Saturday, February 24, 2024

ತೂಕ ಇಳಿಸಲು ಹೋಗಿ ವಿಶ್ವ ಚಾಂಪಿಯನ್‌ ಆದ ವೈಭವ್‌ ಶೆಟ್ಟಿ!!

ಸೋಮಶೇಖರ್‌ ಪಡುಕರೆ, Sportsmail

ದೇಹದ ತೂಕ ಇಳಿಸಲು ಜಿಮ್‌ಗೆ ಹೋಗಿ, ಅಲ್ಲಿ ವಿವಿಧ ಮಾರ್ಷಲ್‌ ಆರ್ಟ್ಸ್‌ಗಳಲ್ಲಿ ಪರಿಣತನಾಗಿ, ಜಾಗತಿಕ ಮಟ್ಟದಲ್ಲಿ ಪದಕಗಳ ಕೊಳ್ಳೆ ಹೊಡೆದು ಈಗ ಅಮೆರಿಕದಲ್ಲಿ ಸದ್ದಿಲ್ಲದೆ ಖ್ಯಾತಿ ಪಡೆಯುತ್ತಿರುವ ಅಂತಾರಾಷ್ಟ್ರೀಯ ಮಿಕ್ಸೆಡ್‌ ಮಾರ್ಷಲ್‌ ಆರ್ಟ್ಸ್‌ ಪಟು ವೈಭವ್‌ ಶೆಟ್ಟಿಯ ಬದುಕಿನ ಹಾದಿ ಇತರರಿಗೆ ಸ್ಫೂರ್ತಿ ಇದ್ದಂತೆ.

 

 

ಮುಂಬೈ ಸಂಜಾತ ವೈಭವ್‌ ಶೆಟ್ಟಿ ಮೂಲ್ಕಿಯ ಉಲ್ಲೂರುಗುತ್ತು ವಾಮನ ಶೆಟ್ಟಿ ಮತ್ತು ಉಲೆಪಾಡಿ ಸುರೇಖಾ ಶೆಟ್ಟಿಯವರ ಮಗ. ಪತ್ನಿ ಕಾರ್ವಿ ಓಜಾ, ಮಗ ಅಧ್ವೈತ್‌ ಅಮೆರಿಕದಲ್ಲಿ ನೆಲೆಸಿದ್ದಾರೆ. ಪತ್ನಿ ಅಮೇಜಾನ್‌ನಲ್ಲಿ ಉನ್ನತ ಹುದ್ದೆಯಲ್ಲಿರುವ ಕಾರಣ ವೈಭವ್‌ ಈಗ ಅಮೆರಿಕಾದಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.

ವೈಭವ್‌ ಶೆಟ್ಟಿ ಸಾಫ್ಟ್‌ವೇರ್‌ ತಂತ್ರಜ್ಞಾನದಲ್ಲಿ ಪಳಗಿದವರು. ತಮ್ಮದೇ ಆದ ಗೇಮಿಂಗ್‌ ಸ್ಟಾರ್ಟ್ಅಪ್‌ ಆರಂಭಿಸಿದವರು. ಆದರೆ ದೇಹದ ತೂಕ ನೂರರ ಗಡಿ ದಾಟಿದಾಗ ಅದನ್ನು ಕಡಿಮೆಗೊಳಿಸಲು ಜಿಮ್‌ನಲ್ಲಿ ನಿರಂತರ ಅಭ್ಯಾಸ ಆರಂಭಿಸಿದರು. ಆದರೆ ಅವರು ಕೇವಲ ಭಾರ ಎತ್ತಿ, ಕಸರತ್ತು ಮಾಡಿ ತಮ್ಮ ಶ್ರಮವನ್ನು ದೇಹ ದಂಡನೆಗಾಗಿ ಮಾತ್ರ ಮೀಸಲಿಟ್ಟಿಲ್ಲ.

ಬಾಕ್ಸಿಂಗ್‌, ಕಿಕ್‌ ಬಾಕ್ಸಿಂಗ್‌, ಜಿಜುತ್ಸು ಮತ್ತು ಎಂಎಂಎನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಸರತ್ತಿನಿಂದ ನಿಧಾನವಾಗಿ ಕಂಬ್ಯಾಟ್‌ ಸ್ಪೋರ್ಟ್ಸ್‌ ಕಡೆಗೆ ವಾಲಿದರು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದರು. ಆದರೆ ಸುದ್ದಿಯಾಗದೆ ಯಶಸ್ಸಿನ ಶಿಖರಕ್ಕೇರಿದರು.

“ಸ್ವಂತ ಉದ್ಯೋಗದ ನಡುವೆ ಕ್ರೀಡೆಯನ್ನು ಮೈಗೂಡಿಸಿಕೊಂಡವ ನನಗೆ ದೇಹದ ತೂಕ ಹೆಚ್ಚಾದ ಕಾರಣ ಆಲಸ್ಯ ಕಾಡುತ್ತಿತ್ತು. ಇದರಿಂದ ಮುಕ್ತಿ ಹೊಂದಬೇಕು ಎಂದು ಜಿಮ್‌ನಲ್ಲಿ ವರ್ಕೌಟ್‌ ಮಾಡಿದೆ. ಅಲ್ಲಿ ಬಾಕ್ಸಿಂಗ್‌, ಕಿಕ್‌ ಬಾಕ್ಸಿಂಗ್‌ನಲ್ಲಿ ಪಳಗಿದೆ, ನನ್ನ ಶ್ರಮ ಒಬ್ಬ ಎಂಎಂಎ ಪಟುವನ್ನಾಗಿ ಮಾಡಿದೆ, ಜಾಗತಿಕ ಮಟ್ಟದಲ್ಲಿ ಖ್ಯಾತಿಯನ್ನೂ ತಂದುಕೊಟ್ಟಿದೆ, ಇದಕ್ಕೆ ನನ್ನ ಹೆತ್ತವರು ಮತ್ತು ಪತ್ನಿಯ ಹರಕೆ, ಹಾರೈಕಗಳೂ ಇದೆ,” ಎನ್ನುತ್ತಾರೆ ವೈಭವ್‌ ಶೆಟ್ಟಿ.

ಟಾಪ್‌ 10:

ಭಾರತೀಯ ಬಾಕ್ಸಿಂಗ್‌ ಕೌನ್ಸಿಲ್‌ ಪ್ರಕಟಿಸಿದ ನೂತನ ಪ್ರೋ ಬಾಕ್ಸಿಂಗ್‌ ರಾಂಕಿಂಗ್‌ನಲ್ಲಿ ವೈಭವ್‌ ಶೆಟ್ಟಿ ಅವರು ಟಾಪ್‌ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಭಾರತದ ಖ್ಯಾತ ವೃತ್ತಿಪರ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಕೂಡ ಇದ್ದಾರೆ. ಕ್ರೂಸ್‌ವೇಟ್‌ ವಿಭಾಗದಲ್ಲಿ ಸ್ಥಾನ ಪಡೆದಿರುವ ವೈಭವ್‌, WBC ಇಂಡಿಯಾ ಬಾಕ್ಸಿಂಗ್‌ ಟೈಟಲ್‌ಗಾಗಿ ಸ್ಪರ್ಧೆಗೆ ಇಳಿಯಬಹುದಾಗಿದೆ.

ವೈಭವ್‌ ಅವರ ಸಾಧನೆ:

ಕಂಬ್ಯಾಟ್‌ ಸ್ಪೋರ್ಟ್ಸ್‌ ಬಾಕ್ಸಿಂಗ್‌, ಕಿಕ್‌ ಬಾಕ್ಸಿಂಗ್‌ ಮತ್ತು ಜಿಜುತ್ಸುಗಳಲ್ಲಿ ವೈಭವ್‌ ಶೆಟ್ಟಿ ಮಾಡಿರುವ ಸಾಧನೆಗಳನ್ನು ಪಟ್ಟಿ ಮಾಡುತ್ತ ಹೋದರೆ ಅದು ದೊಡ್ಡ ಪಟ್ಟಿಯೇ ಆಗುತ್ತದೆ,. ಆದರೆ ಅವರ ಕೆಲವು ಅಂತಾರಾಷ್ಟ್ರೀಯ ಸಾಧನೆಗಳ ಮೇಲೆ ಬೆಳಕು ಚೆಲ್ಲಲೇಬೇಕು.

ಕಿಕ್‌ ಬಾಕ್ಸಿಂಗ್:‌

ವಿಶ್ವ ಕಿಕ್‌ ಬಾಕ್ಸಿಂಗ್‌ ನೆಟ್ ವರ್ಕ್‌ ಇಂಟರ್‌ನ್ಯಾಷನಲ್‌ ಚಾಂಪಿಯನ್.(ಸೂಪರ್‌ ಲೈಟ್‌ ಹೆವಿವೇಟ್‌ ವಿಭಾಗ).

ವೈಭವ್‌ ಶೆಟ್ಟಿ ಭಾರತದ ಕ್ರೀಡಾ ಇತಿಹಾಸಲ್ಲಿ ಕೆಲವು ಪ್ರಥಮಗಳಿಗೆ ನಾಂದಿ ಹಾಡಿದ್ದಾರೆ. ವಿಶ್ವ ಕಿಕ್‌ಬಾಕ್ಸಿಂಗ್‌ ನೆಟ್‌ವರ್ಕ್‌ ಚಾಂಪಿಯನ್‌ ಪಟ್ಟ ಗೆದ್ದ ಭಾರತದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ವೈಭವ್‌ ಪಾತ್ರರಾಗಿದ್ದಾರೆ.

ಎಂಎಂಎ:

ಟೀಮ್‌ ಇಂಡಿಯಾದ ಎಂಎಂಎ ಅಥ್ಲೀಟ್‌ ಆಗಿರುವ ವೈಭವ್‌ ಶೆಟ್ಟಿ, ಐಎಂಎಂಎಎಫ್‌ 2019r ಏಷ್ಯನ್‌ ಓಪನ್‌ ಚಾಂಪಿಯನ್ಷಿಪ್‌ನಲ್ಲಿ ಕಂಚಿನ ಪದಕ, 2019ರ ವಿಶ್ವ ಚಾಂಪಿಯನ್ಷಿಪ್‌ನಲ್ಲಿ ಕಂಚಿನ ಪದಕ, 2020ರ ಒಸೇನಿಯಾ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಜಿಜುತ್ಸು:

ಏಷ್ಯನ್‌ ಎಸ್‌ಐಜೆಎಫ್‌ ನೊ ಗಿ ಮಾಸ್ಟರ್‌ ವೈಟ್‌ ರಾಂಕಿಗ್‌ನಲ್ಲಿ ನವೆಂಬರ್‌ 2018ನಿಂದ ನವೆಂಬರ್‌ 2019ವರೆಗೆ 3ನೇ ರಾಂಕ್.‌ (ಪೌಂಡ್‌ ಫಾರ್‌ ಪೌಂಡ್).‌

ಎಎಸ್‌ಜೆಜೆಎಫ್‌ 2019ರ ಏ಼ಷ್ಯನ್‌ ಓಪನ್‌ ಚಾಂಪಿಯನ್ಷಿಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ.

ಎಸ್‌ಜೆಜೆಐಎಫ್‌ 2021ರ ಚಾಂಪಿಯನ್ಷಿಪ್‌ನಲ್ಲಿ 2 ಚಿನ್ನ 1 ಬೆಳ್ಳಿ ಹಾಗೂ 1 ಕಂಚಿನ ಪದಕ.

ಪ್ರೊ ಬಾಕ್ಸಿಂಗ್‌:

ಒಂದು ಜಯದ ದಾಖಲೆಯನ್ನು ಹೊಂದಿರುವ ವೈಭವ್‌ ಶೆಟ್ಟಿ ಇದುವರೆಗೂ ಸೋತಿಲ್ಲ. ಒಂದು ನಾಕೌಟ್‌ ಕೂಡ ಅವರ ಹೆಸರಿನಲ್ಲಿದೆ.

ವಿವಿಧ ಹುದ್ದೆಗಳು:

ವೈಭವ್‌ ಶೆಟ್ಟಿ ಮೊಯ್‌ಥಾಯ್‌ನಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಭಾರತದಲ್ಲಿ ವಿಶ್ವ ಮೊಯ್‌ಥಾಯ್‌ ಬಾಕ್ಸಿಂಗ್‌ ಕೌನ್ಸಿಲ್‌ ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರೆನಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಮೊಯ್‌ಥಾಯ್‌ ಕ್ರೀಡೆ ಜನಪ್ರಿಯಗೊಳಿಸುವಲ್ಲಿ ವೈಭವ್‌ ಅವರ ಪಾತ್ರ ಪ್ರಮುಖವಾಗಿದೆ.

ವಿಶ್ವ ಮೊಯ್‌ಥಾಯ್‌ ಬಾಕ್ಸಿಂಗ್‌ ಕೌನ್ಸಿಲ್‌ನ ಆಗ್ನೇಯ ಏ಼ಷ್ಯಾದ ಸ್ಥಾಪಕ ಚೇರ್ಮನ್‌ ಆಗಲು ವೈಭವ್‌ ಶೆಟ್ಟಿ ಅವರ ಹೆಸರು ಶಿಫಾರಸುಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಅವರು ಆಗ್ನೇಯ ಏಷ್ಯಾದ ಅಧ್ಯಕ್ಷರೂ ಆಗಲಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.

ಭಾರತದಲ್ಲಿ ನಡೆಯುವ ವಿಶ್ವ ಬಾಕ್ಸಿಂಗ್‌ ಫೌಂಡೇಷನ್‌ (WBF) ಇದರ ಟೈಟಲ್‌ ಫೈಟ್‌ ನಡೆದರೆ ಅದರ ಸಮನ್ವಯಕಾರ ಹಾಗೂ ಅಧೀಕ್ಷಕರಾಗಿರುತ್ತಾರೆ.

ವಿಶ್ವ ಕಿಕ್‌ ಬಾಕ್ಸಿಂಗ್‌ ನೆಟ್‌ವರ್ಕ್‌ನ ಪ್ರಮೋಟರ್‌ ಆಗಿಯೂ ವೈಭವ್‌ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. Fraggingmonk Pramotions ಇದರ ಸ್ಥಾಪಕರೂ ಆಗಿರುತ್ತಾರೆ.

ವೈಭವ್‌ ಶೆಟ್ಟಿ ಅವರ ಸಾಧನೆಗಳ ಪಟ್ಟಿ

 1. Combat Carnival 2017 Submission – Heavy Weight category- Gold

2.Bangalore Open MMA 2017 – Middleweight Quarter Finalist

3.Body Power Open MMA 2018 – Middle Weight Semi Finalist

 

 1. Abhiva Crossfit MMA Open 2018 – Middle Weight winner
 2. Cross Club BJJ Competition 2018 – Light Heavy Weight Bronze Medallist
 3. ASJJF Bangalore Open 2018- No Gi Medium Heavy – Silver Medallist
 4. ASJJF Bangalore Open 2018 – No Gi Open Weight – Bronze Medallist
 5. ASJJF Bangalore Open 2018 – Gi Medium Heavy – Silver Medallist
 6. IMMAF-WMMAF Asian Open 2019 (Team India) – Quarter Finalist

10.ASJJF Asian Open 2019- No Gi Medium Heavy – Silver Medallist

11.ASJJF Asian Open 2019 – No Gi Open Weight – Gold Medallist

12.ASJJF Asian Open 2019- Gi Medium Heavy – Silver Medallist

13.ASJJF Asian Open 2019 – Gi Open Weight – Silver Medallist

 1. Bengaluru Open 2019 – Middleweight – Bronze Medallist
 2. IMMAF-WMMAF World Championship 2019 (Team India)
 3. ASJJF-SJJINDF Nationals 2019 – Gi Medium Heavy Weight – Gold Medallist
 4. ASJJF-SJJINDF Nationals 2019 – Gi Open Weight – Bronze Medallist
 5. ASJJF-SJJINDF Nationals 2019 – No Gi Medium Heavy Weight – Silver Medallist
 6. IMMAF Oceania Open 2020 – Middleweight – Bronze Medallist
 7. World Kickboxing Network International Champion – Super Light Heavyweight (November 2020 – Present)
 8. Pro Boxing Debut vs Hari Prasad – August 2021-Cruiserweight – Win by KO
 9. SJJIF World Championships 2021 – Medium Heavy Gi – Gold
 10. SJJIF World Championships 2021 – Medium Heavy No Gi – Gold
 11. SJJIF World Championships 2021 – Open Weight Gi – Bronze
 12. SJJIF World Championships 2021 – Open Weight No Gi – Silver

Related Articles