Wednesday, July 24, 2024

ಉಪಾಂತ್ಯಕ್ಕೆ ಲಗ್ಗೆಯಿಟ್ಟ ರೋಜರ್, ಜೊಕೊವಿಚ್

ಪ್ಯಾರಿಸ್: 

ಸ್ವಿಸ್ ಆಟಗಾರ ರೋಜರ್ ಫೆಡರರ್ ಹಾಗೂ ಸರ್ಬಿಯಾ ಸ್ಟಾರ್ ಆಟಗಾರ ನೊವೊಕ್ ಜಾಕೊವಿಚ್ ಅವರು ತಡರಾತ್ರಿ ನಡೆದ ಪ್ರತ್ಯೇಕ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಇವರಿಬ್ಬರೂ ಪ್ಯಾರಿಸ್ ಮಾಸ್ಟರ್ಸ್‍ನ ಸೆಮಿಫೈನಲ್ ತಲುಪಿದ್ದಾರೆ.

ಇವರಿಬ್ಬರೂ ಉಪಾಂತ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷ. ಇದರೊಂದಿಗೆ ಪ್ರಸಕ್ತ ಋತುವಿನಲ್ಲಿ ಈ ಆಟಗಾರು ಎರಡನೇ ಬಾರಿ ಸೆಣಸಿದಂತಾಗುತ್ತದೆ.
ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಅವರು ಅಂತಿಮ ಎಂಟರ ಸುತ್ತಿನಲ್ಲಿ ಕೀ ನಿಶಿಕೊರಿ ಅವರನ್ನು 6-4, 6-4 ಅಂತರದಲ್ಲಿ ಮಣಿಸುವ ಮೂಲಕ ಪ್ಯಾರಿಸ್ ಮಾಸ್ಟರ್ಸ್ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.
ಇನ್ನೂ ವಿಶ್ವದ ಎರಡನೇ ರ್ಯಾಂಕಿಂಗ್ ಆಟಗಾರ ನೊವೊಕ್ ಜೊಕೊವಿಚ್ ಅವರು, ತಡರಾತ್ರಿ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಚ್ ಅವರನ್ನು 4-6, 6-2, 6-3 ಅಂತರದಲ್ಲಿ ಸೋಲಿಸುವ ಮೂಲಕ ಉಪಾಂತ್ಯಕ್ಕೆ ಪ್ರವೇಶ ಮಾಡಿದರು.
ನೊವೊಕ್ ಜಕೊವಿಚ್ ಹಾಗೂ ರೋಜರ್ ಫೆಡರರ್ ಇಂದು ರಾತ್ರಿ 9.30ಕ್ಕೆ ಪ್ಯಾರಿಸ್ ಮಾಸ್ಟರ್ಸ್ ಸೆಮಿಫೈನಲ್ ನಲ್ಲಿ ಕಾದಾಟ ನಡೆಸಲಿದ್ದಾರೆ. ಇದಕ್ಕೂ ಮುನ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಥೀಮ್ ಹಾಗೂ ಖಚಾನೋವ್ ಅವರು ಇಂದು ಸಂಜೆ 6,30ಕ್ಕೆ ಸೆಣಸಲಿದ್ದಾರೆ.

Related Articles