Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

192ಕ್ಕೆ ನೋ ಲಾಸ್‌…. 192/10 ಇದು ಕ್ರಿಕೆಟ್‌ನ ಅಚ್ಚರಿ!

ಬ್ಯಾಂಕಾಕ್‌: ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಟಿ20 ಮಹಿಳಾ ವಿಶ್ವಕಪ್‌ ಏಷ್ಯಾ ವಲಯದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕ್ರಿಕೆಟ್‌ನ ಅಚ್ಚರಿಯೊಂದು ನಡೆದಿದೆ. ಯುಎಇ ಹಾಗೂ ಕತಾರ್‌ ನಡುವಿನ ಪಂದ್ಯ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚರ್ಚೆಯ ವಿಷಯವಾಗಿದೆ. UAE retired all 10 of their batters to save time in their ICC Women’s T20 World Cup Asia Qualifier 2025 contest against Qatar

ಕತಾರ್‌ ವಿರುದ್ಧ ಯುಎಇ ಮೊದಲು ಬ್ಯಾಟಿಂಗ್‌ ಮಾಡಿ 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 192 ರನ್‌ ಗಳಿಸಿತ್ತು. ನಾಯಕಿ ಇಶಾ ಓಜಾ 113 ಹಾಗೂ ತೀರ್ಥ ಸತೀಶ್‌ 74 ರನ್‌ ಗಳಿಸಿದ್ದರು. ಆದರೆ ಕ್ಷಣ ಮಾತ್ರದಲ್ಲಿ ಯುಎಇ 192 ರನ್‌ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತ್ತು! ನಂತರ ಕತಾರ್‌ ತಂಡವನ್ನು 29 ರನ್‌ಗೆ ಆಲೌಟ್‌ ಮಾಡಿ, 163 ರನ್‌ ಜಯ ಗಳಿಸಿತು.

ಪಂದ್ಯಕ್ಕೆ ಮಳೆಯ ಅಡ್ಡಿಯಾಗು ಸಾಧ್ಯತೆ ಇತ್ತು.  ಪಂದ್ಯಕ್ಕೆ ಮಳೆಯ ಅಡ್ಡಿಯಾದರೆ ಅಂಕ ಹಂಚಿಕೆಯಾಗುತ್ತದೆ. ಇದಕ್ಕಾಗಿ ಯುಎಇ ಜಾಣ್ಮೆಯ ನಿರ್ಧಾರವನ್ನು ಕೈಗೊಂಡಿತು. ಎಲ್ಲ 10 ಆಟಗಾರರು ರಿಟೈರ್ಡ್‌ ಹರ್ಟ್‌ ಎಂಬ ತೀರ್ಮಾನವನ್ನು ಕೈಗೊಂಡಿತು. ಎಲ್ಲರೂ ಪ್ಯಾಡ್‌ ಕಟ್ಟಿ ಗಾಯಗೊಂಡು ನಿವೃತ್ತಿ ಎಂದು ಘೋಷಿಸಿಲಾಯಿತು. ಏಕೆಂದರೆ ಟಿ20ಯಲ್ಲಿ ಡೀಕ್ಲೇರ್‌‌ ಘೋಷಿಸುವಂತಿಲ್ಲ. ಯುಎಇ ಕೈಗೊಂಡು ಈ ಜಾಣ್ಮೆಯ ತೀರ್ಮಾನದಿಂದ ಜಯ ಗಳಿಸುವಲ್ಲಿ ಯಶಸ್ವಿಯಾಯಿತು. ಸಮಯ ಉಳಿಸಲು ಯುಎಇ ಈ ತೀರ್ಮಾನ ಕೈಗೊಂಡಿತ್ತು. ಈ ಎರಡೂ ತಂಡಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಆಟಗಾರ್ತಿಯರು ಇದ್ದಾರೆ ಎಂಬುದು ವಿಶೇಷ.


administrator