ಆಳ್ವಾಸ್‌ಗೆ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ

0
458
ಸ್ಪೋರ್ಟ್ಸ್ ಮೇಲ್ ವರದಿ

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಗುರುವಾರ ಚೆನ್ನೈನ  ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ನಡೆದ ಎಸ್‌ಆರ್‌ಎಂ ಸ್ಥಾಪಕ ಮಹೋತ್ಸವ ಅಖಿಲ ಬಿ ಭಾರತ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿದೆ.

ಭಾರತದ ಒಟ್ಟು ೧೬ ಆಹ್ವಾನಿತ ತಂಡಗಳು  ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದವು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಆಳ್ವಾಸ್ ತಂಡ ಕ್ರೆಸೆಂಟ್ ವಿಶ್ವವಿದ್ಯಾನಿಲಯವನ್ನು ನೇರ ಸೆಟ್‌ಗಳಿಂದ ಸೋಲಿಸಿ ಪ್ರಧಾನ ಲೀಗ್ ಹಂತ ತಲುಪಿತು. ಸೂಪರ್ ಲೀಗ್ ಪಂದ್ಯದಲ್ಲಿ ಆಳ್ವಾಸ್ ತಂಡ ಕೊಯಮತ್ತೂರಿನ ನಿರ್ಮಲ ತಂಡ ಹಾಗೂ ಆತಿಥೇಯ ಎಸ್‌ಆರ್‌ಎಂ ವಿಶ್ವವಿದ್ಯಾಲಯ ತಂಡಗಳನ್ನು ನೇರ ಸೆಟ್‌ಗಳಿಂದ ಮಣಿಸಿ ನಿರ್ಣಾಯಕ ಹಂತ ತಲುಪಿತು. ಅಂತಿಮ ಪಂದ್ಯದಲ್ಲಿ ದಿಂಡಿಗಲ್‌ನ ಪಿಎಸ್‌ಎನ್‌ಎ ತಂಡವನ್ನು  ೩೫-೨೭, ೩೫-೨೨ ಅಂತರದಲ್ಲಿ ಮಣಿಸಿ ಸತತ ಆರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ವಿಜೇತ ತಂಡಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.