Friday, October 4, 2024

ಕುಂದಾಪುರದಲ್ಲಿ ಟಾರ್ಪೆಡೊಸ್‌ ಅಖಿಲ ಭಾರತ ಚೆಸ್

ಸೋಮಶೇಖರ್‌ ಪಡುಕರೆ, Sportsmail

ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕಾರ್ನಿವಲ್‌ ಇದರ ಭಾಗವಾಗಿ ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕ್ಲಬ್‌ ಆಶ್ರಯದಲ್ಲಿ ಡಿಸೆಂಬರ್‌ 11 ಮತ್ತು 12 ರಂದು ಟಾರ್ಪೆಡೊಸ್‌ ಲಕ್ಷ್ಮೀ ಶೆಟ್ಟಿ ಸ್ಮರಣಾರ್ಥ ಅಖಿಲ ಭಾರತ ಫಿಡೆ ರೇಟೆಡ್‌ ರಾಪಿಡ್ ಚೆಸ್‌ ಚೆಸ್‌ ಚಾಂಪಿಯನ್‌ಷಿಪ್‌  ಕುಂದಾಪುರದ ಹರಿಪ್ರಸಾದ್‌ ಹೊಟೇಲ್‌ನ ಆತಿಥ್ಯ ಸಭಾಂಗಣದಲ್ಲಿ ನಡೆಯಲಿದೆ.

 

ಒಟ್ಟು 2,00,000 ರೂ. ಬಹುಮಾನ ಮೊತ್ತದ ಈ ಟೂರ್ನಿಯು 165 ಬಹುಮಾನಗಳನ್ನು ಒಳಗೊಂಡಿರುತ್ತದೆ. ಅಂತಾರಾಷ್ಟ್ರೀಯ ಚೆಸ್‌ ಫೆಡರೇ಼ಷನ್‌ (FIDE), ಅಖಿಲ ಭಾರತ ಚೆಸ್‌ ಫೆಡರೇಷನ್‌, (AICF), ಯುನೈಟೆಡ್‌ ಕರ್ನಾಟಕ ಚೆಸ್‌ ಅಸೋಸಿಯೇಷನ್‌ (UCCA) ಮತ್ತು ಉಡುಪಿ ಜಿಲ್ಲಾ ಚೆಸ್‌ ಅಸೋಸೊಯೇ಼ಷನ್ (UDCA) ಸಹಯೋಗದೊಂದಿಗೆ ಈ ಚಾಂಪಿಯನ್ಷಿಪ್‌ ನಡೆಯಲಿದೆ ಎಂದು ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷ ಗೌತಮ್‌ ಶೆಟ್ಟಿ ಅವರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಹರಿಪ್ರಸಾದ್‌ ಹೊಟೇಲ್‌ನ ಆತಿಥ್ಯ ಸಭಾಂಗಣದಲ್ಲಿ ಚಾಂಪಿಯನ್ಷಿಪ್‌ ನಡೆಯಲಿದೆ.

ಡಿಸೆಂಬರ್‌ 11ರಂದು ಬೆಳಿಗ್ಗೆ 9 ಗಂಟೆಗೆ ಚಾಂಪಿಯನ್ಷಿಪ್‌ಗೆ ಚಾಲನೆ ದೊರೆಯಲಿದ್ದು, 10:30ರಿಂದ ಮೊದಲ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿದೆ. ಡಿಸೆಂಬರ್‌ 12ರ ಸಂಜೆ 5:30ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.

ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕಾರ್ನಿವಲ್‌ ಇದರ ಅಂಗವಾಗಿ ಈಗಾಲೇ ರಾಷ್ಟ್ರಮಟ್ಟದ ಟೇಬಲ್‌ ಟೆನಿಸ್‌ ಮತ್ತು ಬ್ಯಾಡ್ಮಿಂಟನ್‌ ಟೂರ್ನಿಗಳು ಯಶಸ್ವಿಯಾಗಿ ನಡೆದಿದ್ದು, ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಕುಳಾಯಿ ಫೌಂಡೇಷನ್‌ನ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಉದ್ಯಮಿ ವಿಜಯ್‌ ಹೆಗ್ಡೆ, ಜಕಾರಿಯಾ ಬಜ್ಪೆ, ಜಹೀರ್‌ ಜಕಾರಿಯಾ, ರಂಜನ್‌ ನಾಗರಕಟ್ಟೆ ಅವರು ಈ ಚಾಂಪಿಯನ್‌ಷಿಪ್‌ಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ನಿಯಮಗಳು:

ಅಖಿಲ ಭಾರತ ಚೆಸ್‌ ಸಂಸ್ಥೆಯ ನಿಯಮಾನುಸಾರ ಆಟಗಾರರು ಆನ್‌ಲೈನ್‌ ಮೂಲಕವೇ ತಮ್ಮ ಹೆಸರನ್ನು ನೋದಾಯಿಸಿಕೊಳ್ಳಬೇಕು.

ಟೂರ್ನಿ ಆರಂಭಕ್ಕೆ ಒಂದು ದಿನ ಮುಂಚಿತವಾಗಿಯೇ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಅಲ್ಲದೆ ಹೊಸದಾಗಿ ಪಾಲ್ಗೊಳ್ಳುವ ಪ್ರತಿಯೊಬ್ಬ ಆಟಗಾರರೂ AICF ನಲ್ಲಿ ನೋಂದಾಯಿತರಾಗಿರಬೇಕು.

ಅಖಿಲ ಭಾರತ ಚೆಸ್‌ ಅಸೋಸಿಯೇಷನ್‌ನಲ್ಲಿ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವವರು  https://prs.aicf.in/new-register ಲಿಂಕ್‌ ಕ್ಲಿಕ್‌ ಮಾಡಿ.

ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದು, ನವೀಕರಿಸಿಕೊಳ್ಳಬೇಕಾಗಿದ್ದಲ್ಲಿ https://prs.aicf.in/player-search  ಲಿಂಕ್‌ ಕ್ಲಿಕ್‌ ಮಾಡಿ.

IM ಮತ್ತು GM ಆಟಗಾರರಿಗೆ ಉಚಿತ ವಸತಿ ಸೌಲಭ್ಯ ನೀಡಲಾಗುವುದು.

ಪ್ರವೇಶ ಶುಲ್ಕ: ರೂ. 1,000, ಹೆಸರನ್ನು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 09-12-2021.

ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೆಸರನ್ನು ನೋಂದಾಯಿಸಲು www.udupichessassociation.com ಅಥವಾ www.chessfee.com ಸಂಪರ್ಕಿಸಿ.

ತೀಪರುಗಾರರು:

ಅಂತಾರಾಷ್ಟ್ರೀಯ ತೀರ್ಪುಗಾರರಾದ ವಸಂತ್‌ ಬಿ.ಎಚ್.‌, ರಾಷ್ಟ್ರೀಯ ತೀರ್ಪುಗಾರರಾದ ಸಾಕ್ಷತ್‌ ಯು.ಕೆ., ಬಾಬು ಜೆ. ಪೂಜಾರಿ ಮತ್ತು ಸೌಂದರ್ಯ ಯು.ಕೆ. ಪಾಲ್ಗೊಳ್ಳುವರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಗೌತಮ್‌ ಶೆಟ್ಟಿ- 9845121498

ಬಾಬು ಪೂಜಾರಿ: 9448547958 (ಕನ್ನಡ)

ಸೌಂದರ್ಯ ಯು.ಕೆ.: 9731230323 (ಇಂಗ್ಲಿಷ್)

Related Articles