ಫಾರ್ಚುನ್‍ಗೈಂಟ್ಸ್ ಗೆ ಸತತ ನಾಲ್ಕನೇ ಜಯ

0
184
ಗ್ರೇಟರ್ ನೋಯ್ಡ:

ಗೆಲುವಿನ ಲಯ ಮುಂದುವರಿಸಿರುವ ಗುಜರಾತ್ ಫಾರ್ಚುನ್‍ಗೈಂಟ್ಸ್, ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿತು.

ಇದರೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯವನ್ನು ಗುಜರಾತ್ ಗೆದ್ದಂತಾಯಿತು. ಆದರೆ, ಕಳೆದ ಮೂರು ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್‍ಗೆ ಈ ಸೋಲು ಭಾರಿ ನೋವು ಉಂಟು ಮಾಡಿತು.
ಫಾರ್ಚುನ್ ಗೈಂಟ್ಸ್ ಪರ ಸುನೀಲ್ ಕುಮಾರ್ ಏಳು ಟ್ಯಾಕಲ್ ಸೇರಿ ಒಟ್ಟು ಎಂಟು ಅಂಕ ಪಡೆದರೆ, ಸಚಿನ್ ಹಾಗೂ ರೋಹಿತ್ ಗುಲ್ಲೆ ತಲಾ ಆರು ಅಂಕ ಪಡದು ತಂಡದ ಗೆಲುವಿಗೆ ನೆರವಾದರು. ಇನ್ನೂ ಜೈಪುರ ಪರ ಯೂಂಗ್ ಚಾಂಗ್ ಕೊ ಎರಡು ಟ್ಯಾಕಲ್ ಪಾಯಿಂಟ್ ಸೇರಿ ಒಟ್ಟು ಐದು ಅಂಕಗಳಿಸಿದರೆ, ದೀಪಕ್ ಹೂಡ, ಮೋಹಿತ್ ಚಿಲ್ಲರ್ ಹಾಗೂ ನಿತಿನ್ ರಾವಲ್ ತಲಾ ನಾಲ್ಕು ಅಂಕಗಳಿಸಿದರು.
ಫಾರ್ಚುನ್ ಗೈಂಟ್ಸ್ ತಂಡ ಎ ವಲಯದ ಪಟ್ಟಿಯಲ್ಲಿ ಒಟ್ಟು 31 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಐದು ಪಂದ್ಯಗಳನ್ನು ಸೋಲುವ ಮೂಲಕ ಕೊನೆಯ ಸ್ಥಾನದಲ್ಲಿದೆ.