದ್ ಅರ್ಮುಗಂ ೨೧ ಅಂಕ ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
 ಎರಡನೇ ದಿನದ ಸಂಜೆಯಲ್ಲಿ ಇಂಡಿಯನ್ ನೇವಿ ತಂಡ ಕರ್ನಾಟಕ ರಾಜ್ಯ ತಂಡವನ್ನು ೮೪-೫೨ ಅಂತರದಲ್ಲಿ ಮಣಿಸಿತ್ತು.