ಸ್ಪೋರ್ಟ್ಸ್ ಮೇಲ್ ವರದಿ
ಡಿಸೆಂಬರ್ 9 ರಿಂದ 16 ವರೆಗೆ ನಡೆಯಲಿರುವ 11ನೇ ಆವೃತ್ತಿಯ ಟೂರ್ ಆಫ್ ನಿಲಗಿರೀಸ್‌ನಲ್ಲಿ ಜಗತ್ತಿನ ವಿವಿಧ ದೇಶಗಳಿಂದ 110ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು 950 ಕಿ.ಮೀ.ಗೂ ಹೆಚ್ಚಿನ ಸೈಕಲ್ ಟೂರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. 13 ದೇಶಗಳ 29 ಅಂತಾರಾಷ್ಟ್ರೀಯ ಸೈಕ್ಲಿಸ್ಟ್‌ಗಳು ಸೇರಿದಂತೆ 17 ಮಹಿಳಾ ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುತ್ತಿರುವುದು 2018ರ ಟೂರ್ ಆಫ್ ನಿಲಗಿರೀಸ್‌ನ ವಿಶೇಷವಾಗಿದೆ.
ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ ನಿಲಗಿರೀಸ್ ಬಯೋಸ್ಪೇರ್ ರಿಸರ್ವ್‌ನಲ್ಲಿ ಈ ಸೈಕಲ್ ಟೂರ್ ಸಾಗಲಿದೆ. ದೇಶದ ವಿಶಿಷ್ಠ ಸೈಕ್ಲಿಂಗ್ ಟೂರ್‌ನಲ್ಲಿ ಅಂತಾರಾಷ್ಟ್ರೀಯ ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುತ್ತಿರುವುದು ವಿಶೇಷ.
ಮೈಸೂರಿನಲ್ಲಿ ಆರಂಭ
ಮೈಸೂರಿನಲ್ಲಿ ಆರಂಭವಾಗಲಿರುವ ರೇಸ್‌ನಲ್ಲಿ ಸೈಕ್ಲಿಸ್ಟ್‌ಗಳು ಹಾಸನ, ಕುಶಾಲನಗರ, ಸುಲ್ತಾನ್ ಬತೇರಿ, ಊಟಿ, ಕಲ್ಪೆಟ್ಟ ಮಾರ್ಗವಾಗಿ ಸಾಗಿ ಪುನಃ ಮೈಸೂರಿಗೆ ಮರಳುವುದರೊಂದಿಗೆ ಸೈಕಲ್ ಟೂರ್ ಕೊನೆಗೊಳ್ಳಲಿದೆ. ಟಿಎಫ್ಎನ್ ನ ನಾಲ್ಕನೇ ದಿನದಂದು ಸುಲ್ತಾನ್ ಬತೇರಿಯಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸೈಕ್ಲಿಸ್ಟ್‌ಗಳು ಕಠಿಣವಾದ ಕಲ್ಹಟ್ಟಿ ಘಾಟ್ ಏರಬೇಕಿರುತ್ತದೆ. ಇದು ವಿಶ್ವದ ಅತ್ಯಂತ ಕಠಿಣ ಸೈಕ್ಲಿಂಗ್ ಆರೋಹಣಗಳಲ್ಲಿ ಒಂದಾಗಿದೆ.
ಎಂಟು ದಿನಗಳ ಸೈಕ್ಲಿಂಗ್ ಪ್ರಯಾಣದಲ್ಲಿ ಸೈಕ್ಲಿಸ್ಟ್‌ಗಳು ಹಲವಾರು ನೈಸರ್ಗಿಕ ವಿಸ್ಮಯಗಳನ್ನು ನೋಡಲಿದ್ದಾರೆ. ಕಡಿದಾದ ಕಣಿವೆಗಳು, ಕಾಫಿ-ಟೀ ಸಸ್ಯರಾಶಿಗಳು, ಮೂರು ವನ್ಯಜೀವಿ ಅಭಯಾರಣ್ಯಗಳು ಹಾಗೂ ಪರ್ವತಗಳನ್ನು ದಾಟಿಕೊಂಡು ಹೋಗಲಿದ್ದಾರೆ. ಅದೇ ರೀತಿ ಪ್ರತಿಯೊಂದು ವಲಯದ ಆಹಾರದ ರುಚಿ ನೋಡುವ ಅವಕಾಶವೂ ಇದೆ. ಸೈಕ್ಲಿಸ್ಟ್‌ಗಳು ತಾವು ಸಾಗುವ ಕಡಿದಾದ ಹಾದಿಯಲ್ಲಿ ನೀಲಗಿರೀಸ್ ಬಯೋಸ್ಪೇರ್‌ನ ಸೌಂದರ್ಯವನ್ನು ಕ್ಯಾಮೆರಾಗಳಲ್ಲಿ ಸೇರೆ ಹಿಡಿದುಕೊಳ್ಳುವ ಅವಕಾಶವೂ ಇದೆ.
ಸೈಕಲ್ ಮೂಲಕ ಪ್ರಕೃತಿಯ ಅನುಭವ ಪಡೆಯುವ ಅಪೂರ್ವ ಅವಕಾಶವೇ ಟೂರ್ ಆಫ್ ನೀಲಗಿರೀಸ್. ಈ ವರ್ಷದ ಟೂರ್ ಕೂಡ ಇದರಿಂದ ಭಿನ್ನವಾಗಿಲ್ಲ ಎಂದು ಆರ್‌ಎಸಿ-ಎ್ನಫ್ ನ ಸಹ ಸಂಸ್ಥಾಪಕ ದೀಪಕ್ ಮಾಜಿಪಾಟೀಲ್ ಹೇಳಿದ್ದಾರೆ. ಪ್ರತಿ ಆವೃತ್ತಿಯ ಟಿಎಫ್ಎನ್ ಕೂಡ ರೈಡರ್‌ಗಳ ನೆನಪಿನಲ್ಲಿ ಹಸಿರಾಗಿ ಉಳಿಯುತ್ತದೆ. ಅವರು ಮತ್ತೊಮ್ಮೆ ನಿಸರ್ಗದ ಅನು‘ವ ಪಡೆಯುವುದಕ್ಕಾಗಿ ಟೂರ್‌ಗೆ ಸಜ್ಜಾಗಿ ಬರುತ್ತಿದ್ದಾರೆ. ಭಾರತೀಯ ಸೈಕ್ಲಿಸ್ಟ್‌ಗಳು ಮಾತ್ರವಲ್ಲದೆ ಹೆಚ್ಚೆಚ್ಚು ವಿದಶಿ ಸೈಕ್ಲಿಸ್ಟ್‌ಗಳು ಈ ಭವ್ಯ ಪ್ರಯಾಣದ ಭಾಗವಾಗುವ ಸಲುವಾಗಿಯೇ ಭಾರತಕ್ಕೆ ಆಗಮಿಸಲು ಇಚ್ಛಿಸುತ್ತಾರೆ. ಡೆನ್ಮಾರ್ಕ್‌ನಿಂದ 7 ಸೈಕ್ಲಿಸ್ಟ್‌ಗಳು, ಅಮೆರಿಕದಿಂದ 4, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಇಗ್ಲೆಂಡ್‌ನಿಂದ ತಲಾ 3, ಬೆಲ್ಜಿಯಂ ಹಾಗೂ ಕೆನಡಾದಿಂದ ತಲಾ ಎರಡು, ಆಸ್ಟ್ರಿಯಾ, ಗ್ರೀಸ್, ಮಲೇಷ್ಯಾ, ಫಿಲಿಪ್ಪಿನ್ಸ್ ಮತ್ತು ಪೋಲೆಂಡ್‌ನಿಂದ ತಲಾ ಒಬ್ಬರು ಸೈಕ್ಲಿಸ್ಟ್‌ಗಳು ಈ ಬಾರಿ ಪಾಲ್ಗೊಳ್ಳಲಿದ್ದಾರೆ. ಹಾಲಿ ವರ್ಷ ದಾಖಲೆಯ ಸ್ಪರ್ಧಿಗಳು ಅಂತಾರಾಷ್ಟ್ರೀಯ ಮಟ್ಟದಿಂದ ಪಾಲ್ಗೊಳ್ಳುವುದರ ಜತೆಯಲ್ಲಿ ದೇಶ ವಿದೇಶದಿಂದ 17 ಮಹಿಳಾ ಸೈಕ್ಲಿಸ್ಟ್‌ಗಳು ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
ಅತಿ ದೊಡ್ಡ ಸೈಕಲ್ ಟೂರ್
ಸಾಮಾನ್ಯ ರೀತಿಯಲ್ಲಿ ಆರಂಭಗೊಂಡ ಟಿಎಫ್ಎನ್ ಇಂದು ಅತಿ ದೀರ್ಘ ಹದಿ ಆಕ್ರಮಿಸಿದೆ. ಭಾರತದ ಅತಿ ದೊಡ್ಡ ಹಾಗೂ ಪ್ರೀತಿಪಾತ್ರ ಬೈಕ್ ಟೂರ್ ಎನಿಸಿಕೊಂಡಿದೆ. ಈ ಮೂಲಕ ಸೈಕ್ಲಿಂಗ್ ಭೂಪಟದಲ್ಲಿ ಭಾರತದ ಹೆಸರು ಕೂಡ ಕಾಣಿಸಿಕೊಳ್ಳುವಂತೆ ಮಾಡಿದೆ. ಸಾಹಸದ ಅನುಭವವನ್ನು ನೀಡುವ ಸೈಕ್ಲಿಂಗ್ ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಉತ್ಸಾಹಿಗಳ ಪಾಲಿಗೆ ಟಿಎಫ್ಎನ್ ಉತ್ತಮ ಆಯ್ಕೆ ಎನಿಸಿದೆ.
ಈ ಪ್ರವಾಸದಲ್ಲಿ ಇಂಡಿಯಾ ಎಟಿಟಿಬಿ ಚಾಂಪಿಯನ್ ಕಿರಣ್ ಕುಮಾರ್ ರಾಜು, ಇಂಡಿಯಾ ರೋಡ್ ಚಾಂಪಿಯನ್ ನವೀನ್ ಜಾನ್, ಸೇರಿದಂತೆ ಪ್ರಸಿದ್ಧ ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳಲಿದ್ದಾರೆ.
ಒಲಿಂಪಿಕ್ಸ್ ಚಾಂಪಿಯನ್!
ಈ ಬಾರಿಯ ಪ್ರವಾಸದಲ್ಲಿ ಸೈಕ್ಲಿಸ್ಟ್‌ಗಳಿಗೆ ಸ್ಫೂರ್ತಿಯ ಚಿಲುಮೆಯೊಂದು ಸಿಗಲಿದೆ. ಅದೇನೆಂದರೆ 1984ರ ಒಲಿಂಪಿಕ್ ಚಾಂಪಿಯನ್ ಅಲೆಕ್ಸಿಗ್ರೇವಲ್ ಪಾಲ್ಗೊಳ್ಳಲಿದ್ದಾರೆ. ಆದರೆ ಸ್ಪರ್ಧಿಯಾಗಿ ಅಲ್ಲ ಸೈಕ್ಲಿಸ್ಟ್‌ಗಳಿಗೆ ಸಲಹೆ ನೀಡುವ ಸ್ವಯಂ ಸೇವಕರಾಗಿ. ಟಿಎಫ್ಎನ್ 2017ರಲ್ಲಿ ಪೆಡಲ್ ಮಾಡಿದ್ದ ಅಲೆಕ್ಸಿಗ್ರೇವಲ್ ಈ ಆವೃತ್ತಿಯಲ್ಲಿ ಸ್ವಯಂಸೇವಕರಾಗಿರುವುದು ವಿಶೇಷ. ಅವರ ಸೈಕ್ಲಿಂಗ್ ಪ್ರೀತಿ ಇದಕ್ಕೆ ಸಾಕ್ಷಿಯಾಗಿದೆ. ದೊಡ್ಡ ಗುರಿಯನ್ನಿಟ್ಟುಕೊಂಡು ಬರುವ ಉತ್ಸಾಹಿ ಯುವ ಸೈಕ್ಲಿಸ್ಟ್‌ಗಳಿಗೆ ಅವರು ಸಲಹೆ ನೀಡಲಿದ್ದಾರೆ.
ಸೈಕ್ಲಿಂಗ್ ಮೂಲಕ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂಬ ಉದ್ದೇಶದಿಂದಲೂ ಪಾಲ್ಗೊಳ್ಳುವವರಿದ್ದಾರೆ. ಡಾ. ಅರವಿಂದ್ ಭತೇಜಾ ಸೀತಾ ಭತೇಜಾ ಸ್ಪೇಷಾಲಿಟಿ ಆಸ್ಪತ್ರೆಯನ್ನು ಪ್ರತಿನಿಧಿಸಲಿದ್ದಾರೆ. ಅದೇ ರೀತಿ ಕೆನೆತ್ ಆಂಡರ್ಸನ್ ನೇಚರ್ ಸೊಸೈಟಿ, ಇಕ್ಷಾ ಫೌಂಡೇಷನ್ ಹಾಗೂ ವಿದ್ಯೋದಯಾ ಸ್ಕೂಲ್‌ನ ಸೈಕ್ಲಿಸ್ಟ್‌ಗಳೂ ಪಾಲ್ಗೊಳ್ಳಲಿದ್ದಾರೆ.
ಹೆಚ್ಚಿನ ವಿವರಗಳಿಗೆ visit: https://www.facebook.com/Ride- A-Cycle-Foundation- 470982642939503/