Tuesday, November 12, 2024

ಕ್ವಾರ್ಟರ್ ಫೈನಲ್ ತಲುಪಿದ ಪ್ರಜ್ಞೇಶ್

ಪುಣೆ:

ಪ್ರಸಕ್ತ ಸಾಲಿನ ಬೆಂಗಳೂರು ಓಪನ್ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಅವರು ಪುಣೆ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆೆಯಿಟ್ಟರು.

ಇಲ್ಲಿ ನಡೆದ ಪುರುಷರ ಸಿಂಗಲ್ಸ್  ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಲುಕಾಸ್ ಗ್ರೇಚ್ ಎದುರು 6-1, 6-3 ನೇರಸೆಟ್‌ಗಳಿಂದ ಜಯ ತಮ್ಮದಾಗಿಸಿಕೊಂಡರು. ವಿಶ್ವಾಸದಿಂದಲೇ ಮೈದಾನಕ್ಕೆೆ ಆಗಮಿಸಿದ ಗುಣೇಶ್ವರನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಎದುರಾಳಿಯನ್ನು ತಮ್ಮ ಬಲಿಷ್ಠ ಹೊಡೆತಗಳಿಂದ ಹಿನ್ನಡೆಯಾಗುವಂತೆ ಮಾಡಿದರು. ಮೊದಲ ಸೆಟ್‌ನಲ್ಲಿ ಐದು ಹಾಗೂ ಎರಡನೇ ಸೆಟ್‌ನಲ್ಲಿ ಮೂರು ಅಂಕಗಳ ಮುನ್ನಡೆಯಾಗಿ ಗೆಲುವಿನ ನಗೆ ಬೀರಿದರು. ಅವರು. ಕ್ವಾರ್ಟರ್ ಫೈನಲ್‌ನಲ್ಲಿ ಕಜಕಿಸ್ತಾನದ ಅಲೆಗ್ಸಾಂಡರ್  ನೆಡೊಯೆಸೋವ್ ಅವರ ವಿರುದ್ಧ ಹೋರಾಟ ನಡೆಸಲಿದ್ದಾರೆ.
‘ಎರಡನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಎಂಟರ ಘಟ್ಟಕ್ಕೆೆ ಅರ್ಹತೆ ಪಡೆದಿರುವುದಕ್ಕೆೆ ಖುಷಿಯಾಗಿದೆ. ಮುಂದಿನ ಪಂದ್ಯದಲ್ಲಿ ಇನ್ನೂ ಹೆಚ್ಚಿನ ಆಟವಾಡಿ ಎದುರಾಳಿಯನ್ನು ಪರಾಭವಗೊಳಿಸುವೆ’ ಎಂದು ಗುಣೇಶ್ವರನ್ ತಿಳಿಸಿದರು. ಈ ಟೂರ್ನಿಯಲ್ಲಿ ಗುಣೇಶ್ವರನ್ ಉತ್ತಮ ಆಟವಾಡುವ ಮೂಲಕ ಜಯ ಸಾಧಿಸಿ ಪ್ರಶಸ್ತಿ ಜಯಿಸಿದರೆ, ಎಟಿಪಿ ರಾಂಕಿಂಗ್ ನ ಅಗ್ರ 100ರಲ್ಲಿ ಸ್ಥಾನ ಪಡೆಯಲಿದ್ದಾರೆ. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಸಿಕುಮಾರ್ ಮುಕುಂದ್ ಇಂಗ್ಲೆೆಂಡ್‌ನ ಜಯ್ ಕ್ಲಾರ್ಕೆ ಅವರನ್ನು 5-7, 6-4, 6-1 ಅಂತರಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿ ಕ್ವಾರ್ಟರ್ ಪ್ರವೇಶಿಸಿದರು. ಅರ್ಜುನ್ ಖಾಡೆ ದ್ವಿತೀಯ ಸುತ್ತಿನಲ್ಲಿ ಬ್ರೆೆಡನ್ ಸ್ಚೂನುರ್ ಎದುರು 5-7, 2-6 ನೇರಸೆಟ್‌ಗಳಿಂದ ಮಣಿದು ಟೂರ್ನಿಯಿಂದ ಹೊರನಡೆದರು.
ರಾಮಕುಮಾರ್ ರಾಮನಾಥನ್ ಮತ್ತು ವಿಜಯ್ ಸುಂದರ್ ಪ್ರಶಾಂತ್ ಜೋಡಿ, ಕುನಾಲ್ ಆನಂದ್ ಮತ್ತು ಶಹಬಾಜ್ ಖಾನ್ ಜೋಡಿ ಡಬಲ್ಸ್  ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಯಶಸ್ವಿ ಹೋರಾಟ ನಡೆಸುವಲ್ಲಿ ಸಫಲವಾಗಿ ನಾಲ್ಕರ ಘಟ್ಟಕ್ಕೆೆ ಅರ್ಹತೆ ಪಡೆದವು.

Related Articles